Featured, ಇತರೆ, ಸ್ಥಳೀಯ

ಮಂಗಳೂರು : ಹಜ್ ಯಾತ್ರೆಯಿಂದ ಮರಳುತ್ತಿದ್ದ ವೇಳೆ ಅನಾರೋಗ್ಯಕ್ಕೆ ತುತ್ತಾಗಿ ಸುಳ್ಯದ ನಿವೃತ್ತ ಮೆಸ್ಕಾಂ ಉದ್ಯೋಗಿ ಶಾಫಿ ಹಾಜಿ ನಿಧನ

ಮಂಗಳೂರು, ಜೂನ್ 6 : ಸುಳ್ಯದ ನಿವೃತ್ತ ಮೆಸ್ಕಾಂ ಉದ್ಯೋಗಿ ಹಾಗೂ ಇಂಜಿನಿಯರ್ ಇಮ್ತಿಯಾಜ್ ಪಾಷ ಅವರ ತಂದೆ ಶಾಫಿ ಹಾಜಿ ಅವರು ಪವಿತ್ರ ಹಜ್ ಯಾತ್ರೆ ಮುಗಿಸಿ ತಾಯ್ನಾಡಿಗೆ ಮರಳುತ್ತಿದ್ದ ವೇಳೆ ಹಠಾತ್ ಅನಾರೋಗ್ಯಕ್ಕೆ ಒಳಗಾಗಿ ನಿಧನ ಹೊಂದಿರುತ್ತಾರೆ ಎಂದು ತಿಳಿದುಬಂದಿದೆ
ಹಜ್ ಯಾತ್ರೆ ಪೂರ್ಣಗೊಳಿಸಿ ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಸಂದರ್ಭದಲ್ಲಿ ಅವರಿಗೆ ಅಸ್ವಸ್ಥತೆ ಕಾಣಿಸಿಕೊಂಡಿದ್ದು, ತಕ್ಷಣವೇ ಮಂಗಳೂರಿನ ಕೆಎಂಸಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದರು.
ಮೃತರ ಜನಾಝಾವನ್ನು ಸುಳ್ಯಕ್ಕೆ ತರಲಾಗುತ್ತಿದ್ದು, ಸುಳ್ಯದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗುವುದು. ಬಳಿಕ ಮೃತದೇಹವನ್ನು ಕನಕಪುರಕ್ಕೆ ಕೊಂಡೊಯ್ಯಲಿದ್ದು, ಅಲ್ಲಿನ ಮಸೀದಿಯಲ್ಲಿ ಜನಾಝಾ ನಮಾಝ್ ನೆರವೇರಿಸಿದ ನಂತರ ದಫನ ಕಾರ್ಯ ನಡೆಯಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ಶಾಫಿ ಹಾಜಿ ಅವರು ಮಕ್ಕಳು, ಕುಟುಂಬಸ್ಥರು ಹಾಗೂ ಅಪಾರ ಬಂಧು-ಬಳಗ ಮತ್ತು ಹಿತೈಷಿಗಳನ್ನು ಅಗಲಿದ್ದಾರೆ.
m

Related Posts