ಭಾರತವು ಒಂದು ಪ್ರಜಾಸತ್ತಾತ್ಮಕ, ಜಾತ್ಯತೀತ ಸಮಾಜವಾದಿ ಎಲ್ಲಕ್ಕಿಂತ ಮಿಗಿಲಾಗಿ ಸಾರ್ವಭೌಮ ರಾಷ್ಟ್ರವಾಗಿದೆ.ಭಾರತದ ಸ್ವಾತಂತ್ರ್ಯಕ್ಕಾಗಿ ಹಲವಾರು ಹೋರಾಟಗಳು,ಚಳುವಳಿಗಳು ನಡೆದಿದೆ.ಅದರ ಫಲವಾಗಿ ಇಂದು ನಾವು ಇಲ್ಲಿ ಸುಂದರವಾಗಿ ಜೀವಿಸುತ್ತಿದ್ದೇವೆ. ಅಲ್ಲದೆ ಭಾರತಕ್ಕೆ ಡಾ.ಬಿ.ಆರ್. ಅಂಬೇಡ್ಕರ್ ಅವರು ರಚಿಸಿದ ಸುಂದರವಾದ ಸಂವಿಧಾನವು ಈ ದೇಶದ ಗರಿಮೆಯನ್ನು ಮತ್ತಷ್ಟು ಹೆಚ್ಚಿಸಿದೆ.
ಪ್ರಸ್ತುತ ಕೆಲವು ವರ್ಷಗಳಿಂದ ರಾಜಕೀಯ ಬೇಳೆ ಬೇಯಿಸುವುದಕ್ಕಾಗಿ,ಮತ ಬ್ಯಾಂಕಿಗಾಗಿ ,ಒಂದು ನಿರ್ದಿಷ್ಟ ಸಮುದಾಯದ ಓಲೈಕೆಗಾಗಿ ಫ್ಯಾಸಿಸ್ಟ್ ಸಿದ್ಧಾಂತವನ್ನು ಹೊಂದಿರುವ ಕೇಂದ್ರ ಸರ್ಕಾರವು ಈ ಸುಂದರ ಸಂವಿದಾನವನ್ನು ತಮಗೆ ಬೇಕಾದ ರೀತಿಯಲ್ಲಿ ತಿದ್ದುಪಡಿ ಮಾಡುತ್ತಾ ಬರುತ್ತಿದ್ದಾರೆ.ತಿದ್ದುಪಡಿ ಬೇಕು ಆದರೆ ಈ ತಿದ್ದುಪಡಿಯಲ್ಲಿ ಒಂದು ನಿರ್ದಿಷ್ಟ ಸಮುದಾಯದ ಮೇಲೆ ಗುರಿಯಾಗಿಸಿ ತಿದ್ದುಪಡಿ ಮಾಡುವುದರ ಉದ್ದೇಶವಾದರೂ ಏನು?ಹಲವಾರು ನೂತನ ಕಾನೂನು ತರುವುದು, ಮಸೂದೆಗಳ ತಿದ್ದುಪಡಿ, ಮೀಸಲಾತಿಗಳ ಮೊಡಕುಗಳು,ತ್ರಿವಳಿ ತಲಾಖ್, ಮುಂತಾದವುಗಳು ಅವುಗಳಲ್ಲಿ ಕೆಲವೊಂದು ಮಾತ್ರ.
ಪ್ರಸ್ತುತ ನಡೆಯುತ್ತಿರುವ ವಕ್ಫ್ ಕುರಿತ ತಿದ್ದುಪಡಿ ಬಾರಿ ವಿರೋಧದ ನಡುವೆಯೂ ರಾಷ್ಟ್ರಪತಿ ಅವರ ಅಂಕಿತೊಂದಿಗೆ ಕಾಯ್ದೆಯಾಗಿ ಮಾರ್ಪಾಡಲು ನಿಂತಿದೆ .
ವಕ್ಫ್ ಆಸ್ತಿ ಎಂದರೆ ಮುಸಲ್ಮಾನರಿಗೆ ಸೇರಿದ ಒಂದು ಸ್ವತಾಗಿದೆ.ದೇವರ ಹೆಸರಿನಲ್ಲಿ ವಿಧವೆಯರಿಗೆ,ಅನಾಥರಿಗೆ, ಅನಾಥ ಮಂದಿರಗಳಿಗೆ, ಶೈಕ್ಷಣಿಕ ಸಂಸ್ಥೆಗಳಿಗೆ, ಸಮರ್ಪಿಸುವ ಭೂಸ್ಪತ್ತಾಗಿದೆ. ಇದಕ್ಕೆ ತನ್ನದೇ ಆದಂತಹ ಹಲವಾರು ನಿಬಂಧನೆಗಳು ಮತ್ತು ಅನುಬಂಧ ವಿಷಯಗಳಿವೆ. ಸಂವಿಧಾನದ 25 ನೇ ವಿಧಿಯ ಅನ್ವಯ ದೇಶದ ಪ್ರತಿಯೊಬ್ಬ ಪೌರನು ತನ್ನ ಆತ್ಮಸಾಕ್ಷಿಗೆ ಅನುಗುಣವಾಗಿ ತನಗೆ ಸರಿ ಎನಿಸುವ ಧರ್ಮವನ್ನು ಅನುಸರಿಸುವ, ಪ್ರಚಾರ ಮಾಡುವ ಸ್ವತಂತ್ರಕ್ಕೆ ಅವಕಾಶವನ್ನು ನೀಡಿದೆ.
