Featured, ಇತರೆ, ಸ್ಥಳೀಯ

ಕೇರಳ ಸರ್ಕಾರದಿಂದ ಶಾಹಿದ್ ತೆಕ್ಕಿಲ್ ಅವರಿಗೆ ಸಚಿವ ಸ್ಥಾನಮಾನದ ಗೌರವದ ಆತಿಥ್ಯ

ಸುಳ್ಯ/ತಿರುವನಂತಪುರಂ, ಮೇ 16: ಕರ್ನಾಟಕ ಸರ್ಕಾರದ ಕನಿಷ್ಠ ವೇತನ ಸಲಹಾ ಮಂಡಳಿಯ ಅಧ್ಯಕ್ಷರಾಗಿರುವ ಹಾಗೂ ಸಚಿವ ಸ್ಥಾನಮಾನ ಹೊಂದಿರುವ ಶ್ರೀ ಟಿ.ಎಂ. ಶಾಹಿದ್ ತೆಕ್ಕಿಲ್ ಅವರ ಕೇರಳ ಪ್ರವಾಸಕ್ಕೆ ಸಂಬಂಧಿಸಿ ಕೇರಳ ಸರ್ಕಾರ ವಿಶೇಷ ಪ್ರೋಟೋಕಾಲ್ ಹಾಗೂ ಭದ್ರತಾ ವ್ಯವಸ್ಥೆಗಳನ್ನು ಕೈಗೊಳ್ಳಲು ಆದೇಶ ಹೊರಡಿಸಿದೆ

ಕೇರಳದ ನೂತನ ಮುಖ್ಯಮಂತ್ರಿ ವಿ.ಡಿ. ಸತೀಶನ್ ಅವರ ಆಪ್ತ ಹಾಗೂ ಆತ್ಮೀಯ ಸ್ನೇಹಿತರಾದ ಶಾಹಿದ್ ತೆಕ್ಕಿಲ್ ಅವರಿಗೆ ಕೇರಳ ಸರ್ಕಾರದಿಂದ ವಿಶೇಷ ಆತಿಥ್ಯ ಲಭಿಸಿದೆ.

ಮೇ 15ರಿಂದ 18ರವರೆಗೆ ನಡೆಯಲಿರುವ ಈ ಪ್ರವಾಸದ ವೇಳೆ ಶಾಹಿದ್ ತೆಕ್ಕಿಲ್ ಅವರನ್ನು ರಾಜ್ಯ ಅತಿಥಿಯಾಗಿ ಪರಿಗಣಿಸಿ ಸ್ವಾಗತ, ಪ್ರೋಟೋಕಾಲ್, ಭದ್ರತೆ, ವಸತಿ ಹಾಗೂ ಆತಿಥ್ಯ ವ್ಯವಸ್ಥೆಗಳನ್ನು ಕಲ್ಪಿಸಲು ಕೇರಳ ಸರ್ಕಾರದ ಸಾಮಾನ್ಯ ಆಡಳಿತ (ಪ್ರೋಟೋಕಾಲ್) ಇಲಾಖೆ ನಿರ್ದೇಶನ ನೀಡಿದೆ.
ಈ ಕುರಿತು ಹೊರಡಿಸಿರುವ ಅಧಿಕೃತ ಪತ್ರದಲ್ಲಿ ತಿರುವನಂತಪುರಂ ವಿಮಾನ ನಿಲ್ದಾಣದಲ್ಲಿ ವಿಶೇಷ ಸ್ವಾಗತ ವ್ಯವಸ್ಥೆ ಮಾಡುವುದರ ಜೊತೆಗೆ, ಅವರ ಪ್ರಯಾಣಕ್ಕಾಗಿ ಸರ್ಕಾರಿ ವಾಹನ ಒದಗಿಸಲು ಸೂಚಿಸಲಾಗಿದೆ. ಮೇ 17ರಂದು ಸಂಜೆ 4.35ಕ್ಕೆ 6E 6427 ವಿಮಾನದ ಮೂಲಕ ತಿರುವನಂತಪುರಂಗೆ ಆಗಮಿಸಲಿರುವ ಶಾಹಿದ್ ತೆಕ್ಕಿಲ್ ಅವರಿಗೆ ವಿವಾಂಟಾ ಹೋಟೆಲ್‌ನಲ್ಲಿ ವಸತಿ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಲಾಗಿದೆ.
ಇದೇ ವೇಳೆ ರಾಜ್ಯ ಪೊಲೀಸ್ ಇಲಾಖೆಗೆ ಅಗತ್ಯ ಭದ್ರತಾ ವ್ಯವಸ್ಥೆಗಳನ್ನು ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ. ಕೇರಳ ಸರ್ಕಾರದ ಉಪ ಕಾರ್ಯದರ್ಶಿ ಹಾಗೂ ರಾಜ್ಯ ಪ್ರೋಟೋಕಾಲ್ ಅಧಿಕಾರಿ ಹರಿಕೃಷ್ಣನ್ ಎಂ.ಎಸ್. ಈ ಆದೇಶಕ್ಕೆ ಸಹಿ ಹಾಕಿದ್ದಾರೆ.
m

Related Posts