ಕರ್ನಾಟಕ ಸರ್ಕಾರದ ರಾಜ್ಯಮಟ್ಟದ ಸಹಕಾರ ರತ್ನ ಪ್ರಶಸ್ತಿಗೆ ಭಾಜನರಾದ ಸುಳ್ಯದ ಹಿರಿಯ ಸಹಕಾರಿ ಧುರೀಣ ಪಿ.ಸಿ. ಜಯರಾಂ ರವರನ್ನು, ಸುಳ್ಯ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಕೆ ಎಮ್ ಮುಸ್ತಫ ಅವರು ಸನ್ಮಾನಿಸಿದರು. 32 ವರ್ಷಗಳ ಕಾಲ ಮಡಪ್ಪಾಡಿ ಸೇವಾ ಸಹಕಾರಿ ಸಂಸ್ಥೆಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿರುವ ಅವರು, ಸುಳ್ಯದ ಸಹಕಾರಿ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಮಹತ್ವದ ಸೇವೆ ಸಲ್ಲಿಸಿದ್ದಾರೆ

ಸುಳ್ಯ
ಕರ್ನಾಟಕ ಸರ್ಕಾರ ನೀಡುವ ಅತ್ಯುತ್ತಮ ಸಹಕಾರ ರತ್ನ ರಾಜ್ಯಮಟ್ಟದ ಪ್ರಶಸ್ತಿಗೆ ಭಾಜನರಾದ ಸುಳ್ಯದ ಹಿರಿಯ ಸಹಕಾರಿ ಧುರೀಣ ಪಿ.ಸಿ. ಜಯರಾಂ ರವರನ್ನು ಸುಳ್ಯ ನಗರ ಯೋಜನಾ ಪ್ರಾಧಿಕಾರ (ಸೂಡ) ಅಧ್ಯಕ್ಷ ಕೆ.ಎಂ. ಮುಸ್ತಫಾ ಸನ್ಮಾನಿಸಿದರು. ಇದೆ ಸಂದರ್ಭದಲ್ಲಿ ಮಾತನಾಡಿದ ಕೆ ಎಂ ಮುಸ್ತಫಾ ಪಿ ಸಿ ಯವರು ಮಡಪ್ಪಾಡಿ ಸೇವಾ ಸಹಕಾರಿ ಸಂಸ್ಥೆಯ ಅಧ್ಯಕ್ಷರಾಗಿ 32 ವರ್ಷಗಳ ಕಾಲ ಸೇವೆ ಸಲ್ಲಿಸಿ, ಸುಳ್ಯದ ಸಹಕಾರಿ, ಸಾಮಾಜಿಕ ಮತ್ತು ರಾಜಕೀಯ ಕ್ಷೇತ್ರಗಳಿಗೆ ನೀಡಿದ ಕೊಡುಗೆ ಅಪ್ರತಿಮ ಮತ್ತು ಶ್ಲಾಘನೀಯ,” ಎಂದು ಪ್ರಶಂಸಿಸಿದರು. ವೆಂಕಟರಮಣ ಕ್ರೆಡಿಟ್ ಕೋ – ಆಪರೇಟಿವ್ ಸಂಸ್ಥೆಯ ಸ್ಥಾಪಕ ಅಧ್ಯಕ್ಷರಾಗಿದ್ದ ಅವರು, ನಂತರ ಬೆಳ್ಳಿ ಹಬ್ಬ ಸಂದರ್ಭದಲ್ಲಿ ಮತ್ತೆ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಶ್ರೇಷ್ಠತೆಯನ್ನು ಉಲ್ಲೇಖಿಸಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಪಿ.ಸಿ. ಜಯರಾಂ ರವರು, ಗ್ರಾಮೀಣ ಪ್ರದೇಶವಾದ ಮಡಪ್ಪಾಡಿಯಲ್ಲಿ 45 ವರ್ಷಗಳ ಹಿಂದೆ ಉದ್ಯಮ ಆರಂಭಿಸಿದ ಬಳಿಕದಿಂದ ಜನತಾ ಗ್ರೂಪ್ಸ್‌ನವರ ಜೊತೆ ಬಾಂಧವ್ಯ ಮುಂದುವರಿದಿದೆ. ಸುಳ್ಯದಲ್ಲಿ ಸೈಕಲ್ ಮಹಮ್ಮದ್ ರವರೊಂದಿಗೆ ಕೊಕ್ಕೋ ಖರೀದಿ ಕೇಂದ್ರವನ್ನು ಪ್ರಾರಂಭಿಸಿದ್ದನ್ನು ಇಂದು ಹೆಮ್ಮೆಯಿಂದ ಸ್ಮರಿಸುತ್ತಿದ್ದೇನೆ,” ಎಂದರು.
ಕಾರ್ಯಕ್ರಮದಲ್ಲಿ ಟಿಎಪಿಸಿಎಂಎಸ್ ಉಪಾಧ್ಯಕ್ಷ ಪಿ.ಎಸ್. ಗಂಗಾಧರ್, ಸುಳ್ಳ ವಾಣಿಜ್ಯ ಮತ್ತು ಕೈಗಾರಿಕೋದ್ಯಮಿಗಳ ಸಂಘ ಅಧ್ಯಕ್ಷ ಹಾಜಿ ಅಬ್ದುಲ್ ಹಮೀದ್ ಜನತಾ, ಅನ್ಸಾರಿಯಾ ಎಜುಕೇಶನ್ ಸೆಂಟರ್ ಅಧ್ಯಕ್ಷ ಅಬ್ದುಲ್ ಮಜೀದ್ ಜನತಾ, ನಗರ ಪಂಚಾಯತ್ ಮಾಜಿ ಸದಸ್ಯರು ಶರೀಫ್ ಕಂಠಿ, ರಿಯಾಜ್ ಕಟ್ಟೆಕ್ಕಾರ್ಸ್, ಸುಳ್ಯ ತಾಲೂಕು ವಾಲಿಬಾಲ್ ಅಸೋಸಿಯೇಷನ್ ಖಜಾಂಚಿ ಕೆ.ಬಿ. ಇಬ್ರಾಹಿಂ, ಯುನೈಟೆಡ್ ಸ್ಪೋರ್ಟ್ಸ್ ಸದಸ್ಯ ಬಶೀರ್ ಕಚ್ಚು, ಉದ್ಯಮಿ ಜಾಫರ್ ಸೈಕಲ್ ಮೊದಲಾದ ಗಣ್ಯರು ಉಪಸ್ಥಿತರಿದ್ದರು.


