2007ರ ಟಿ -20ವಿಶ್ವಕಪ್ ಗೆದ್ದ ಮೇಲೆ ಭಾರತ ಕ್ರಿಕೆಟ್ ನಲ್ಲಿ ಹೊಸ ಇತಿಹಾಸಕ್ಕೆ ಸಾಕ್ಷಿಯಾಯಿತು ಅದರ ಪರಿಣಾಮವಾಗಿ ಕ್ಲಬ್ ಮಾದರಿಯ ಟಿ – 20 ಲೀಗ್ ಐಪಿಎಲ್ ಕೂಡ ಉದಯವಾಯಿತು.
ಭಾರತೀಯ ಕ್ರಿಕೆಟ್ ಗೆ ಉದಾಯೋನ್ಮುಖ ಪ್ರತಿಭೆಗಳಿಗೆ ಬಾಗಿಲು ತೆರೆಯಿತು.
ಆದರೆ ಭಾರತೀಯ ಕ್ರಿಕೆಟ್ ದಿಗ್ಗಜರ ಪಾಲಿಗೆ ಇದು ದೊಡ್ಡ ಪರಿಣಾಮ ಬೀರಿತ್ತು ಎಂದರೆ ತಪ್ಪಾಗಲಾರದು 2007 ರ ನಂತರ ಭಾರತೀಯ ಕ್ರಿಕೆಟ್ ದಿಗ್ಗಜರ ಪೈಕಿ ಸಚಿನ್ ತೆಂಡೂಲ್ಕರ್ ಹಾಗೂ ಆಶೀಶ್ ನೆಹ್ರ ಹೊರತು ಬೇರೆ ಯಾವ ದಿಗ್ಗಜರ ಆಟಗಾರರಿಗೆ ವಿದಾಯ ಪಂದ್ಯಾಟ ಆಡಲು ಅವಕಾಶ ಸಿಕ್ಕಿಲ್ಲ ಎಂದರೆ ನಂಬಲೇಬೇಕು ಅದಕ್ಕೆ ಒಂದು ಅವಕಾಶ ಒದಗಿಸಲು ಬಿ ಸಿ ಸಿ ಐ ಕೂಡ ಆಸಕ್ತಿ ವಹಿಸಿಲ್ಲ ಎಂಬದನ್ನು ನೀವು ನಂಬಲೇಬೇಕು
ದಿ ವಾಲ್ ಖ್ಯಾತಿಯ ರಾಹುಲ್ ದ್ರಾವಿಡ್ , ಟೆಸ್ಟ್ ಸ್ಪೆಷಲಿಸ್ಟ್ ವಿ ವಿ ಎಸ್ ಲಕ್ಷ್ಮಣ್, ಹೊಡೆ ಬಡಿ ಬ್ಯಾಟ್ಸಮನ್ ವಿರೇಂದ್ರ ಸೆಹ್ವಾಗ್, ಪೇಸರ್ ಜಹೀರ್ ಖಾನ್, ಭಾರತದ ಎರಡು ವಿಶ್ವಕಪ್ ಫೈನಲ್ ಹೀರೋ ಪ್ರಸ್ತುತ ತಂಡದ ಹೆಡ್ ಕೋಚ್ ಗಂಭೀರ್, 2011 ವಿಶ್ವಕಪ್ ಹೀರೋ ಯುವರಾಜ್, ಐ ಸಿ ಸಿ ಯ ಎಲ್ಲಾ ಫಾರ್ಮ್ಯಾಟ್ ಕಪ್ ಜಯಿಸಿದ ಇತಿಹಾಸ ನಾಯಕ ಎಂ ಎಸ್ ಧೋನಿ, ಐ ಸಿ ಸಿ ಇವೆಂಟ್ ಗಳಲ್ಲಿ ಮಿಂಚುತಿದ್ದ ಶಿಖರ್ ಧವನ್, ಈಗ ಕೊನೆಗೆ ಭಾರತದ ಟೆಸ್ಟ್ ಇತಿಹಾಸದ ಅಗ್ರಗಣ್ಯ ಸ್ಪಿನ್ನರ್ ಆರ್ ಅಶ್ವಿನ್
