1947ರ ಆಗಸ್ಟ್ 15ರಂದು ಭಾರತವು ಬ್ರಿಟಿಷರ ಆಳ್ವಿಕೆಯಿಂದ ಮುಕ್ತವಾಯಿತು. ಮಹಾತ್ಮ ಗಾಂಧೀಜಿ, ಸುಭಾಷ್ ಚಂದ್ರ ಬೋಸ್, ಆಜಾದರು, ಸರ್ದಾರ್ ಪಟೇಲ್ ಸೇರಿದಂತೆ ಸಾವಿರಾರು ಹೋರಾಟಗಾರರ ತ್ಯಾಗದಿಂದ ಬಂದ ಈ ಸ್ವಾತಂತ್ರ್ಯವನ್ನು ಪ್ರತಿ ವರ್ಷ ಗೌರವದಿಂದ ಆಚರಿಸುತ್ತೇವೆ.ಈ ಭಾರತ ದೇಶದ ರಾಷ್ಟ್ರಧ್ವಜ, ರಾಷ್ಟ್ರ ಪ್ರಾಣಿ, ರಾಷ್ಟ್ರೀಯ ಪಕ್ಷಿ ಲಾಂಛನ ಇದೆಲ್ಲವೂ ಕೂಡ ನಮ್ಮ ದೇಶಭಕ್ತಿಯ ಸ್ವಾಭಿಮಾನದ ಸ್ವಾತಂತ್ರ್ಯದ ಪ್ರತೀಕವಾಗಿದೆ.
ಸ್ವಾತಂತ್ರ್ಯ ನಮಗೆ ಕೇವಲ ರಾಜಕೀಯ ಮುಕ್ತಿಯನ್ನು ಮಾತ್ರ ನೀಡಲಿಲ್ಲ, ಅದು ನಮ್ಮ ಸ್ವಂತ ಭವಿಷ್ಯವನ್ನು ನಿರ್ಮಿಸಲು ಅವಕಾಶ ನೀಡಿತು. ಕಳೆದ ದಶಕಗಳಲ್ಲಿ ನಾವು ವಿಜ್ಞಾನ, ತಂತ್ರಜ್ಞಾನ, ಕೃಷಿ, ಅಂತರಿಕ್ಷ, ಮತ್ತು ಕ್ರೀಡೆಗಳಲ್ಲಿಯೂ ಸಾಕಷ್ಟು ಸಾಧನೆ ಮಾಡಿದ್ದೇವೆ. ವಿಶ್ವ ವೇದಿಕೆಯಲ್ಲಿ ಭಾರತದ ಪ್ರತಿಷ್ಠೆ ಹೆಚ್ಚುತ್ತಿದೆ.
ದುರಾದೃಷ್ಟವೆಂದರೆ ಇಂದಿನ ವಾಸ್ತವಿಕತೆಯಲ್ಲಿ ಹಲವಾರು ಗಂಭೀರ ಸವಾಲುಗಳು ಎದುರಿಸುತ್ತಿವೆ. ಕೋಮುವಾದ, ಜಾತಿ-ಧರ್ಮದ ಹೆಸರಿನಲ್ಲಿ ನಡೆಯುವ ಅಸಹಿಷ್ಣುತೆ ನಮ್ಮ ಏಕತೆಗೆ ಧಕ್ಕೆಯುಂಟುಮಾಡುತ್ತಿದೆ. ಭ್ರಷ್ಟಾಚಾರ ದೇಶದ ಸಂಪನ್ಮೂಲಗಳನ್ನು ನಾಶಮಾಡಿ ಅಭಿವೃದ್ಧಿಯ ವೇಗವನ್ನು ಕುಂದಿಸುತ್ತಿದೆ. ಅತ್ಯಾಚಾರ ಮತ್ತು ಮಹಿಳಾ ಸುರಕ್ಷತೆಯ ಕೊರತೆ ಭಾರತದಲ್ಲಿನ ಮಾನವೀಯ ಮೌಲ್ಯಗಳಿಗೆ ಕಳಂಕ ತರುತ್ತಿದೆ. ನಿರುದ್ಯೋಗ ಯುವಕರ ಕನಸುಗಳನ್ನು ಕಿತ್ತುಕೊಳ್ಳುತ್ತಿದೆ, ಮತ್ತು ಅನಕ್ಷರತೆ ಇನ್ನೂ ಹಲವಾರು ಜನರನ್ನು ಮೂಲಭೂತ ಹಕ್ಕುಗಳಿಂದ ವಂಚಿಸುತ್ತಿದೆ.ನಿಜವಾದ ಸ್ವಾತಂತ್ರ್ಯ ಎಂದರೆ ಈ ಎಲ್ಲಾ ಸಮಸ್ಯೆಗಳಿಂದ ಮುಕ್ತವಾದ ಸಮಾಜ. ಅದಕ್ಕಾಗಿ ಪ್ರತಿಯೊಬ್ಬ ನಾಗರಿಕನೂ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು – ಕಾನೂನು ಪಾಲನೆ, ಸೌಹಾರ್ದತೆ, ನಿಷ್ಠಾವಂತ ಸೇವೆ, ಮತ್ತು ಶಿಕ್ಷಣದ ಹಂಚಿಕೆ ನಮ್ಮ ಕರ್ತವ್ಯ.
