Featured, ಅಂಕಣ, ಸ್ಥಳೀಯ

ಸುಂದರ ಬಾಲ್ಯ ಬೆಲೆ ಕಟ್ಟಲಾಗದ ಮೌಲ್ಯ

ಎಲ್ಲರ ಜೀವನದಲ್ಲೂ ಮರೆಯಲಾಗದಂತ ಘಳಿಗೆ ಒಂದಿದ್ದರೆ ನಮ್ಮ ಆ ಬಾಲ್ಯ, ಹಲವು ನೆನಪುಗಳು ಖುಷಿಗಳು ಮತ್ತೆ ಸಿಗಬಹುದೇ ಎಂದು ಅನಿಸುತ್ತೆ, ಆದರೆ ಅದು ಸಿಗಲ್ಲವಾದರು ಅದನ್ನ ಮರೆಯೋಕಂತೂ ಯಾರಿಂದಾನೂ ಸಾಧ್ಯವಿಲ್ಲ,

ಆ ಬಾಲ್ಯದಲ್ಲಿ ಸಿಕ್ಕಿರುವ‌ ಖುಷಿಗಳು ಎಲ್ಲೂ ಸಿಕ್ಕಿಲ್ಲ ಸಿಗೋದೂ ಇಲ್ಲ ಯಾಕೆಂದರೆ ಅಲ್ಲಿ ಯಾವುದೇ ಜಾತಿ ಇಲ್ಲ ಮತ ಇಲ್ಲ ಯಾವುದೇ ಭೇದಭಾವಗಳಿರಲಿಲ್ಲ , ಗೆಳೆಯ ಗೆಳತಿಯರೊಡನೆ ಪರಸ್ಪರ ಹಂಚಿ ತಿನ್ನುವ ಆ ಕಾಲ, ಆ ಕಾಲದಲ್ಲಿ ದುಡ್ಡು ಆಸ್ತಿ ಅಂತಸ್ತು ಜಾತಿ ಇವೆಲ್ಲವೂ ನಮ್ಮ ಹತ್ತಿರ ಕೂಡಾ ಬಂದಿಲ್ಲ ಯಾಕೆಂದರೆ ಅಲ್ಲಿ ನಾವು ಕಲಿತಿರುವುದು ಪ್ರೀತಿಸೋಕೆ ಹೊರತು ಧ್ವೇಷಿಸೋಕೆ ಅಲ್ಲ ಅದುವೇ ನಮ್ಮ ಸುಂದರ ಬಾಲ್ಯ, 

ಬೆಳಿಗ್ಗೆ ಎದ್ದು ಅಮ್ಮ ಮಾಡಿರುವ ರುಚಿ ರುಚಿಯಾದ ಬಿಸಿ ಬಿಸಿ ದೋಸೆ ತಿಂದು ಅಜ್ಜಿಯ ಕೈಯಿಂದ ಎರಡು ರೂಪಾಯಿ ತಗೊಂಡು ಶಾಲೆಗೆ ಹೋಗುವ ಆ ಕ್ಷಣಗಳು, ಅದರಲ್ಲಿ ಒಂದು ರೂಪಾಯಿ ಎಲ್ಲಾದರೂ ಬಿದ್ದರೆ ಅದನ್ನ ಗೆಳೆಯರೊಡನೇ ಇಡೀ ದಿನವೇ ಹುಡುಕಿದ ಆ ಸಮಯಗಳು ಮರಳಿ ಬರದಂತ ಆ ಬಾಲ್ಯ ,

ಶಾಲೆಗೆ ತಲುಪಿದಾಗ ಗೆಳೆಯ ಗಳತಿಯರನ್ನ ಕಂಡ ಸಂತಸ ಹಾಗೂ ಟೀಚರ್ಸ್ ಗಳಿಗೆ ನಾವು ಕೊಡುವ ಗೌರವಗಳು ಅದೇ ತರ ಟೀಚರ್ಸ್ ಗಳಿಂದ ನಮಗೆ ಸಿಗುವ ಬಿಸಿ ಬಿಸಿ ಪೆಟ್ಟುಗಳು, ಟೀಚರ್ಸ್ ಗಳು ಹೊರಗೆ ಹೋದಾಗ ಪೆನ್ ಗಳಲ್ಲಿ ಆಡಿದ ಆಟಗಳು,ಆ ಸಮಯದಲ್ಲಿ ಕೈ ಗೆ ಏನು ಸಿಗುತ್ತೆ ಅದರಲ್ಲಿ ಏನಾದರೂ ಒಂದು ಆಟವನ್ನು ರೆಡಿ ಮಾಡಿ ಆಡುವ ಸಮಯಗಳು, 

