ಸುಳ್ಯ: ಸುಳ್ಯದಿಂದ ಕಲ್ಲಪಳ್ಳಿ ಕಡೆಗೆ ತೆರಳುತ್ತಿದ್ದ ಬುಲೆಟ್ ಬೈಕ್ ಹಾಗೂ ಕಲ್ಲಪಳ್ಳಿ ದಿಕ್ಕಿನಿಂದ ಸುಳ್ಯ ಕಡೆಗೆ ಬರುತ್ತಿದ್ದ ದೋಸ್ತ್ ವಾಹನ ಪರಸ್ಪರ ಢಿಕ್ಕಿ ಹೊಡೆದುಕೊಂಡ ದುರ್ಘಟನೆ ಶುಕ್ರವಾರ ರಾತ್ರಿ ಸುಮಾರು 8.30ರ ಸುಮಾರಿಗೆ ನಾಗಪಟ್ಟ ಸೇತುವೆ ಬಳಿ ಸಂಭವಿಸಿದೆ.

ಘಟನೆಯಲ್ಲಿ ಬುಲೆಟ್ ಸವಾರ ಹರೀಶ್ ಕಲ್ಲಪಳ್ಳಿ ಎಂಬ ಯುವಕ ತೀವ್ರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಢಿಕ್ಕಿಯ ಪರಿಣಾಮ ವಾಹನಗಳು ಗಂಭೀರ ಹಾನಿಗೊಳಗಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿ ಕೊಂಡಿದ್ದಾರೆ.




m
