ಸುಳ್ಯ ತಾಲೂಕು ಆಲೆಟ್ಟಿ ಗ್ರಾಮದ ಕೊಲ್ಚಾರ್ ನಲ್ಲಿ ಧರ್ಮಸ್ಥಳದಲ್ಲಿ ಅತ್ಯಾಚಾರಕ್ಕೆ ಒಳಗಾಗಿ ಮೃತಳಾದ ಸೌಜನ್ಯಳಿಗೆ ನ್ಯಾಯ ದೊರಕಲಿ ಎಂಬ ಬೇಡಿಕೆಯಿಂದ ಸೌಜನ್ಯ ಪರ ಹೋರಾಟಗಾರರು ಆಲೆಟ್ಟಿ, ಕೊಲ್ಚಾರು ಶ್ರೀ ಶಾರದಾಂಬ ಭಜನಾ ಮಂದಿರದಲ್ಲಿ ಪ್ರಾರ್ಥನೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಊರಿನ ಗಣ್ಯರಾದ ಶ್ರೀ ಪುರುಷೋತ್ತಮ ಗೌಡ ಕೊಲ್ಚಾರು ಹಾಗೂ ಹೋರಾಟಗಾರರು ಅನ್ಯಾಯ ವಾಗಿ ಮೃತಪಟ್ಟ ಸೌಜನ್ಯಳಿಗೆ ನ್ಯಾಯ ದೊರಕಲಿ ಆದಷ್ಟು ಬೇಗ ಅಪರಾಧಿಗಳು ಪತ್ತೆಯಾಗಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಲಿ ಎಂದು ಎಲ್ಲರ ಸಮ್ಮುಖದಲ್ಲಿ ಪ್ರಾರ್ಥನೆ ಸಲ್ಲಿಸಲಾಯಿತು. ಹೋರಾಟಗಾರ ರಗೆ ಸ್ಪೂರ್ತಿ ತುಂಬುವ ನಿಟ್ಟಿನಲ್ಲಿ ಪ್ರಾರ್ಥನೆ ಬಳಿಕ ಸುಮಾರು 13 ಕಿಲೋಮೀಟರ್ ಬೈಕ್ ರ್ಯಾಲಿ ಸಂಘಟಿಸಲಾಯಿತು. 30 ಕ್ಕೂ ಹೆಚ್ಚು ಬೈಕ್ ಗಳಲ್ಲಿ ಭಾಗವಹಿಸಿದ ಯುವಕರು “ಸೌಜನ್ಯಗೆ ನ್ಯಾಯ ದೊರಕಲಿ” ಎಂಬ ಘೋಷಣೆಗಳೊಂದಿಗೆ ಸೌಜನ್ಯ ಪರ ಹೋರಾಟದ ಶಕ್ತಿಯನ್ನು ತೋರಿಸಿದರು.
ರ್ಯಾಲಿಯ ಅಂತ್ಯದಲ್ಲಿ ಕೊಲ್ಲರಮೂಲೆ ಎಂಬಲ್ಲಿ ಕ್ಯಾಂಡಲ್ ಬೆಳಗಿ ಸಾಂಕೇತಿಕ ಪ್ರತಿಭಟನೆ ನಡೆಸಲಾಯಿತು. ಪ್ರತಿಭಟನೆಯಲ್ಲಿ ಭಾಗಿಯಾದ ಎಲ್ಲರು ಸೌಜನ್ಯಳಿಗೆ ನ್ಯಾಯ ದೊರಕಲಿ ಹಾಗೂ ಇಂತಹ ಘಟನೆಗಳು ಮತ್ತೆ ಮರುಕಳಿಸಬಾರದು ಎಂಬ ಆಶಯ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಹರೀಶ್ ಕೊಯಾಂಗಜೆ, ಶ್ರೀಧರ ಕೊಯಾಂಗಜೆ, ಶಿವಪ್ರಸಾದ್ ಕೆ ವಿ ಕೊಲ್ಚಾರ್, ಧರ್ಮಪಾಲ ಕೊಯ0ಗಾಜೆ, ಶಿವಪ್ರಸಾದ್ ಕೆ ಆರ್ ಕೊಲ್ಚಾರು, ಧನು ಕೊಲ್ಚಾರು, ಯತೀಶ ಬಾಳ್ಯಾಡಿ, ರಾಜೇಶ್ ಬಾಳ್ಯಾಡಿ, ಪದ್ಮನಾಭ ಕೋನ್ನೋಡಿ, ಬಾಲಚಂದ್ರ ಕೊನ್ನೂಡಿ, ವಿವೇಕಾನಂದ ಕೊಲ್ಚಾರು, ಲೋಹಿತಾಶ್ವ ಕುಡೆಂಬಿ, ಮನೋಹರ ಕಾರ್ತಡ್ಕ, ಪುನೀತ್ ಕೊಲ್ಚಾರು, ತೀರ್ಥರಾಮ ಕೊಯಾಂಗಜೆ, ರಾಮಕೃಷ್ಣ ಪಾಲರು, ಬಾಬು ಗೌಡ ಪಾಲರು, ಸೀತಾರಾಮ ಕೊಲ್ಚಾರು, ತೇಜ ಕೊಯಂಗಾಜೆ, ಪ್ರಜ್ವಲ್ ಕೊನ್ನೂಡಿ, ಚೆನ್ನಕೇಶವ ಬಾಲ್ಯಾಡಿ, ಸಂದೀಪ್ ಬಾಲ್ಯಾಡಿ, ರಾಜೇಶ್ ಬಾಲ್ಯಾಡಿ, ಸುಭಾಷ್ ಕೊಯಾಂಗಜೆ, ಹಮೀದ್ ಕುಂಭಕ್ಕೋಡು, ದರ್ಶನ್ ಕೊಲ್ಚಾರು, ದಯಾನಂದ ಪಾತಿಕಲ್ಲು , ತೀರ್ಥಪ್ರಸಾದ ಕೊಯಾಂಗಜೆ, ಸುದರ್ಶನ ಕೊಲ್ಚಾರು, ಅಬ್ದುಲ್ ರಹಮಾನ್ ಕೊಲ್ಲರಮೂಲೆ, ಹಂಸ ಕುಂಭಕ್ಕೋಡು, ಅಕ್ಷಯ್ ಕುಂಭಕ್ಕೋಡು ಮೊದಲಾದವರು ಉಪಸ್ಥಿತರಿದ್ದರು.




m

