Featured, ಲೇಖನ, ಸ್ಥಳೀಯ

ಸ್ವಾರ್ಥ ಪ್ರಪಂಚದ ನಿಸ್ವಾರ್ಥ ಗೆಳೆತನ!

ಗೆಳೆತನದ ಸುವಿಶಾಲ ಆಲದಡಿ ಪಸರಿಸಿಹ ತಣ್ಣೆಳಲ ತಂಪಿನಲಿ ತಂಗಿರುವೆನು ಎಂಬ ಕಣವಿಯವರ ಸಾಲುಗಳು ಅದೆಷ್ಟು ಅದ್ಭುತವೋ ಅಷ್ಟೇ ಸತ್ಯ . ನಮ್ಮ ಮಾನವ ಜೀವನದಲ್ಲಿ ನಮಗೆ ಅದೆಷ್ಟು ಸಂಬಂಧಗಳು ಬಂಧುಗಳು ಉದಾಹರಣೆಗೆ ಗಂಡ ಹೆಂಡತಿ, ಅಣ್ಣ ತಮ್ಮ ,ಅಕ್ಕ ತಂಗಿ ಹೀಗೇ ಹಲವಾರು ಸಂಬಂಧಗಳು ಬಂಧನಗಳು ಈ ಎಲ್ಲಾ ಬಂಧಗಳು ನಾವು ಹುಟ್ಟುತ್ತಾ ಶುರುವಾದರೆ ನಾವು ಬೆಳೆಯುತ್ತಾ ಬೆಳೆಯುತ್ತಾ ನಮಗೆ ಇನ್ನೊಂದು ಬಂಧ ಜೊತೆಯಾಗುತ್ತದೆ ಅದು ಇದೆಲ್ಲದಕ್ಕಿಂತ ಶ್ರೇಷ್ಠ ಬಂಧ ಸಂಬಂಧ ನನ್ನ ಪ್ರಕಾರ ಈ ಪ್ರಪಂಚದಲ್ಲಿ ಅದಕ್ಕಿಂತ ಪವಿತ್ರವಾದ, ಶ್ರೇಷ್ಠವಾದ ಬಂಧ ಇನ್ನೊಂದಿಲ್ಲ ಅದುವೇ ಗೆಳೆತನ..

ಈ ಗೆಳೆತನ ಎಂಬ ನಾಲ್ಕು ಅಕ್ಷರದ ಪದದಲ್ಲಿ ಸಿಗುವ ಸುಖ ಸಂತೋಷ ಬಹುಶಃ ಬೇರೆ ಯಾವ ಪದದಲ್ಲೂ ಸಿಗಲು ಸಾಧ್ಯವಿಲ್ಲ ಉಳಿದೆಲ್ಲ ಬಂಧಗಳು ನಾವು ಹುಟ್ಟುತ್ತಲ್ಲೇ ಶುರುವಾದರೆ ಈ ಗೆಳೆತನ ಎನ್ನುವ ಬಂಧ ನಮ್ಮ ಜೊತೆಯಾಗುವುದು ಅನಿರೀಕ್ಷಿತವಾಗಿ! ಈ ಗೆಳೆತನ ಎನ್ನುವ ಪವಿತ್ರ ಬಂಧ ಜಾತಿ, ಮತ, ಅಂತಸ್ತು, ವರ್ಚಸ್ಸು, ಲಿಂಗ ಇವುಗಳ ಹಂಗನ್ನು ತೊರೆದು ಎರಡು ಹೃದಯಗಳ ನಡುವೆ ಹುಟ್ಟಿಕೊಳ್ಳುವಂತ ಒಂದು ಅದ್ಭುತ ಬಂಧ.

