ಮಂಗಳೂರು : ಕುಳಾಯಿ ಬದ್ರಿಯಾ ಮಸೀದಿ ವಠಾರದಲ್ಲಿ ನಡೆದ ಭಾರತದ 79 ನೇ ಸ್ವಾತಂತ್ರ ಸಮಾರಂಭ ಅತೀ ವಿಜೃಂಭಣೆಯಿಂದ ನಡೆಯಿತು. ಬದ್ರಿಯಾ ಮಸೀದಿ ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಮುಬಾರಕ್ ಸ್ವಾಗತ ಮಾಡಿದರು ಅಧ್ಯಕ್ಷರಾದ ಇಮ್ತಿಯಾಜ್ ಧ್ವಜಾರೋಹಣ ಗೈದರು ಖತೀಬರಾದ ನುಮಾನ್ ಸಕಾಫಿ ಮಾಲಾಡಿ ದುಆ ಮಾಡಿ ರಾಷ್ಟ್ರ ರಕ್ಷಣೆಗೆ ಒಗ್ಗಟ್ಟಿನಿಂದ ಹೋರಾಡಬೇಕೆಂದು ಕರೆ ನೀಡಿದರು.

ಸದರ್ ಮುಅಲ್ಲಿಮರಾದ ಸಿದ್ದಿಕ್ ಸಅದಿ ಸಕಲೇಶಪುರ ಸಂದೇಶ ಭಾಷಣ ಮಾಡುತ್ತಾ ಭಾರತ ಸ್ವಾತಂತ್ರಕ್ಕಾಗಿ ಬ್ರಿಟಿಷರ ವಿರುದ್ಧ ಮುಸ್ಲಿಮರು ಹೋರಾಡಲು ಪ್ರಮುಖ ಕಾರಣ ಪ್ರವಾದಿ ಸ. ಅ ರವರ ಸಂದೇಶ ಆಗಿದೆ ಅದನ್ನೇ ನಮ್ಮ ಮದ್ರಸಗಳಲ್ಲಿ ಪುಟಾಣಿ ಮಕ್ಕಳಿಗೆ ಕಳಿಸುವುದು ಮದ್ರಸ ಪುಸ್ತಕ ಎಲ್ಲಾ ಭಾಷೆಗಳಲ್ಲಿ ಇರುವುದರಿಂದ ಯಾರಿಗೆ ಬೇಕಾದರೂ ಪರೀಕ್ಷಿಸಬಹುದು ಎಂದು ಹೇಳಿದರು.

ಫರಾಝ್ ಪ್ರತಿಜ್ಞಾ ವಚನ ನುಡಿದರು. ಹನೀನ್ ಹುಸೈನ್, ಅರ್ ಫ್ ರಹ್ಮಾನ್, ರಯೀಸ್ ದೇಶ ಭಕ್ತಿ, ಹಾಗೂ ಸೌಹಾರ್ದ ಹಾಡು ಹಾಡಿದರು. ಸ್ವಾತಂತ್ರೂತ್ಸವದ ಅಂಗವಾಗಿ ನಡೆಸಿದ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯ್ತು ಅದ್ಯಾಪಕರಾದ ಅಶ್ರಫ್ ಝೖನಿ, ಉಸ್ಮಾನ್ ಮದನಿ, ಹಾಗೂ BJM ಆಡಳಿತ ಸಮಿತಿ, ನುಸ್ರತುಲ್ ಇಸ್ಲಾಂ ಅಸೋಸಿಯೇಷನ್ ಸಮಿತಿಯ ಪದಾಧಿಕಾರಿಗಳು ಜಮಾತಿನ ಹಿರಿಯರು, ಕಿರಿಯರು, ವಿದ್ಯಾರ್ಥಿಗಳು ಸಹಸ್ರ ಸಂಖ್ಯೆಯಲ್ಲಿ ಬಾಗವಹಿಸಿ ಕಾರ್ಯಕ್ರಮ ಯಶಸ್ವೀಗೊಳಿಸಿದರು ಕೊನೆಯಲ್ಲಿ ಕಾರ್ಯದರ್ಶಿ ವಂದಿಸಿ ಸ್ವಲಾತಿನೊಂದಿಗೆ ಕಾರ್ಯಕ್ರಮ ಮುಕ್ತಯಗೊಳಿಸಲಾಯ್ತು.




m