ಇದರ ಮಧ್ಯೆ ಭಾರತಕ್ಕಾಗಿ ಅಂತರ್ರಾಷ್ಟ್ರೀಯ ಕ್ರಿಕೆಟ್ ನಲ್ಲಿ ಮೂರು ಫಾರ್ಮ್ಯಾಟ್ ನಲ್ಲಿ ಶತಕ ಸಿಡಿಸಿದ ಸುರೇಶ್ ರೈನಾ, ಗೂಟ ರಕ್ಷಕರಾದ ಪಾರ್ಥಿವ್ ಪಟೇಲ್, ದಿನೇಶ್ ಕಾರ್ತಿಕ್,
ಆರ್ ಪಿ ಸಿಂಗ್, ಪ್ರಗ್ಯಾನ್ ಓಜಾ, ಪಠಾಣ್ ಬ್ರದರ್ಸ್ ಇರ್ಫಾನ್ ಮತ್ತು ಯೂಸುಫ್, ಮುನಾಫ್ ಪಟೇಲ್, ಹರ್ಭಜನ್, ಒಂದೇ ವಿಶ್ವಕಪ್ ಸರಣಿಯಲ್ಲೇ ಪಾದರ್ಪಣೆ ಹಾಗೂ ವಿದಾಯ ಹೇಳಿದ ಜೋಗಿಂದರ್ ಶರ್ಮ, ಕನ್ನಡಿಗ ರೋಬಿನ್ ಉತ್ತಪ್ಪ ಈಗೇ ದೊಡ್ಡ ಪಟ್ಟಿಯೇ ಇದೆ.
ಅದರ ಮಧ್ಯೆ ಅವಕಾಶ ದೊರೆಯದೆ ಭಾರತದಲ್ಲಿ ವಿದಾಯ ಹೇಳಿ ಅಮೇರಿಕಾ ತಂಡಕ್ಕೆ ಹಾರಿದ ಉನ್ಮುಕ್ತ್ ಚಂದ್ ಎಂಬಾ ಅಂಡರ್ 19 ನಾಯಕ, ಹೈದೆರಾಬಾದ್ ತಂಡದ ರಣಜಿ ಆಟಗಾರ ಇಬ್ರಾಹಿಂ ಖಲೀಲ್ ನಂಥವರು ಇದ್ದಾರೆ.
2011 ರ ಏಕದಿನ ವಿಶ್ವಕಪ್ ಜಯಿಸಿದ ತಂಡದಲ್ಲಿ ಸಚಿನ್ ತೆಂಡೂಲ್ಕರ್ ಗೆ ಅದ್ದೂರಿ ವಿದಾಯ ದೊರತಿದೆ ಆದರೆ ಉಳಿದ 13 ಮಂದಿ ಆಟಗಾರರಿಗೂ ದೊರೆತಿಲ್ಲ, ವಿರಾಟ್ ಕೊಹ್ಲಿ ಇಲ್ಲಿಯ ವರೆಗೆ ವಿದಾಯ ಕೂಡ ಘೋಷಣೆ ಮಾಡಿಲ್ಲ.
ಭಾರತದ ಕ್ರಿಕೆಟ್ ಇತಿಹಾಸದಲ್ಲಿ ಅನೇಕ ಮೈಲುಗಲ್ಲು ಸೃಷ್ಟಿಸಿದ ಅನೇಕ ಆಟಗಾರರಿಗೆ ಅಂತರ್ರಾಷ್ಟ್ರೀಯ ಕ್ರಿಕೆಟ್ ನಲ್ಲಿ ಒಂದು ಉತ್ತಮ ವಿದಾಯ ಕೂಟ ಪಂದ್ಯಾಟ ಆಡಲು ಅವಕಾಶ ಸಿಕ್ಕದಿರುವುದು ದೊಡ್ಡ ವಿಪರ್ಯಾಸವೇ.