ಕೆಲವೊಮ್ಮೆ ನಮ್ಮ ಕೆಲವೊಂದು ವಿಚಾರಗಳನ್ನು ಆಗಿರಬಹುದು ಅಥವಾ ಸಮಸ್ಯೆಗಳನ್ನೇ ಇರಬಹುದು ನಮ್ಮ ಹೆತ್ತವರ ಜೊತೆಗೂ ಕೂಡ ಹಂಚಿಕೊಳ್ಳಲಾಗದೆ ಇದ್ದಾಗ ನಮ್ಮ ನೋವಿಗೆ ಜೊತೆಯಾಗುವ ಹೃದಯವೇ ಗೆಳೆತನ. ಗೆಳೆತನ ಎಂದರೆ ಜೊತೆಯಲ್ಲಿ ಸುತ್ತಾಡಿ ಸುಖದಲ್ಲಿದ್ದಾಗ ಜೊತೆಯಲ್ಲಿದ್ದು ಕಷ್ಟ ಬಂದಾಗ ಬಿಟ್ಟು ಹೋಗುವುದು ಅದು ಎಂದಿಗೂ ಗೆಳೆತನವಾಗಲು ಸಾಧ್ಯವೇ ಇಲ್ಲ! ನಿಜವಾದ ಗೆಳೆತನ ಎಂದರೆ ಸುಖದಲ್ಲಿದ್ದಾಗಲೂ ಜೊತೆಯಲ್ಲಿದ್ದು ದುಃಖದಲ್ಲಿದ್ದಾಗ ನಮ್ಮಜೊತೆಯಲ್ಲಿದ್ದು ನಮ್ಮನ್ನು ಯಾರು ಕೈ ಹಿಡಿದು ಮೇಲಕ್ಕೆ ಎತ್ತುತ್ತಾನೋ ಅವನೇ ಅಥವಾ ಅವಳೇ ನಿಜವಾದ ಗೆಳೆಯ ಅಥವಾ ಗೆಳತಿ. ಮತ್ತೆ ಈ ಗೆಳೆತನಕ್ಕೆ ಗಂಡು ಹೆಣ್ಣು ಎಂಬ ಭೇದಭಾವ ಇಲ್ಲ ಒಬ್ಬ ಹುಡುಗ ಹುಡುಗನನ್ನೇ ಗೆಳೆತನ ಮಾಡಬೇಕು ಅಥವಾ ಒಬ್ಬಳು ಹುಡುಗಿ ಹುಡುಗಿಯನ್ನೇ ಗೆಳೆತನ ಮಾಡಬೇಕೆಂಬ ಶರತ್ತು ಇಲ್ಲ ಯಾರು ಯಾರನ್ನು ಬೇಕಾದರೂ ಗೆಳೆತನ ಮಾಡಬಹುದು ಆದರೆ ಇಬ್ಬರ ಹೃದಯ ಮಾತ್ರ ಪರಿಶುದ್ಧವಾಗಿರಬೇಕು ಅಷ್ಟೇ.

ನನ್ನ ಪ್ರಕಾರ ಪ್ರತಿಯೊಬ್ಬರ ಜೀವನದಲ್ಲೂ ಇಂತಹ ಗೆಳೆಯ ಒಬ್ಬ ಇದ್ದೇ ಇರುತ್ತಾನೆ ಅವನು ಗೊತ್ತಿದ್ದೋ ಗೊತ್ತಿಲ್ಲದೆಯೋ ನಮ್ಮ ನೋವಿನಲ್ಲಿ ಪಾಲುದಾರನಾಗುತ್ತಾನೆ ದುಃಖದಲ್ಲಿದ್ದಾಗ ಸಮಾಧಾನ ಮಾಡುತ್ತಾನೆ ನಮ್ಮಲ್ಲಿ ಆತ್ಮವಿಶ್ವಾಸ ತುಂಬುತ್ತಾನೆ ಒಂದು ವೇಳೆ ಅಂತ ಗೆಳೆಯ ಅಥವಾ ಗೆಳತಿ ಪ್ರತಿಯೊಬ್ಬರ ಜೀವನದಲ್ಲಿ ಇದ್ದರೆ ಅವರಷ್ಟು ಅದೃಷ್ಟವಂತರು ಇನ್ನೊಬ್ಬರಿಲ್ಲ !

