ಸುಳ್ಯ ನಗರದ ನವೂರು ನಿವಾಸಿ ಅಬ್ದುಲ್ಲ ಉಗ್ರಣಿ ಮತ್ತು ಜಮೀಳಾ ದಂಪತಿಯ ಪುತ್ರ ಸಿರಾಜುದ್ದೀನ್, ತಮ್ಮ ಪ್ರತಿಭೆ ಮತ್ತು ಸೇವಾ ಮನೋಭಾವದ ಮೂಲಕ ಸಮಾಜದಲ್ಲಿ ಹೊತ್ತಿಕೊಂಡಿರುವ ಯುವಕ್ರೀಡಾಪಟು.
ಶಿಕ್ಷಣವನ್ನು ಗಾಂಧಿನಗರ ಶಾಲೆ, ಪದವಿಪೂರ್ವ ಶಿಕ್ಷಣ NMC ಹಾಗೂ ಕಾಲೇಜು ಮತ್ತು ಸೈಂಟ್ ಫಿಲೋಮಿನಾ ಕಾಲೇಜ್ ಪುತ್ತೂರಿನಲ್ಲಿ.. LLB ಶಿಕ್ಷಣವನ್ನು KVG ವಿದ್ಯಾಸಂಸ್ಥೆಯಲ್ಲಿ ಪೂರೈಸಿರುತ್ತಾರೆ..
ಸಿರಾಜುದ್ದೀನ್ ಇವರನ್ನು ಸ್ನೇಹಿತರು ಹಾಗೂ ಊರಿನವರು ಇಜ್ಜು ಎಂದು ಕರೆದು ಇವಾಗ ಎಲ್ಲರಿಗೂ ಇಜ್ಜುವೆಂದರೆ ಚಿರಪರಿಚಿತರಾಗಿದ್ದಾರೆ..
ಇವರು ಬಾಲ್ಯದಿಂದಲೇ ಕ್ರೀಡೆಗೆ ಅಪಾರ ಆಸಕ್ತಿ ತೋರಿಸಿದ್ದಾರೆ. ಫುಟ್ಬಾಲ್, ವಾಲಿಬಾಲ್, ಶಟ್ಲ್ ಮತ್ತು ಸೈಕ್ಲಿಂಗ್ ಕ್ಷೇತ್ರಗಳಲ್ಲಿ ತಮ್ಮ ಕ್ರೀಡಾ ಪ್ರತಿಭೆಯನ್ನು ಮೆರೆದಿದ್ದಾರೆ, ಕೇವಲ ಆಟಗಾರರಷ್ಟೇ ಅಲ್ಲ, ಅನೇಕ ಯುವಕರಿಗೆ ಕ್ರೀಡೆಗೆ ಪ್ರೇರಣೆ ನೀಡುವ ಮಾರ್ಗದರ್ಶಕರೂ ಆಗಿದ್ದಾರೆ.
ಸಿರಾಜುದ್ದೀನ್ ಮುಂಗಾರು ಸ್ಪೋರ್ಟ್ಸ್ ಕ್ಲಬ್ ಮತ್ತು ಮುಂಗಾರು ವಾಲಿಬಾಲ್ ಅಕಾಡೆಮಿಯ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಜೊತೆಗೆ, ಜೈ ಭಾರತ್ ಯುವಕ ಮಂಡಲದಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದ್ದು, ಯುವಜನತೆಗೆ ಕ್ರೀಡೆ ಮತ್ತು ಸಂಘಟನೆಯ ಮೂಲಕ ಸಕಾರಾತ್ಮಕ ಚಿಂತನೆಗಳನ್ನು ಹಂಚಿಕೊಳ್ಳುತ್ತಿದ್ದಾರೆ.
ಆಟದ ಸಮಯದಲ್ಲಿ ಇತರರಿಗೆ ತಕ್ಷಣ ಫಿಸಿಯೋಥೆರಪಿ ನೆರವು ನೀಡುವ ನೈಪುಣ್ಯ ಹೊಂದಿರುವ ಸಿರಾಜುದ್ದೀನ್, ಕ್ರೀಡಾ ಕ್ಷೇತ್ರದಲ್ಲಿ ಸೇವಾ ಮನೋಭಾವವನ್ನು ಮೆರೆದವರು. ಅವರ ಹೃದಯದಲ್ಲಿ ಕೇವಲ ವೈಯಕ್ತಿಕ ಸಾಧನೆಯಷ್ಟೇ ಅಲ್ಲ, ಕ್ರೀಡೆ ಮೂಲಕ ಸಮುದಾಯ ಸೇವೆಯೂ ಅತಿ ಮುಖ್ಯವೆಂದು ಬೇರೆಯವರಿಗೆ ತಿಳಿಸುತ್ತಿದ್ದಾರೆ.
ಕ್ರೀಡಾ ಕ್ಷೇತ್ರದ ಜೊತೆಗೆ ಅವರು ಯಶಸ್ವಿ ಉದ್ಯಮಿ. ಸುಳ್ಯ ರಥಬೀಡಿಯಲ್ಲಿ “Baby Zone” ಮಕ್ಕಳ ವಸ್ತ್ರದ ಅಂಗಡಿ ಯಶಸ್ವಿಯಾಗಿ ನಡೆಸುತ್ತಾ, ಯುವ ಉದ್ಯಮಿಗಳಿಗೆ ಪ್ರೇರಣೆಯಾಗಿ ಉಳಿದಿದ್ದಾರೆ.
ಇಂದಿನ ಕಾಲದಲ್ಲಿ ಮಕ್ಕಳಿಗೆ ಮೊಬೈಲ್ ಮತ್ತು ವಿವಿಧ ಡಿಜಿಟಲ್ ಸಾಧನೆಗಳಿಂದ ದುಷ್ಪರಿಣಾಮ ಬೀಳುವ ಬಗ್ಗೆ ಜಾಗೃತಿಯನ್ನು ಮೂಡಿಸುತ್ತಿದ್ದಾರೆ ಮತ್ತು ಹೊಸ ಕ್ರೀಡಾಪಟುಗಳನ್ನು ಸೃಷ್ಟಿ ಮಾಡಲು ಹಲವಾರು ಪ್ರಯತ್ನಗಳನ್ನು ಮಾಡುತ್ತಿದ್ದಾರೆ . ಸಿರಾಜುದ್ದೀನ್ ಅವರು ಯುವಕರಿಗೆ ಒಳ್ಳೆಯ ಕ್ರೀಡೆ, ನಿಯಮಿತ ಅಭ್ಯಾಸ ಮತ್ತು ಆರೋಗ್ಯಕರ ಜೀವನ ಶೈಲಿಯ ಮಹತ್ವವನ್ನು ವಿವರಿಸುತ್ತಾ, ಅವರ ಪ್ರತಿಭೆಯನ್ನು ಗುರುತಿಸಿ ಬೆಳೆಸುವಲ್ಲಿ ನಿಪುಣರಾಗಿದ್ದಾರೆ.
ತಮ್ಮ ಶ್ರಮ, ಮನೋಬಲ ಮತ್ತು ಸಮಾಜದ ಪರ ಸೇವಾ ಮನೋಭಾವದಿಂದ ಸಿರಾಜುದ್ದೀನ್ ಇಂದಿನ ಯುವಜನತೆಗೆ ಒಂದು ಸ್ಫೂರ್ತಿದಾಯಕ ವ್ಯಕ್ತಿತ್ವವಾಗಿ నిಲ್ಲ ಬಲ್ಲವರು..




m
