ಗೃಹ ಸಚಿವರ ಭೇಟಿ ದಿನ ದಿನ ಕಪ್ಪು ಬಾವುಟ ಪ್ರದರ್ಶನ : ದ,ಕ,ಜಿಲ್ಲಾ AIKMC
ಮಂಗಳೂರು
ಕ್ಷುಲ್ಲಕ ವಿಷಯದಲ್ಲಿ ಯುವಕನ ಮೇಲೆ ಗುಂಪುಕಟ್ಟಿ ಹಲ್ಲೆ ನಡೆಸಿ ಕೊಲೆಮಾಡಿದ ಘಟನೆ ಜಿಲ್ಲೆಗೆ ಕಪ್ಪು ಚುಕ್ಕೆಯಾಗಿದೆ,
ಇದರ ಮದ್ಯಯೇ ಯಾವುದೇ ಸರಿಯಾದ ಮಾಹಿತಿ ಇಲ್ಲದೇ ಗೃಹ ಸಚಿವರ ಹೇಳಿಕೆ ರಾಜ್ಯದ ಜನತೆ ತಲೆ ತಗ್ಗಿಸುವಂತೆ ಮಾಡಿದೆ,
ಉನ್ನತ,ಗೌರವಾನ್ವಿತ ಸ್ಥಾನದಲ್ಲಿದ್ದುಕ್ಕೊಂಡು ಗೃಹಸಚಿವರ ಹೇಳಿಕೆ ನಾಚಿಕೆಗೇಡು,ತಕ್ಷಣ ಗೃಹ ಸಚಿವರು ರಾಜ್ಯದ ಜನತೆಯಲ್ಲಿ ಕ್ಷಮೆ ಕೇಳಬೇಕೆಂದು ಆಲ್ ಇಂಡಿಯಾ KMCC ದ,ಕ,ಜಿಲ್ಲಾ ಸಮಿತಿ ಹೇಳಿಕೆ ನೀಡಿದ್ದಾರೆ,
ದ,ಕ,ಜಿಲ್ಲಾ ಪೊಲೀಸ್ ಅಧಿಕಾರಿಗಳ ಸಂಪರ್ಕ ಮಾಡದೆ ಹೇಳಿದ ನಿಮ್ಮ ಹೇಳಿಕೆ ಸಹಿಸಲು ಅಸಾಧ್ಯ ಖುದ್ದು ಪೊಲೀಸ್ ಇಲಾಖೆಗೆ ತಪ್ಪಿತಸ್ಥರನ್ನು ವಶಕ್ಕೆ ಪಡೆಯಲು ಸೂಚನೆ ನೀಡುವುದನ್ನು ಬಿಟ್ಟು ನಿಮ್ಮ ಹೇಳಿಕೆ ಅನಿರೀಕ್ಷಿತ ಆಘಾತವಾಗಿದೆ,
ದ,ಕ,ಜಿಲ್ಲಾ ಪೊಲೀಸ್ ಇಲಾಖೆ ತಕ್ಷಣ ಎಲ್ಲ ಆರೋಪಿಗಳನ್ನ ವಶಕ್ಕೆ ಪಡೆಯಬೇಕು ಎಂದು ಅಲ್ ಇಂಡಿಯಾ KMCC ದ,ಕ,ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಫ್ಹಾಂ ಅಲಿ ತಂಙಳ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ,
ಮುಂದೊಂದು ದಿನ ಗೃಹ ಸಚಿವರು ಜಿಲ್ಲಾ ಭೇಟಿ ದಿನ ಕಪ್ಪು ಬಾವುಟ ಪ್ರದರ್ಶಿಸಲು ತಯಾರಾಗಿದ್ದೇವೆ ಎಂದರು.




m