ಭಾರತಕ್ಕೆ ಬ್ರಿಟಿಷರಿಂದ ರಾಜಕೀಯ ಸ್ವಾತಂತ್ರ್ಯ ಪಡೆಯಲು ಸಹತ್ರಾರು ಭಾರತೀಯರು ಜೀವ ತ್ಯಾಗ ಮಾಡಿದ್ದಾರೆ.ಲಕ್ಷ ಲಕ್ಷ ಜನ ತಮ್ಮ ಮನೆ ಮಠಗಳನ್ನು ಕಳೆದುಕೊಂಡಿದ್ದಾರೆ. ದೊಡ್ಡ ಮಟ್ಟ ಸಂಖ್ಯೆ ಜನ ತನ್ನ ವೃತ್ತಿಯನ್ನೂ ತೊರೆದ್ದಾರೆ. ಅಸಂಖ್ಯಾತ ವಿದ್ಯಾರ್ಥಿಗಳು ತಮ್ಮ ವ್ಯಾಸಂಗವನ್ನು ತೊರೆದು ಸ್ವತಂತ್ರ ಹೋರಾಟದಲ್ಲಿ ಭಾಗವಹಿಸಿದ್ದಾರೆ. ಇಂತಹ ಸ್ವತಂತ್ರ ಹೋರಾಟಗಾರ ಆದರ್ಶಗಳನ್ನು ಮೌಲ್ಯಗಳನ್ನು ಪ್ರತಿಯೊಬ್ಬ ಭಾರತೀಯ ಪ್ರಜೆಯು ತನ್ನ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂಬುದು ಮೂಲಭೂತ ಕರ್ತವ್ಯವಾಗಿದೆ. ಆದರೆ ನಮ್ಮಲ್ಲಿ ಎಷ್ಟು ಜನರಿಗೆ ಕರ್ತವ್ಯ ಅರಿವಿದೆ ಮತ್ತು ಅದನ್ನು ಅನುಸರಿಸುತ್ತಿದ್ದೇವೆ ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ.

ಸ್ವತಂತ್ರವೆಂದರೆ ಅದು ಕೇವಲ ರಾಜಕೀಯ ಸ್ವತಂತ್ರವಲ್ಲ ಅಥವಾ ನಾವು ಮಾತ್ರ ಸ್ವತಂತ್ರವಾಗಿ ಇರುವುದು ಎಂದಲ್ಲ. ನಮ್ಮ ವರ್ತನೆ, ವ್ಯವಹಾರ ,ಉದ್ಯೋಗಗಳು ನಮ್ಮ ಸ್ವಾತಂತ್ರ್ಯ ಕಾಪಾಡುವ ಜೊತೆಗೆ ಇತರ ಸ್ವಾತಂತ್ರ್ಯವನ್ನು ಗೌರವಿಸಬೇಕು ಮತ್ತು ಬಲಪಡಿಸಬೇಕು.ಸ್ವಾತಂತ್ರ್ಯ ಹೋರಾಟಗಾರರು ತಮ್ಮ ಪ್ರಾಣ ತ್ಯಾಗ ಮಾಡಿ ತಂದಿರುವ ಈ ದಿನವನ್ನು ಕೇವಲ ಹಬ್ಬದ ರೂಪದಲ್ಲಿ ಆಚರಿಸುವುದಲ್ಲ, ಅವರ ಕನಸಿನ ಭಾರತವನ್ನು ನಿರ್ಮಿಸಲು ಬದ್ಧತೆಯಿಂದ ಕೆಲಸ ಮಾಡೋಣ. ಒಗ್ಗಟ್ಟಿನ ಶಕ್ತಿ, ಶಿಸ್ತು, ಮತ್ತು ದೇಶಭಕ್ತಿಯಿಂದ ನಾವು ಭವಿಷ್ಯದ ಭಾರತವನ್ನು ಭ್ರಷ್ಟಾಚಾರವಿಲ್ಲದ, ಹಿಂಸಾಚಾರವಿಲ್ಲದ, ಎಲ್ಲರಿಗೂ ಸಮಾನ ಅವಕಾಶ ಇರುವ ರಾಷ್ಟ್ರವನ್ನಾಗಿ ಮಾಡಬಹುದು.
ಜೈ ಹಿಂದ್!
ವರದಿ:–ಆಶಿಕ್ ಕೊಡಗು





m