ಆಟದ ಸಮಯದಲ್ಲಿ ಆಗಿರುವ ನೋವುಗಳು ಜಗಳಗಳು ಎಲ್ಲವೂ ತಾತ್ಕಾಲಿಕವಾಗಿದ್ದವೂ, ಗೆದ್ದಾಗ ಸಂಭ್ರಮಿಸುವ ಕ್ಷಣಗಳು ಸೋತಾಗ ನಾಳೆ ಗೆಲ್ಲುತ್ತೇವೆ ಎಂಬ ನಂಬಿಕೆಗಳು,

ಹಬ್ಬಗಳು ಬಂದಾಗ ಯಾವ ಹಬ್ಬವಾದರೂ ಯಾವುದೇ ಭೇದಭಾವಗಳಿಲ್ಲದೇ ತಿಂಡಿ ತಿನಿಸುಗಳನ್ನು ಹಂಚಿ ತಿಂದು ಸಂತೋಷವಾಗಿದ್ದ ಆ ಸನ್ನಿವೇಶಗಳು ನಮ್ಮ ಜೀವನದಲ್ಲಿ ಇದೆಲ್ಲವೂ ಮರೆಯಾದ ಬಾಲ್ಯದ ನೆನಪುಗಳು,

ಕೆಲವೊಂದು ಸಲ ಅನಿಸುತ್ತೆ ಯಾಕೆ ದೊಡ್ಡವರಾದ್ವಿ ಆ ಬಾಲ್ಯದಲ್ಲೇ ಇದ್ದಿದ್ದರೆ ಎಷ್ಟು ಚೆಂದಾ ಅಲ್ವಾ ಅಲ್ಲಿ ಜಗಳಗಳಿದ್ದರೂ ಧ್ವೇಷಗಳಿಲ್ಲ ಯಾವುದೇ ಒತ್ತಡಗಳಿಲ್ಲ ಒಂದೇ ತಾಯಿಯ ಮಕ್ಕಳು ಎಂಬ ಭಾವನೆ ಇತ್ತು ,

ಆ ಸುಂದರವಾದ ಬಾಲ್ಯವನ್ನು ನೆನಪಿಸುವಾಗನೇ ಕಣ್ಣಂಚಿನಲ್ಲಿ ನೀರು ತುಂಬಿಕೊಳ್ಳುತ್ತೆ.

ನಾವೆಲ್ಲಾದರೂ ಪ್ರಯಾಣ ಮಾಡೋವಾಗ ಯಾವುದೇ ಶಾಲಾ ವಠಾರವನ್ನು ನೋಡಿದರೆ ಸಾಕು ಬಾಲ್ಯದ ಎಲ್ಲಾ ಕ್ಷಣಗಳು ನೆನಪಾಗುತ್ತೆ,

ಅಂತಹ ಸುಂದರ ಬಾಲ್ಯವನ್ನು ನಾವು ಮರೆತರೂ ಆ ಬಾಲ್ಯ ನಮ್ಮನ್ನು ಮರೆಯಲ್ಲ ಎಲ್ಲಿ ಹೋದರು ನೆನಪಿಗೆ ಬರೋ ಶಕ್ತಿ ಆ ಸುಂದರ ಬಾಲ್ಯಕ್ಕಿದೆ ,

ಯಾವುದೇ ಭಿನ್ನಾಭಿಪ್ರಾಯಗಳಿಲ್ಲದೇ ಒಗ್ಗಟ್ಟಿಂದ ಪ್ರೀತಿಯಿಂದ ಸಮಯ ಕಳೆಯುತ್ತಿದ್ದ ಆ ನಮ್ಮ ಬಾಲ್ಯದ ನೆನಪು ಎಂದೆಂದಿಗೂ ಎಲ್ಲರ ಮನಸ್ಸಲ್ಲಿ ಉಳಿದಿದೆ .

ಆ ಬಾಲ್ಯ ಮರಳಿ ಬರಲ್ಲವಾದರೂ ಆ ಸುಂದರ ಬಾಲ್ಯದಂತೇ ಬದುಕೋಣಾ ಬದುಕು ಬದಲಾಗಿರಬಹುದು ಆದರೆ ಆ ಬಾಲ್ಯದಲ್ಲಿದ್ದ ನಮ್ಮ ಆ ವ್ಯಕ್ತಿತ್ವ ಮನುಷ್ಯತ್ವ ಗೌರವ ಒಳ್ಳೆಯ ಮನಸ್ಸು ಇದೆಲ್ಲವೂ ನಮ್ಮೊಡನೆ ಇರಲೀ……

 ಜಾತಿ ಬೇಡಾ ಪ್ರೀತಿ ಸಾಕು,  ಧ್ವೇಷ ಬೇಡಾ ಮನ್ನಿಸೋ ಮನಸು ಸಾಕು

ಬಾಲ್ಯದ ಆಟಗಳು_ ಜೀವನದ ಪಾಠಗಳು

✍🏻 ಸಿನಾನ್ ಬಾರಿಕ್ಕಾಡ್

 

Related Posts