Featured, ಅಂಕಣ, ಸ್ಥಳೀಯ

ಸಿನಿಮಾದ ಮೂಲಕ ಕಾದಂಬರಿಗಳನ್ನು ಓದುವಂತಾಗಿದೆ – ಅನೀಶ್

ಕಾರಂತಜ್ಜನ ಮೂರು ಕೃತಿಗಳ ಬಗ್ಗೆ ಪದವಿ ವಿದ್ಯಾರ್ಥಿಗಳಿಂದ ಅನಿಸಿಕೆ

ಮುಡಿಪು; “ಸಿನಿಮಾದ ಮೂಲಕ ನಮಗೆ ಹಲವು ಕಾದಂಬರಿಗಳನ್ನು ಓದುವ ಅವಕಾಶಗಳು ಸಿಕ್ಕಿದೆ, ಅದು ಒಂದು ಒಳ್ಳೆಯ‌ ಬೆಳವಣಿಗೆ” ಎಂದು ದಸ್ಕತ್ ಸಿನಿಮಾದ ನಿರ್ದೇಶಕರಾದ ಅನೀಶ್ ಬೆಳ್ತಂಗಡಿ ಹೇಳಿದರು. ಎಸ್.ವಿ.ಪಿ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಶುಕ್ರವಾರ ನಡೆದ ಕಾರಂತರ ಕೃತಿಯಾಧಾರಿತ ಸಿನಿಮಾಗಳ ವಿಚಾರಣ ಸಂಕಿರಣದಲ್ಲಿ ಈ ಮಾತುಗಳನ್ನಾಡಿದರು. ಡಾ. ಶಿವರಾಮ ಕಾರಂತರ ಮೂರು ಕೃತಿಗಳ ಬಗ್ಗೆ ವಿದ್ಯಾರ್ಥಿಗಳು ಅಭಿಪ್ರಾಯ ಮಂಡಿಸಿದರು. ಚೋಮನದುಡಿ ಕೃತಿಯ ಬಗ್ಗೆ ಸ್ನೇಹ, ಬೆಟ್ಟದ ಜೀವ ಕೃತಿಯ ಬಗ್ಗೆ ಅಭಿಷೇಕ್ ವಾಲ್ಮೀಕಿ, ಸರಸಮ್ಮನ ಸಮಾಧಿ ಕೃತಿಯ ಬಗ್ಗೆ ಜಗದೀಶ್ ತಮ್ಮ ಅಭಿಪ್ರಾಯಗಳನ್ನು ಮಂಡಿಸಿದರು.

ಕಾರ್ಯಕ್ರಮದಲ್ಲಿ ಕನ್ನಡ ಅಧ್ಯಯನ ಸಂಸ್ಥೆಯ ಅಧ್ಯಕ್ಷರಾದ ಪ್ರೊಫೆಸರ್ ನಾಗಪ್ಪ ಗೌಡ, ಪ್ರೊಫೆಸರ್ ಸೋಮಣ್ಣ, ಡಾ. ಧನಂಜಯ ಕುಂಬ್ಳೆ, ಡಾ. ಯಶುಕುಮಾರ್ ಡಿ ಉಪಸ್ಥಿತರಿದ್ದರು. ಅಂಬಿಗರ ಚೌಡಯ್ಯ ಅಧ್ಯಯನ ಪೀಠದ ಸಹಾಯಕ ಯತೀಶ್ ಕುಮಾರ್ ಅವರು ಸ್ವಾಗತಿಸಿ ವಂದಿಸಿದರು.

m

Related Posts