ಜಟ್ಟಿಪಳ್ಳ: ಕೊಡಿಯಾಲಬೈಲು ಅಮೈ ಮೂಲದ ಬಾರಿಕ್ಕಾಡ್ ಕುಟುಂಬದ ಹಿರಿಯರು ಆದ ಬಿ ಫಾತಿಮ ಇವರು ಇದೀಗ ಮರಣ ಹೊಂದಿರುವುದಾಗಿ ತಿಳಿದು ಬಂದಿದೆ. ದೀರ್ಘ ಕಾಲದ ವಯೋ ಸಹಜ ಖಾಯಿಲೆಯಿಂದ ಅವರು ಮೃತಪಟ್ಟಿದ್ದಾರೆ.
ಮೃತರು ಮಕ್ಕಳು ಮೊಮ್ಮಕ್ಕಳು ಹಾಗೂ ಮರಿಮೊಮ್ಮಕ್ಕಳನ್ನು ಅಗಲಿದ್ದಾರೆ. ಇವರು ಎಲ್ಲರಿಗೂ ಅತ್ಯಂತ ಚಿರ ಪರಿಚಿತರು ಮತ್ತು, ಜನರು ಇವರನ್ನು ಮಾಮ ( ಅಜ್ಜಿ) ಎಂದು ಕರೆಯುತ್ತಿದ್ದರು. ಇವರು ನಾಟಿ ಚಿಕಿತ್ಸೆಯಲ್ಲಿ ಪರಿಣಿತರಾಗಿದ್ದರು, ಹಲವಾರು ಕಾಯಿಲೆಗಳಿಗೆ ಇವರು ಚಿಕಿತ್ಸೆ ನೀಡಿದ್ದಾರೆ.
ಇವರ ಅಗಲುವಿಕೆಗೆ ಸ್ಥಳೀಯ ಸಂಘ ಸಂಸ್ಥೆಗಳು ಸಂತಾಪ ಸೂಚಿಸಿವೆ.





m