1954ರಲ್ಲಿ ಸ್ವತಂತ್ರ ಭಾರತದಲ್ಲಿ ವಕ್ಫ್ ಆಸ್ತಿಯನ್ನು ಸಂರಕ್ಷಿಸಲು ಮತ್ತು ನಿಯಂತ್ರಿಸಬೇಕಾಗಿ ಮೊಟ್ಟಮೊದಲ ಒಂದು ಬಾರಿಗೆ ಮಸೂದೆಯನ್ನು ಜಾರಿಗೆ ತಂದರು. ಇದರ ತರುವಾಯ ರಾಜ್ಯದಲ್ಲಿ ವಕ್ಫ್ ಆಸ್ತಿಯನ್ನು ಸಂರಕ್ಷಿಸಲುಬೇಕಾಗಿ ರಾಜ್ಯದಲ್ಲಿ ರಾಜ್ಯ ವಕ್ಫ್ ಮಂಡಳಿ,ಕೇಂದ್ರದಲ್ಲಿ ಕೇಂದ್ರ ವಕ್ಫ್ ಕೌನ್ಸಿಲ್ ಸ್ಥಾಪನೆ ಮಾಡಲಾಯಿತು.ಈ ವೇಳೆ ಈ ಮಂಡಳಿಗಳು ಇಸ್ಲಾಮಿನ ಚೌಕಟ್ಟಿನೊಂದಿಗೆ ಸಂವಿಧಾನದ ವಿಧಿಗಳ ಅನುಸಾರ ಕಾರ್ಯ ನಿರ್ವಹಿಸುತ್ತಿತ್ತು. 1995 ರಲ್ಲಿ ಮತ್ತೊಂದು ಮಸೂದೆ ಪಾಸ್ ಮಾಡಿದರು. ಈ ಮಸೂದೆಯ ಪ್ರಕಾರ ಮಂಡಳಿಗೆ ವಕ್ಫ್ ಆಸ್ತಿಯ ಮೇಲಿನ ಅಧಿಕಾರವನ್ನು ಮತ್ತಷ್ಟು ಹೆಚ್ಚು ಮಾಡಲಾಯಿತು.ಈ ಮಸೂದೆಯು ಕೆಲವು ವರ್ಷಗಳ ಕಾಲ ಚಾಲ್ತಿಯಲ್ಲಿತ್ತು.
ನಂತರ 2013ರಲ್ಲಿ ಈ ಮಸೂದೆ ತಿದ್ದುಪಡಿ ಮಾಡಿದರು.
ನಂತರ ಹೊಸದೊಂದು ಮಸೂದೆಯನ್ನು ತಂದು ಕೇಂದ್ರ ಸರ್ಕಾರವು ತನಗೆ ಬೇಕಾದ ರೀತಿಯಲ್ಲಿ ಕಾನೂನು ಜಾರಿಗೆ ತರಲು ಹೊರಟಿದ್ದಾರೆ.
ಈ ನೂತನ ತಿದ್ದುಪಡಿಯಲ್ಲಿ ಸುಮಾರು 35ಕ್ಕೆ ಹೆಚ್ಚು ವಕ್ಫ್ ಇಲಾಖೆಗಳಲ್ಲಿ ಸರ್ಕಾರ ತಿದ್ದುಪಡಿ ಮಾಡಲು ಹೊರಟಿವೆ.ಮುಖ್ಯವಾಗಿ ಸಂವಿಧಾನದ ಸೆಕ್ಷನ್ 3 ಐ ತಿದ್ದುಪಡಿಯ ಪ್ರಕಾರ ಭೂಮಿಯನ್ನು ವಕ್ಫ್ ಮಾಡಲು
ಇಸ್ಲಾಂ ನಿಯಮದಂತೆ ಕೇವಲ ಮಾತಿನ (ಈಜಾಬ್- ಕಬೂಲ್) ಸಮ್ಮತಿ ಸಾಕಾಗುತ್ತಿತ್ತು.ಆದರೆ ನೂತನ ನಿಯಮದಂತೆ ವಕ್ಫ್ ಮಾಡುವ ಭೂಮಿಗೆ ಅದರ ಎಲ್ಲಾ ನಿರ್ದಿಷ್ಟವಾದ ಭೂ ದಾಖಲೆಗಳು ಮತ್ತು ಹಲವಾರು ಕಾರ್ಯವಿಧಾನವನ್ನು ಈ ಬಿಲ್ಲು ಒಳಗೊಂಡಿರಲಿದೆ.
