Featured, ಇತರೆ, ಸ್ಥಳೀಯ

ಹಳೆಗೇಟು ಅಡ್ಕ ನಿವಾಸಿ ಯೂಸುಫ್ ಹಾಜಿ (70) ನಿಧನ

ಹಳೆಗೇಟು ಅಡ್ಕ ನಿವಾಸಿ ಹಾಗೂ ಖಲೀದಿಯಾ ಶಾ ಮಿಲ್‌ನಲ್ಲಿ ನಾಲ್ಕು ದಶಕಗಳ ಕಾಲ ಉದ್ಯೋಗಿಯಾಗಿದ್ದ ಶ್ರಮಜೀವಿ, ಯೂಸುಫ್ ಹಾಜಿ (70) ಡಿಸೆಂಬರ್ 11ರ ಸಂಜೆ ಮಂಗಳೂರಿನ ಆಸ್ಪತ್ರೆಯಲ್ಲಿ ಅಲ್ಪಕಾಲದ ಅಸೌಖ್ಯದಿಂದ ನಿಧನರಾದರು.
ಕಳೆದ ನಾಲ್ಕೈದು ದಿನಗಳ ಹಿಂದೆ ಎದೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಅವರು ಅಂತಿಮಶ್ವಾಸತ್ಯಾಗ ಮಾಡಿದರು.
ಮೃತರು ಪತ್ನಿ ಫಾತಿಮಾ, ಪುತ್ರರಾದ ಶಮೀರ್, ನಿಸಾರ್ ಹಾಗೂ ಪುತ್ರಿಯರಾದ ಸಮೀನಾ, ರಸೀನಾ, ಸಕೀನಾ ಮತ್ತು ಬಂಧುಮಿತ್ರರನ್ನು ಅಗಲಿದ್ದಾರೆ.

Related Posts