ಸಹಪಾಠಿಗಳ ಸಮ್ಮಿಲನ : ಏಳು – ಬೀಳುಗಳ ಅವಲೋಕನ
ಸುಳ್ಯ : ವಿಧ್ಯಾರ್ಥಿ ಜೀವನ ಅವಿಸ್ಮರಣೀಯ
ಜೀವನದೂದ್ದಕ್ಕೂ ಮಾಸದೆ ನೆನಪಿನಲ್ಲಿ ಉಳಿಯುವ ಮರು:ಸೃಷ್ಟಿಯ ಪ್ರತಿಬಿಂಬ ಈಗೆ ಪೂರ್ವಕಾಲದ ವಿಧ್ಯಾರ್ಥಿ ಸಹಪಾಠಿಗಳು ಅನೇಕ ವರ್ಷಗಳ ನಂತರ ಮತ್ತೊಮ್ಮೆ ಶಾಲಾ ಜೀವನದ ನೆನಪಿನೊಂದಿಗೆ ಒಟ್ಟು ಸೇರಲಿದ್ದಾರೆ
ಸುಳ್ಯ ಗಾಂಧಿನಗರ ಸರಕಾರಿ ಶಾಲೆಯಲ್ಲಿ ಕಲಿತ 2004 ರ ಬ್ಯಾಚ್ (ಗುಂಪು) ಪೂರ್ವ ವಿಧ್ಯಾರ್ಥಿಗಳ ಸಮ್ಮಿಲನ ನಡೆಯಲಿದೆ ಮಾತ್ರವಲ್ಲ ದೇಶದ ಮಾಜಿ ರಾಷ್ಟ್ರಪತಿ ದಿವಂಗತ ಅಬ್ದುಲ್ ಕಲಾಮ್ ರವರ ನುಡಿ ಮುತ್ತಿನ ಸಾರಾಂಶದ ಶೀರ್ಷಿಕೆಯಡಿಯಲ್ಲಿ ಕಾರ್ಯಕ್ರಮ ಮೆಲುಕು ಚಿಮ್ಮಲಿದೆ ಎಂದು ಕಾರ್ಯಕ್ರಮದ ಸಂಯೋಜಕರಾದ ಮಶೂದ್ ಗಾಂಧಿನಗರ ಹೇಳಿದ್ದಾರೆ ಈ ರೀತಿಯಲ್ಲಿ ಕಾರ್ಯಕ್ರಮವನ್ನು ವಿವರಿಸಿದ್ದಾರೆ
“ ಒಂದು ಉತ್ತಮ ಪುಸ್ತಕ ನೂರು ಸ್ನೇಹಿತರಿಗೆ ಸಮಾನ, ಆದರೆ ಒಬ್ಬ ಉತ್ತಮ ಸ್ನೇಹಿತ ಒಂದು ಗ್ರಂಥಾಲಯಕ್ಕೆ ಸಮಾನ “. ಎಂಬ ಅಬ್ದುಲ್ ಕಲಾಂ ರವರ ಉತ್ತಮ ಮಾತಿನಂತೆ 2004ರಲ್ಲಿ ನಮ್ಮ ಈ ಒಂದು ಸಹಪಾಠಿಗಳ ಸಂಬಂಧದ ಸಾಗರ ಆರಂಭವಾಯಿತು. ಅ ಸಮಯದಲ್ಲಿ ನಾವು ಮುಗ್ದ ಮನಸ್ಸಿನೊಂದಿಗೆ ಎಲ್ಲರ ಜೊತೆ ಬೆರೆತ ಅ ಒಂದು ಕಾಲವನ್ನು ಮತ್ತೊಮ್ಮೆ 2025ರಲ್ಲಿ ಮತ್ತೆ ನೆನಪು ಮರುಕಳಿಸುವ ಸಂದರ್ಭವನ್ನು ಹಲವಾರು ವರ್ಷಗಳ ನಂತರ ಸವಿ ನೆನಪಿಗಾಗಿ ಸಹಪಾಠಿಗಳ ಸಮ್ಮಿಲನ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ ತಾವೆಲ್ಲರೂ ಪ್ರೀತಿಯಿಂದ ಆಗಮಿಸಿ ಈ ಕಾರ್ಯಕ್ರಮವನ್ನು ಉತ್ತಮ ರೀತಿಯಲ್ಲಿ ನಡೆಸಿಕೊಡಬೇಕು ಹಾಗೂ ತಾವೆಲ್ಲರೂ ಆಸಕ್ತಿಯಿಂದ ಭಾಗವಹಿಸಿ ಯಶಸ್ವಿಗೊಳಿಸಬೇಕಾಗಿ ವಿನಂತಿ. ಬದುಕಿನ ಯಶಸ್ಸು ಮತ್ತು ಸಂತೋಷದ ಅರಿವಾಗುವುದು ಸಹಪಾಠಿಗಳೊಂದಿಗೆ ಸೇರಿದಾಗ ಅದು ಮುಂದೆ ನಮ್ಮ ಮಕ್ಕಳಿಗೂ ಮಾದರಿಯಾಗಲಿ





m