ಮತ್ತೊಂದು ವಿಚಿತ್ರ ಮತ್ತು ಅಸಂಬಂದ್ದವಾದ ಕಾನೂನು ಏನೆಂದರೆ ಭೂಮಿ ವಕ್ಫ್ ಮಾಡುವವನು ಕನಿಷ್ಠ 5 ವರ್ಷಗಳ ಕಾಲ ಇಸ್ಲಾಂ ಧರ್ಮ ವಿಶ್ವಾಸ ಇರಬೇಕು.ಯಾವುದೇ ವೇಷವಿಧಾನ ಅಥವಾ ತಲೆಗೆ ತೊಪ್ಪಿ ಧರಿಸಿದ ಕೂಡಲೇ ಯಾರೊಬ್ಬರೂ ಕೂಡ ಮುಸ್ಲಿಂ ಆಗುವುದಿಲ್ಲ.ಆಗಿದ್ದರೆ ಹಲವಾರು ರಾಜಕೀಯ ನಾಯಕರು ಇವತ್ತು ಮುಸ್ಲೀಮರಾಗಬೇಕಿತ್ತು.ಮಾತ್ರವಲ್ಲ ವಕ್ಫ್ ಮಾಡುವವನನ್ನು ಯಾವ ರೀತಿಯಲ್ಲಿ ನೀವು ಮುಸ್ಲಿಂ ಮತ್ತು ಮುಸ್ಲಿಮೇತರ ಎಂದು ಪರೀಕ್ಷಿಸುತೀರಿ.ವಕ್ಫ್ ಪೂರ್ಣ ನಿಯಂತ್ರಣ ಮತ್ತು ಸ್ವತ್ತು ನಿಯಂತ್ರಣ ಸಹ ಕೇಂದ್ರ ಸರ್ಕಾರ ಮಾಡುವ ಒಂದು ಕಾನೂನು ಬರಲಿದೆ.
ಮತ್ತೊಂದು ತಿದ್ದುಪಡಿ ಎಂದರೆ ಒಂದು ಭೂಮಿಯ ವಕ್ಫಿನ ಕುರಿತು ವಿವಾದವಿದ್ದರೆ ಅದನ್ನು ಯಾರಿಗೆ ಸೇರಿದ ಭೂಮಿ ಎಂದು ನಿರ್ಧರಿಸುವ ಅಧಿಕಾರ ಆಯಾ ಜಿಲ್ಲೆಯ ಜಿಲ್ಲಾಧಿಕಾರಿಗಳ ಅಧೀನಕ್ಕೆ ಬರಲಿದೆ.ಅಲ್ಲದೆ ಇಷ್ಟರವರೆಗೆ ಚುನಾವಣೆಯ ಮೂಲಕ ಆಯ್ಕೆ ಆಗುತ್ತಿದ್ದ ಸದಸ್ಯರನ್ನು ಕೇಂದ್ರ ಸರ್ಕಾರವೇ ನೇರ ಹೆಸರು ನೇಮಕಾತಿ ಮಾಡುವ ಮೂಲಕ ಆಯ್ಕೆ ಮಾಡಲಾಗುತ್ತದೆ. ಇದರಲ್ಲಿ ಮುಸ್ಲಿಂಯೇತರನ್ನು ಕೂಡ ಸೇರಿಸಬಹುದಾದ ಕಾನೂನು ಬರಲಿದೆ.
ಹೀಗೆ ಹಲವಾರು ಬದಲಾವಣೆಗಳು ಮಾಡಲು ಕೇಂದ್ರ ಸರ್ಕಾರ ಸಿದ್ಧತೆ ನಡೆಸಿದ್ದಾರೆ.ಇದು ಸಂವಿಧಾನದ 25ನೇ ವಿಧಿಯ ಅಂದರೆ ಧಾರ್ಮಿಕ ಸ್ವಾತಂತ್ರ್ಯ ಹಕ್ಕಿಗೆ ವಿರುದ್ಧವಾಗಿದೆ ಎಂಬುದರಲ್ಲಿ ಎರಡು ಮಾತಿಲ್ಲ .
