ಸುಳ್ಯ:
ಅಹ್ಮದುಲ್ ಬದವೀ ಜಮಾಅತ್ ಕಮಿಟಿ, ಸುಣ್ಣಮೂಲೆ ಇದರ ಸ್ಥಾಪಕ ಅಧ್ಯಕ್ಷರೂ, ಕರ್ನಾಟಕ ಮುಸ್ಲಿಂ ಜಮಾಅತ್ ಸುಣ್ಣಮೂಲೆ ಯೂನಿಟ್‌ನ ಹಿರಿಯ ಸದಸ್ಯರೂ ಹಾಗೂ ಕೃಷಿಕರಾದ ಟಿ. ಎಂ. ಮೂಸಾನ್ (70) ಅವರು ಅಲ್ಪಾವಧಿಯ ಅನಾರೋಗ್ಯದಿಂದ ನಿನ್ನೆ ರಾತ್ರಿ ನಿಧನ ಹೊಂದಿದರು.
ಮೃತರು ಪತ್ನಿ, ಎರಡು ಹೆಣ್ಣು ಮಕ್ಕಳು, ಮೂರು ಗಂಡು ಮಕ್ಕಳು ಸೇರಿದಂತೆ ಅಪಾರ ಬಂಧು-ಬಳಗ, ಹಿತೈಷಿಗಳನ್ನು ಅಗಲಿದ್ದಾರೆ.
ಮೃತರ ಜನಾಝಾ ನಮಾಜ್ ಇಂದು ಬೆಳಿಗ್ಗೆ (24/01/2026) 9 ಗಂಟೆಗೆ ಸುಣ್ಣಮೂಲೆ ಅಹ್ಮದುಲ್ ಬದವೀ ಮಸೀದಿಯಲ್ಲಿ ನಡೆಯಲಿದ್ದು, ನಂತರ ದಫನ ಕಾರ್ಯ ನೆರವೇರಲಿದೆ.

