Featured, ಅಂಕಣ, ಇತರೆ, ಸ್ಥಳೀಯ

ಸುಳ್ಯದ ವಿದ್ಯುತ್ ಶಾಪ: ಅಧಿಕಾರಿಗಳ ನಿದ್ರೆ, ಸರ್ಕಾರದ ಉಪೇಕ್ಷೆ, ಮತ್ತು ಜನತೆಯ ಹೋರಾಟದ ಕಹಿ ಸತ್ಯ”

“ಯಾರೇ ಕೂಗಾಡಲಿ, ಊರೇ ಹೋರಾಡಲಿ: ನೆಮ್ಮದಿಗೆ ಬಂಗವಿಲ್ಲ!” ಸರ್ಕಾರದ ಕಡೆಗಣಿಸುವಿಕೆ, ಮತದಾರರ ಅಣಕ: ಜ್ವಲಂತ ಸಮಸ್ಯೆಯ ಪರಿಹಾರಕ್ಕಾಗಿ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಪಡೆ ದ್ವನಿಯಾಗಲಿದೆ : ಉನೈಸ್ ಪೆರಾಜೆ 

ಸುಳ್ಯದ ನಿರಂತರ ವಿದ್ಯುತ್ ಸಮಸ್ಯೆ ಒಂದು ಶಾಪವಾಗಿ ಪರಿಣಮಿಸಿದೆ. ಮೆಸ್ಕಾಮ್ ಇಲಾಖೆಯ ನಿಷ್ಕ್ರಿಯತೆ ಎದ್ದುಕಾಣುತ್ತಿದೆ. ವಿದ್ಯುತ್ ಸೌಲಭ್ಯವು ಮೂಲಭೂತ ಅಗತ್ಯವಾಗಿದ್ದು, ನಿತ್ಯಜೀವನ, ಶಿಕ್ಷಣ, ಆರೋಗ್ಯ ಮತ್ತು ಆರ್ಥಿಕ ಚಟುವಟಿಕೆಗಳಿಗೆ ಅಡ್ಡಿಯಾಗುವಂತಹ ಸಮಸ್ಯೆಗಳು, ತುರ್ತು ಪರಿಹಾರ ಮತ್ತು ಶಾಶ್ವತ ಪರಿಹಾರ ಅನಿವಾರ್ಯವಾಗಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಮುಖಂಡ ಉನೈಸ್ ಪೆರಾಜೆ ಪ್ರತಿಕ್ರಿಯಿಸಿದ್ದಾರೆ.
“ಈಗಿನ ವಿದ್ಯುತ್ ಸಮಸ್ಯೆ ಹೇಗೆ ಅಂದರೆ! ಒಂದು ಹನಿ ಮಳೆಯ ನೀರು ವಿದ್ಯುತ್ ಲೈನ್ ತಂತಿಗೆ ಬಿದ್ದರೆ ಸಾಕು, ಕೂಡಲೆ ಸಂಪರ್ಕ ಕಡಿದುಹೋಗುತ್ತದೆ. ಇತ್ತೀಚಿನ ದಿನಗಳಲ್ಲಿ ಮಧ್ಯರಾತ್ರಿಯಲ್ಲಿ ವಿದ್ಯುತ್ ಕಡಿತದ ಪ್ರಕ್ರಿಯೆ ನಿರಂತರವಾಗಿದೆ.
ಜನಸಾಮಾನ್ಯರ ಸಮಸ್ಯೆಗೆ ಸ್ಪಂದಿಸಬೇಕಾದ ಇಲಾಖೆ ಅಧಿಕಾರಿಗಳು ಕಾಳಜಿಯಿಲ್ಲದೆ ಕಾಟಾಚಾರಕ್ಕೆ ಜನಸಂಪರ್ಕ ಸಭೆ ಮಾಡಿ, ಕೈತೊಳೆದುಕೊಂಡಿದೆ,”
ಕನ್ನಡದ ಒಂದು ಪ್ರಸಿದ್ಧ ಹಾಡಿನ ಸಾಲು “ಯಾರೇ ಕೂಗಾಡಲಿ, ಊರೇ ಹೋರಾಡಲಿ; ನಮ್ಮ ನೆಮ್ಮದಿಗೆ ಬಂಗವಿಲ್ಲ” ಎಂಬಂತಾಗಿದೆ ಸದ್ಯದ ಪರಿಸ್ಥಿತಿ.
ಹಲವಾರು ವರ್ಷಗಳಿಂದ ಸುಳ್ಯದಲ್ಲಿ ಪರಿಹಾರ ಆಗದೆ ಉಳಿದಿರುವ ಜ್ವಲಂತ ಸಮಸ್ಯೆಗಳಿಗೆ ಕೇವಲ ಅಧಿಕಾರಿ ವರ್ಗ ಕಾರಣವೇ? ಸರ್ಕಾರ ಸುಳ್ಯ ತಾಲೂಕನ್ನು ಕಡೆಗಣಿಸಿದೆಯೇ? ಅಥವಾ ಸುಳ್ಯದ ಪ್ರಜ್ಞಾವಂತ ಪ್ರಜೆಗಳ ಭಾವನಾತ್ಮಕ ಮತಗಳ ಪಲಿತಾಂಶವೇ? ಒಟ್ಟಿನಲ್ಲಿ, ಸುಳ್ಯ ಜನತೆಯ ಕೂಗಿಗೆ “ಕವಡೆ ಕಾಸಿನ ಬೆಲೆ” ಇಲ್ಲದಂತೆ ಮಾಡಿದೆ!.
ಈ ಪರಿಹಾರ ಕಾಣದ ಸುಳ್ಯದ ಜ್ವಲಂತ ಸಮಸ್ಯೆಗಳು, ಸುಳ್ಯದ ಮತದಾರ ಪ್ರಭುಗಳನ್ನು ಅಣಕಿಸುವಂತಾಗಿದೆ ಎಂದು ಹೇಳಬಹುದು.

ಈ ನಿಟ್ಟಿನಲ್ಲಿ, ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಪಡೆಯು ಸುಳ್ಯದ ವಿದ್ಯುತ್ ಸಮಸ್ಯೆಯನ್ನು ಪರಿಹರಿಸಲು ರಾಜ್ಯಮಟ್ಟದಲ್ಲಿ ಪ್ರಯತ್ನ ಮಾಡಲಿದೆ. ಮುಂದಿನ ವಾರ ರಾಜ್ಯಮಟ್ಟದ ಬೃಹತ್ ಹೋರಾಟ ಮಾತ್ರವಲ್ಲ, ಸುಳ್ಯದಲ್ಲಿ ನಮ್ಮ ಸಂಘಟನೆಯ ರಾಜ್ಯಮಟ್ಟದ ನಾಯಕರನ್ನು ಕರೆಸಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಪಡೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಉನೈಸ್ ಪೆರಾಜೆ ತಮ್ಮ ಮಾಧ್ಯಮ ಹೇಳಿಕೆಯಲ್ಲಿ ಸ್ಪಷ್ಟಪಡಿಸಿದ್ದಾರೆ.

m

Related Posts