ಹಲವಾರು ಮುಸ್ಲಿಂ ಸಂಘಟನೆಗಳು ಸರ್ವೋಚ್ಚ ನ್ಯಾಯಾಲಯ ಮೊರೆ ಹೋಗಿದ್ದು, ನ್ಯಾಯಾಲಯವು ಹಿಂದೂ ದೇವಸ್ಥಾನದ ಮಂಡಳಿಗಳಲ್ಲಿ ನೀವು ಮುಸ್ಲಿಮರನ್ನು ನೇಮಕ ಮಾಡುತ್ತೀರಾ? ಎಂದು ಖಾರವಾಗಿ ಪ್ರಶ್ನಿಸಿದ್ದು ಮಾತ್ರವಲ್ಲದೆ, ಮುಂದಿನ ವಾದದವರೆಗೆ ಹಳೆಯ ನಿಯಮವನ್ನು ಮುಂದುವರಿಸಬೇಕಾಗಿ ಕೇಂದ್ರಕ್ಕೆ ಸುಪ್ರೀಂ ಆದೇಶ ನೀಡಿದೆ. ಇದು ನಿಜಕ್ಕೂ ಪ್ರಜಾಸತ್ತಾತ್ಮಕ ದೊರೆಯಲ್ಲಿರುವ ಜಯದ ಸಂಕೇತವಾಗಿದೆ.
ಇದರ ವಿರುದ್ಧ ಅನೇಕ ಮುಸ್ಲಿಂ ಸಂಘಟನೆಗಳು ಬೀದಿಗಿಳಿದು ಹೋರಾಟ ಮಾಡುತ್ತಿದ್ದಾರೆ .ಇತ್ತೀಚಿಗೆ ಹೈದರಾಬಾದಿನ ದಾರುಸಲಾಂನಲ್ಲಿ, ಕೇರಳದ ಕ್ಯಾಲಿಕೆಟ್ ನಲ್ಲಿ ,ಉತ್ತರ ಪ್ರದೇಶದ ಲಖನೌದಲ್ಲಿ, ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ಅಡ್ಯಾರ್ ಕನ್ನೂರು,ಕೊಡಗಿನ ಮಡಿಕೇರಿಯಲ್ಲಿ ಮುಂತಾದ ಪ್ರದೇಶದಲ್ಲಿ ನಡೆದ ಹೋರಾಟ ಪ್ರತಿಭಟನೆ ದೇಶದಲ್ಲಿ ಸಂಚಲನವನ್ನು ಸೃಷ್ಟಿ ಮಾಡಿದೆ.ಇದರ ಹಿಂದೆ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ (Muslim personal law board) ನಿರಂತರ ದೇಶಾದ್ಯಂತ ಹೋರಾಟ ಮತ್ತು ಚಳುವಳಿಗಳನ್ನು ಮಾಡುತ್ತ ಬರುತ್ತಿದ್ದಾರೆ. ಸುಮಾರು ಲಕ್ಷಾಂತರ ಎಕರೆ ಭೂಮಿಯನ್ನು ತಮಗೆ ಬೇಕಾದವರಿಗೆ ಮಾರಾಟ ಮಾಡಲು ಬೇಕಾಗಿ ಕೇಂದ್ರ ಸರ್ಕಾರವು ಮಾಡುವಂತಹ ಒಂದು ಘೋರವಾದ ಷಡ್ಯಂತರವಾಗಿದೆ ಇದರ ಹಿಂದೆ ಇರುವುದು.
ಇಂದು ಇವರ ಗುರಿ ಮುಸ್ಲಿಮರ ಭೂಮಿಯಾಗಿದೆ.
ಆದರೆ ಮತ್ತೊಂದು ದಿನ ಹಿಂದೂ ದೇವಸ್ಥಾನದ ಭೂಮಿಗಳು,ಸಂಸ್ಥೆಗಳು,ಮಠ ಹಾಗೆಯೇ ಕ್ರೈಸ್ತ ಧರ್ಮದ ಚರ್ಚ್ ಗಳು, ಧರ್ಮ ಶಾಲೆಗಳು ಮತ್ತು ಇತರ ಧರ್ಮಗಳ ಭೂಮಿಗಳನ್ನು ಕೂಡ ಕಬಳಿಸುವಂತಹ ನೀತಿ ಬರುವುದರಲ್ಲಿ ಯಾವುದೇ ಸಂದೇಹವಿಲ್ಲ. ಆದುದರಿಂದ ಈ ದೇಶದ ಅಖಂಡತೆಯನ್ನು ಕಾಪಾಡುತ್ತಾ ,ಜನ ವಿರೋಧಿ ನೀತಿಗಳ ಕುರಿತು ಒಗ್ಗಟ್ಟಾಗಿ ಹೋರಾಟವನ್ನು ಕೈಗೊಳ್ಳೋಣ…
ಬರಹ:ಆಶಿಕ್ ಕೊಡಗು(ವಿದ್ಯಾರ್ಥಿ, ಶಂ.ಉ.ಅ.ಕಾಲೇಜು , ತೋಡಾರು)