ಜೂನ್ ಐದರಂದು ನೆಟ್ಟ ಗಿಡವೊಂದು ಮಾರನೆಯ ದಿನ ನೀರಿಲ್ಲದೆ, ನೆರಳಿಲ್ಲದೇ ಬಿಸಿಲಿಗೆ ಬಾಡಿ ಬಂದು ಸುಟ್ಟಂತೆ ಪ್ರತ್ಯಕ್ಷವಾಯಿತು!
ವಿಶ್ವ ಪರಿಸರ ದಿನದಂದು ಗಿಡವೊಂದನ್ನು ಹಿಡಿದು ಕ್ಯಾಮರಾಗೆ ಪೋಸ್ ಕೊಟ್ಟು ಫೋಟೋ ಶೇರ್ ಮಾಡಿದರೆ ಗಿಡ ಬೆಳೆಯುವುದುಂಟೆ….?
ಪರಿಸರ ಪ್ರೇಮವೆಂದರೆ ಮಗುವಿನಲ್ಲಿಡುವ ಕಾಳಜಿ ಲಾಲನೆ ಪೋಷಣೆ ಬೇಕು ಪರಿಸರ ಸಂರಕ್ಷಣೆಗೆ
ಬಿತ್ತಿದ ಬೀಜ ಚಿಗುರೊಡೆದು ನೆಟ್ಟ ಗಿಡ ಮರವಾಗಿ ಬೆಳೆದು ಬೇರು ಭೂಮಿಗಿಳಿದು ರೆಂಬೆ ಗಗನಕ್ಕೇರಿದಾಗ ಸಾರ್ಥಕವಾಯಿತು ಪರಿಸರ ದಿನ
ಈ ವರ್ಷ ನೆಟ್ಟ ಗಿಡ ಮುಂದಿನ ವರ್ಷಗಳಲ್ಲಿ ಫಲ ಪುಷ್ಪ ಗಂಧ ಗಾಳಿಯ ನೀಡುವಾಗಲೇ ನಿಜವಾಗುವುದು ನಮ್ಮ ಪರಿಸರ ಪ್ರೇಮ
ಹಿಂದೊಮ್ಮೆ ಜೂನ್ ಐದರಂದು ನೆಟ್ಟ ಮರದೆ ಮುಂದೆ ನಿಂತು ತೆಗೆಯೋಣ ಒಂದು ಫೋಟೋ ನಾನು ನೆಟ್ಟ ಮರದ ಮುಂದೆ ಎಂದು ಅಡಿಬರಹ ನೀಡಿದರೆ ಪರಿಸರ ದಿನ ಸಾರ್ಥಕವಾಯಿತು
ಪರಿಸರ ಸಂರಕ್ಷಣೆಯ ಮಹತ್ವ ಸಾರುವ ಮುನ್ನ ಸ್ವಬದುಕಲ್ಲಿ ಮೌಲ್ಯವ ಅಳವಡಿಸೋಣ ಮಾಲಿನ್ಯದ ಅಪಾಯದಿಂದ ಸ್ವಜಾಗರೂಕರಾಗೋಣ
ಬರಹ:- ಶಾಫಿ ಅನ್ವಾರಿ ಸಖಾಫಿ ಕೊಡಗರಹಳ್ಳಿ





m