ಯಾಕೆಂದರೆ ಈ ಗೆಳೆತನ ಎಂಬ ನಾಲ್ಕು ಅಕ್ಷರದ ಅದ್ಭುತ ಶಕ್ತಿ ಒಂದು ನಮ್ಮೊಂದಿಗಿದ್ದರೆ ಎಲ್ಲ ಇದ್ದಂತೆ ಜೀವನದಲ್ಲಿ ನಾವು ಏನನ್ನು ಬೇಕಾದರೂ ಸಾಧಿಸಬಹುದು. ಈ ಗೆಳೆತನಕ್ಕೆ ಪುರಾತನ ಕಾಲದಿಂದಲೂ ಬಹಳ ಪ್ರಾಮುಖ್ಯತೆ ಇರುವುದು ನಮಗೆಲ್ಲ ತಿಳಿದೇ ಇದೆ ಉದಾಹರಣೆಗೆ ಕೃಷ್ಣ ಸುಧಾಮನ ಗೆಳೆತನ ಇರಬಹುದು ಯಾವುದೇ ಸ್ವಾರ್ಥ ಇಲ್ಲದ ನಿಸ್ವಾರ್ಥ ಗೆಳೆತನ ಅವರದು! ಆದರೆ ಕೆಲವೊಂದು ಬಾರಿ ನಾವು ಈ ಗೆಳೆತನ ಮಾಡಬೇಕಾದರೂ ಕೂಡ ಬಹಳಷ್ಟು ಬಾರಿ ಯೋಚಿಸಬೇಕಾಗುತ್ತದೆ ಯಾಕೆಂದರೆ ಸಜ್ಜನರ ಸಂಗ ಹೆಜ್ಜೆನು ಸವಿದಂತೆ ಎಂಬ ಮಾತಿನಂತೆ ಯಾವಾಗ ನಾವು ಉತ್ತಮರೊಂದಿಗೆ ಸ್ನೇಹವನ್ನು ಮಾಡುತ್ತೇವೋ ಆ ಸ್ನೇಹ ನಮ್ಮನ್ನು ಜೀವನದಲ್ಲಿ ಉತ್ತುಂಗಕ್ಕೆ ಕೊಂಡೊಯ್ಯುವುದರಲ್ಲಿ ಸಂಶಯವಿಲ್ಲ ಹಾಗೆಯೇ ಯಾವಾಗ ನಾವು ದುರ್ಜನರ ಹಾಗೂ ಕೆಟ್ಟವರ ಗೆಳೆತನವನ್ನು ಮಾಡುತ್ತೇವೋ ಆ ಗೆಳೆತನ ನಮ್ಮನ್ನು ಪ್ರಪಾತಕ್ಕೆ ನೂಕುವುದರಲ್ಲೂ ಸಂಶಯವಿಲ್ಲ! ಹಾಗಾಗಿ ಸಾವಿರಾರು ಗೆಳೆಯರಿಗಿಂತ ನಮಗೆ ಸದಾ ಹಿತವನ್ನೇ ಬಯಸುವ ಒಬ್ಬ ಗೆಳೆಯನಿದ್ದರೆ ಸಾಕು ಜೀವನವೇ ಸುಖಮಯ.

ನನ್ನ ಪ್ರಕಾರ ಸ್ನೇಹವಿಲ್ಲದ ಮನುಷ್ಯನ ಜೀವನ ನಶ್ವರ ಯಾಕೆಂದರೆ ಮನುಷ್ಯ ಒಬ್ಬ ಸಂಘ ಜೀವಿ ಇದು ನಮಗೆಲ್ಲ ತಿಳಿದಿರುವ ವಿಷಯ ಹಾಗೆಯೇ ಈ ಮನುಷ್ಯ ಜೀವನಕ್ಕೆ ಸ್ನೇಹ ಎನ್ನುವುದು ಅತ್ಯಗತ್ಯ ಯಾಕೆಂದರೆ ನಮ್ಮ ಜೀವನದಲ್ಲಿ ಅದೆಷ್ಟು ಆಗುಹೋಗುಗಳು ನೋವು ನಲಿವುಗಳು ಇರುತ್ತವೆ ಅದನ್ನು ಹಂಚಿಕೊಳ್ಳಲಿಕ್ಕಾದರೂ ಸ್ನೇಹ ಬೇಕೇ ಬೇಕು. ನಿಮಗೂ ಅನುಭವ ವಾಗಿರಬಹುದು ಅದೇನಿಂದರೆ ನಮ್ಮ ಜೀವನದಲ್ಲಿ ಏನೇ ಆದರೂ ಯಶಸ್ಸುಗಳಿಸಿದರು ಅಥವಾ ಪ್ರತಿದಿನ ನಮ್ಮ ಜೀವನದಲ್ಲಿ ಏನೆಲ್ಲಾ ಘಟನೆಗಳು ನಡೆಯುತ್ತವೆಯೋ ಅದು ಒಳ್ಳೆಯದಿರಬಹುದು ಅಥವಾ ಕೆಟ್ಟದೇ ಇರಬಹುದು ಅದನ್ನು ಒಂದು ಬಾರಿ ನಮ್ಮ ಗೆಳೆಯ ಅಥವಾ ಗೆಳತಿ ಜೊತೆ ಹಂಚಿಕೊಂಡಾಗ ಸಿಗುವ ಸಂತೋಷ ಇದೆಯಲ್ಲಾ ಅದಕ್ಕೆ ಬೆಲೆ ಕಟ್ಟಲು ಅಸಾಧ್ಯ.ಹಾಗಾಗಿ ಜೀವನದಲ್ಲಿ ಸಂತೋಷ ಇರಬೇಕು ಎಂದರೆ ಅಲ್ಲಿ ಸ್ನೇಹ ಇರಲೇ ಬೇಕು ಆ ಸ್ನೇಹ ಸಜ್ಜನರದ್ದೇ ಆಗಿರಬೇಕು ನೆನಪಿರಲಿ! ಒಟ್ಟಿನಲ್ಲಿ ಈ ಗೆಳೆತನ ಎಂಬ ನಾಲ್ಕಕ್ಷರವೇ ಒಂದು ಜಾದು.

ಪ್ರಾಪ್ತಿ ಗೌಡ

m

Related Posts