Featured, ಇತರೆ, ಸ್ಥಳೀಯ

ಸಂಪಾಜೆ ಕಲ್ಲುಗುಂಡಿ : ಮಧ್ಯರಾತ್ರಿ ಹೆದ್ದಾರಿಯಲ್ಲಿ ಮರ ಬಿದ್ದು ಸಂಚಾರ ಅಸ್ತವ್ಯಸ್ತ – ತಕ್ಷಣದ ಕಾರ್ಯಾಚರಣೆಯಿಂದ ಸುಗಮ ಸಂಚಾರ

ಸುಳ್ಯ: ಸಂಪಾಜೆ ಕಲ್ಲುಗುಂಡಿ, ಮಧ್ಯರಾತ್ರಿ ಸುಮಾರು 2 ಗಂಟೆಯ ವೇಳೆಗೆ ರಾಷ್ಟ್ರೀಯ ಹೆದ್ದಾರಿ 275 ರ ದೊಡ್ಡಡ್ಕ ಕೊರಗಜ್ಜ ದೇವಸ್ಥಾನದ ಬಳಿ ಭಾರೀ ಮರ ಬಿದ್ದು ವಾಹನ ಸಂಚಾರಕ್ಕೆ ತೀವ್ರ ಅಡ್ಡಿಯುಂಟಾಯಿತು. ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ಕಲ್ಲುಗುಂಡಿ ಪೊಲೀಸ್ ಹೊರಠಾಣೆ ಅಧಿಕಾರಿಗಳು, ಅರಣ್ಯ ಇಲಾಖೆ ಸುಳ್ಯ ಹಾಗೂ ಕಲ್ಲುಗುಂಡಿ ಅಧಿಕಾರಿಗಳು ಮತ್ತು ಸುಳ್ಯ ಪೊಲೀಸ್ ಇಲಾಖೆಯ 112 ಸಿಬ್ಬಂದಿ ಸ್ಥಳಕ್ಕೆ ಧಾವಿಸಿದರು.


ಸಂಚಾರ ಪುನರ್ ಸ್ಥಾಪನೆಗೆ ಕಲ್ಲುಗುಂಡಿ–ಸಂಪಾಜೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರು ಹಾಗೂ ಹಾಲಿ ಸದಸ್ಯರಾದ ಜಿ.ಕೆ. ಹಮೀದ್ ಗೂನಡ್ಕ, ಉಪಾಧ್ಯಕ್ಷರಾದ ಎಸ್.ಕೆ. ಹನೀಫ್ ಸೇರಿದಂತೆ ಸ್ಥಳೀಯರು ಸಕ್ರಿಯವಾಗಿ ಸಹಕರಿಸಿದರು. ಅಲ್ಲದೇ ಸ್ಥಳೀಯ ಆಟೋ ಚಾಲಕರಾದ ಯಶೋಧರ, ದೊಡ್ಡಡ್ಕ ರವಿ ಅವರುಗಳ ಸಹಾಯದಿಂದ ಮರವನ್ನು ತೆರವುಗೊಳಿಸಲಾಯಿತು.
ಸಂಬಂಧಪಟ್ಟ ಇಲಾಖೆಗಳ ಸಮನ್ವಯ ಹಾಗೂ ಸ್ಥಳೀಯರ ಸಾಮಾಜಿಕ ಹೊಣೆಗಾರಿಕೆಯ ಪರಿಣಾಮವಾಗಿ ಕಡಿಮೆ ಸಮಯದಲ್ಲೇ ರಸ್ತೆ ತೆರವುಗೊಳಿಸಿ ವಾಹನ ಸಂಚಾರವನ್ನು ಸುಗಮಗೊಳಿಸಲಾಯಿತು. ಸಾರ್ವಜನಿಕರ ಸುರಕ್ಷತೆ ಹಾಗೂ ಸಂಚಾರ ವ್ಯವಸ್ಥೆಯನ್ನು ಕಾಪಾಡುವಲ್ಲಿ ಎಲ್ಲರ ಸಹಕಾರ ಶ್ಲಾಘನೀಯವಾಗಿದೆ.

Related Posts