Featured, ಇತರೆ, ಸ್ಥಳೀಯ

ಜಟ್ಟಿಪಳ್ಳ ಮದ್ರಸ ಸುನ್ನೀ ಬಾಲ ಸಂಘದ ವಾರ್ಷಿಕ ಮಹಾಸಭೆ

ಎಸ್ ಬಿ ಎಸ್ ಸಂಘಟಿತ ಕಾರ್ಯಾಚರಣೆಯ ಮೊದಲ ಹೆಜ್ಜೆ,- ಲತೀಫ್ ಸಖಾಫಿ

ಹಯಾತುಲ್ ಇಸ್ಲಾಂ ಕಮಿಟಿ ರಿ ಜಟ್ಟಿಪಳ್ಳದ ಬುಸ್ತಾನುಲ್ ಉಲೂಂ ಮದ್ರಸ ಇದರ ವಿದ್ಯಾರ್ಥಿ ಸಂಘಟನೆ ಸುನ್ನೀ ಬಾಲ ಸಂಘದ (ಎಸ್ ಬಿ ಎಸ್) ಪ್ರಸಕ್ತ ಸಾಲಿನ ವಾರ್ಷಿಕ ಮಹಾಸಭೆಯು ಮದ್ರಸ ಸದರ್ ಉಸ್ತಾದರಾದ ಅಬ್ದುಲ್ ಲತೀಫ್ ಸಖಾಫಿ ಗೂನಡ್ಕ ರವರ ಅಧ್ಯಕ್ಷತೆಯಲ್ಲಿ ನಡೆಯಿತು.
ಮುಅಲ್ಲಿಂ ಸಿರಾಜ್ ಸಅದಿ ಅಲೆಕ್ಕಾಡಿ ಯವರು ಉದ್ಘಾಟಿಸಿದರು ವಿದ್ಯಾರ್ಥಿಗಳಾದ ಮುಹಮ್ಮದ್ ಮುನಾಝ್ ಕಿರಾಅತ್ ಪಠಿಸಿ, ಮುಹಮ್ಮದ್ ಅಲ್ತಾಫ್ ಸ್ವಾಗತಿಸಲಾಯಿತು

ಕಾರ್ಯದರ್ಶಿ ಮುಹಮ್ಮದ್ ರಾಫಿ ವರದಿ ಹಾಗೂ ಲೆಕ್ಕ ಪತ್ರ ಮಂಡಿಸಿ, ವಿದ್ಯಾರ್ಥಿಗಳು ಪ್ರತಿಭಾ ಪ್ರದರ್ಶನ ನಡೆಸಿದರು. ಲತೀಫ್ ಸಖಾಫಿ ಯವರು ಅಧ್ಯಕ್ಷ ಭಾಷಣದಲ್ಲಿ ಎಸ್ ಬಿ ಎಸ್ ವಿದ್ಯಾರ್ಥಿ ಸಂಘಟನೆಯ ಅನಿವಾರ್ಯತೆ ಮತ್ತು ಕಾರ್ಯ ವೈಖರಿಯ ಬಗ್ಗೆ ವಿವರಿಸಿ ಎಸ್ ಬಿ ಎಸ್ ಸಂಘಟಿತ ಕಾರ್ಯಾಚರಣೆಯ ಮೊದಲ ಹೆಜ್ಜೆಯೆಂದರು.ಇಂದಿನ ಮಕ್ಕಳೇ ಮುಂದಿನ ಜನಾಂಗ ಬಾಲ ಸಂಘದ ಮೂಲಕ ತರಬೇತಿ ಪಡೆದು ಮಸೀದಿ,ಮದ್ರಸ, ಶಿಕ್ಷಣ ಸಂಸ್ಥೆ,ಸಮಾಜ ಸೇವಾ ಸಂಘಗಳ ಸದಸ್ಯರುಗಳಾಗಿ ಮಾದರಿ ಸೇವೆಯಲ್ಲಿ ತೊಡಗಿಸಲು ಸಲಹೆ ನೀಡಿದರು

ನಂತರ ನೂತನ ಪದಾಧಿಕಾರಿಗಳನ್ನು ಆಯ್ಕೆ ಗೊಳಿಸಲಾಯಿತು.
ಅಧ್ಯಕ್ಷರಾಗಿ ಮುಹಮ್ಮದ್ ಅಲ್ತಾಫ್, ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಸಹಲ್, ಕೋಶಾಧಿಕಾರಿ ಮುಹಮ್ಮದ್ ಫಲಾಹ್, ಉಪಾಧ್ಯಕ್ಷರುಗಳಾಗಿ ಮುಹಮ್ಮದ್ ರಾಫಿ, ಮುಹಮ್ಮದ್ ತಹ್ಝೀಂ, ಕಾರ್ಯದರ್ಶಿಗಳಾಗಿ ಉಝೈಪ್ ಎಂ ಟಿ, ಅಬ್ದುಲ್ ಸಾಹಿಲ್ ಸದಸ್ಯರುಗಳಾಗಿ ಮುಹಮ್ಮದ್ ಮುಬಶ್ಶಿರ್, ಮುಹಮ್ಮದ್ ರಾಝಿ, ಅಬೂಬಕ್ಕರ್ ಮುಆಝ್, ಮುಹಮ್ಮದ್ ಅಝೀಂ, ಮುಹಮ್ಮದ್ ಸಅದ್, ಮುಹಮ್ಮದ್ ಮುನಾಝ್, ಮುಹಮ್ಮದ್ ಶಮೀಲ್ ಹಾಗೂ ಗೌರವಾಧ್ಯಕ್ಷರಾಗಿ ಅಬ್ದುಲ್ ಲತೀಫ್ ಸಖಾಫಿ ಗೂನಡ್ಕ,ಮುದಬ್ಬಿರ್ ರಾಗಿ ಸಿರಾಜ್ ಸಅದಿ ಅಲೆಕ್ಕಾಡಿ ಯವರು ಆಯ್ಕೆಯಾದರು

ಈ ಸಂದರ್ಭದಲ್ಲಿ ವಿದ್ಯಾರ್ಥಿಗಳ ಓದು ಆಸಕ್ತಿ ಹೆಚ್ಚಿಸಲು ಆಕರ್ಷಕ ಶೈಲಿಯಲ್ಲಿ ಕೇಂದ್ರ ಅಧ್ಯಾಪಕ ಒಕ್ಕೂಟ ಹೊರತರುವ ಹಮ್ರಾ ವರ್ ದಾ ಪುಸ್ತಕದ ಮೆಂಬರ್ ಶಿಪ್ ಕಾಂಪೈನ್ ಚಾಲನೆ ನೀಡಲಾಯಿತು

m

Related Posts