Featured, ಅಂಕಣ, ಸ್ಥಳೀಯ

ಎಸ್ಸೆಸ್ಸೆಫ್ ಸಂಪ್ಯ ಯುನಿಟ್ ವತಿಯಿಂದ ಮಾಸಿಕ ಝುಮ್ರ ತರಗತಿ

ಪುತ್ತೂರು: ಎಸ್ಸೆಸ್ಸೆಫ್ ಸಂಪ್ಯ ಯುನಿಟ್ ವತಿಯಿಂದ ಮಾಸಿಕ ಝುಮ್ರ ತರಗತಿಯು ಮಾರ್ಚ್ 23 ರಂದು ಎಸ್ಸೆಸ್ಸೆಫ್ ಕಛೇರಿಯಲ್ಲಿ ನಡೆಯಿತು.

ಕೆಎಂಜೆ ಸಂಪ್ಯ ಯುನಿಟ್ ಅಧ್ಯಕ್ಷರಾದ ರಝಾಕ್ ವಾಗ್ಳೆಯವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮವನ್ನು ರಶೀದ್ ಮದನಿ ದುಆ ಮೂಲಕ ಚಾಲನೆ ನೀಡಿದರು. ಕಾರ್ಯಕ್ರಮವನ್ನು ಯುನಿಟ್ ಅಧ್ಯಕ್ಷರಾದ ಬಿ.ಕೆ.ಕಾಮಿಲ್ ಮದನಿ ಉದ್ಘಾಟಿಸಿದರು.

ಎಸ್ ವೈ ಎಸ್ ಸಂಪ್ಯ ಯುನಿಟ್ ದಅವಾ ಕಾರ್ಯದರ್ಶಿಯಾದ ಅಬ್ದುಲ್ ರಶೀದ್ ಮದನಿ ಉಸ್ತಾದರು ವಿದ್ಯಾರ್ಥಿಗಳಿಗೆ ಮನಮುಟ್ಟುವ ಶೈಲಿಯಲ್ಲಿ ತರಗತಿ ನಡೆಸಿಕೊಟ್ಟರು.

ಬಳಿಕ ಎಸ್ಸೆಸ್ಸೆಫ್ ಹಾಗೂ ರೈನ್ಬೋ ಮಕ್ಕಳಿಗೆ ಕ್ವಿಝ್ ಸ್ಪರ್ಧಾ ಕಾರ್ಯಕ್ರಮವು ನಡೆಯಿತು.

m

ವೇದಿಕೆಯಲ್ಲಿ ಕೆಎಂಜೆ ನಾಯಕರಾದ ರಝಾಕ್ ಸಂಟ್ಯಾರ್, ಎಸ್ ವೈ ಎಸ್ ನಾಯಕರಾದ ಅಬ್ಬಾಸ್ ಮದನಿ‌ ಮಜಲ್, ಶರೀಫ್ ಎಸ್ ಮುಂತಾದವರು ಉಪಸ್ಥಿತರಿದ್ದರು.

ಯುನಿಟ್ ಕಾರ್ಯದರ್ಶಿ ಝುಬೈರ್ ಕುಂಬ್ರ ಸ್ವಾಗತಿಸಿ, ಕೋಶಾಧಿಕಾರಿ ಬಿ.ಕೆ.ಸ್ವಾದಿಕ್ ಅಲಿ ವಂದಿಸಿದರು.

ವರದಿ: ಬಿಕೆಎಸ್ಎ ಸಂಪ್ಯ

Related Posts