ಉದಾಯೋನ್ಮುಖ ಆಟಗಾರರಿಗಾಗಿ ಹಿರಿಯ ಆಟಗಾರರು ವಿದಾಯ ಹೇಳುವುದು ಎಲ್ಲಾ ಕಾಲಘಟ್ಟದಲ್ಲೂ ಇರುವುದೇ ಆದರೆ ಕೊನೆಯ ಅವಧಿ ಆದಾಗ ಅಂದರೆ 36-38 ವಯಸ್ಸಿನ ಆಸುಪಾಸು, ವಿದೇಶಿ ಪಿಚ್ ಗಳಲ್ಲಿ ವೈಫಲ್ಯ ಹೊಂದುವಾಗ, ಅವಕಾಶ ರಹಿತರಾದಾಗ ಹೀರೋ ಗಳಾಗಿ ಸೃಷ್ಟಿಸಿದ ಮಾಧ್ಯಮಗಳೇ ಇವರನ್ನು ವಿಲನ್ ಗಳಾಗಿ ಮಾಡುವಾಗ, ವಿದಾಯ ಪಂದ್ಯಾಟದ ಯಾವುದೇ ಆಡಂಬರವಿಲ್ಲದೆ ಪ್ರೆಸ್ ಮೀಟ್ ನಲ್ಲಿ ವಿದಾಯ ಘೋಷಣೆ ಮಾಡಿಯೆ ಬಿಡುತ್ತಾರೆ.
ಸೆಕೆಂಡ್ ಗಳಲ್ಲಿ ವಿಲನ್ ಗಳನ್ನಾಗಿ ಮಾಡಿದ ಮಾಧ್ಯಮಗಳೇ ಮತ್ತೆ ಇವರ ಹಳೆಯ ಸಾಧನೆಯನ್ನು ಮೆಲುಕುಹಾಕುತ್ತದೆ.
ಸೌರವ್ ಗಂಗೂಲಿ ಹಾಗೂ ಅನಿಲ್ ಕುಂಬ್ಳೆ ಸರಣಿಯ ಮಧ್ಯದಲ್ಲೇ ವಿದಾಯ ಘೋಷಣೆ ಮಾಡಿದ್ದರಿಂದ ವಿದಾಯ ಪಂದ್ಯಾಟ ದೊರೆತವರೆಂದು ನಮಗೆ ಹೇಳಬಹುದು.
ಕ್ರಿಕೆಟ್ ಎಂಬುದು ಭಾರತದಲ್ಲಿ ಮನೋರಂಜನೆಯ ಕ್ರೀಡೆ ಗಿಂತ ಇದೊಂದು ಭಾವನಾತ್ಮಕ ವಾದ ಒಂದು ಕ್ರೀಡೆಯೇ ಅನ್ನಬಹುದು.
ಭಾರತದಲ್ಲಿ ಕ್ರಿಕೆಟ್ ನ್ನು ಧರ್ಮವಾಗಿ, ಸಚಿನ್ ತೆಂಡೂಲ್ಕರ್ ನ್ನು ಕ್ರಿಕೆಟ್ ದೇವರು ಎಂದು ಆರಾಧನೆ ಮಾಡುವ ಜನತೆ ಕೂಡ ಇದ್ದಾರೆ.
ಗಲ್ಲಿಯಿಂದ ದಿಲ್ಲಿಯವರೆಗೂ, ಟರ್ಫ್ ನಿಂದ ಪೆರ್ತ್ ವರೆಗೂ ಆಡಿದ ಅನೇಕ ಆಟಗಾರರಿದ್ದರು, ದಿಗ್ಗಜರ ಎಂದೆನಿಸಿಕೊಂಡವರಿಗೆ ವಿದಾಯ ಪಂದ್ಯಾಟ ದೊರಕದಿರುವುದು ಕ್ರಿಕೆಟ್ ಪ್ರೇಮಿಗಳಿಗೆ, ಅಭಿಮಾನಿಗಳಿಗೆ ಬೇಸರದ ಸಂಗತಿ.
ಬರಹ:- ಫಾರೂಖ್ ಕಾನಕ್ಕೋಡ್




m
