ಕಾಲ ಸುಮಾರು 2025, “ಆರ್ಟಿಫಿಷಿಯಲ್ ಇಂಟಲಿಜೆಂನ್ಸ್” ಯುಗ..ಹೇಳಲು-ಕೇಳಲು ಎಷ್ಟು ಸುಂದರ. ಒಬ್ಬ ಮನುಷ್ಯನ ಕೆಲಸವನ್ನು ಕ್ಷಿಪರವಾಗಿ ಮಾಡಿ ಮುಗಿಸಬಲ್ಲ ಒಂದು ಆಧುನಿಕ ತಂತ್ರಜ್ಞಾನ.. ಇರಲಿ ಬಿಡಿ ನಮ್ಮ ವಿಷಯ ಇಧೇನು ಅಲ್ಲ. ಇಲ್ಲದವರ ಪಾಡಿಗೆ ಈ ನಾಲ್ಕು ಅಕ್ಷರವು ಆತನ ನಿದ್ಧೆಯನ್ನೇ ಕೆಡಿಸಿ Ernakulam, ಖಿನ್ನತಗಳಪಡಿಸುತ್ತದೆ ಹಾಗೂ ಸಮಾಜವು ಆತನನ್ನು ಕಡೆಗಣಿಸುತ್ತದೆ.. ಆ ನಾಲ್ಕು ಪದವೇ “ನಿರುದ್ಯೋಗ”.
ನಿರುದ್ಯೋಗವು ನಮ್ಮ ಸಮಾಜ ಎದುರಿಸುವ ಬಗೆಹರಿಸಲಾಗುವ ಆದರೆ ಬಗೆಹರಿಸದ ಒಂದು ಗಂಭೀರವಾದ ಸಮಸ್ಯೆಯಾಗಿ ಮಾರ್ಪಟ್ಟಿದೆ. ಹೇಳುವಾಗ ಅಷ್ಟು ದೊಡ್ಡ ಪರಿಣಾಮಕಾರಿಯಾದಂತಹ ವಿಷಯವಲ್ಲ, ಆದರೆ ಅದರ ಪರಿಣಾಮ ಏನು ಎಂದು ತಿಳಿಯಬೇಕಾದರೆ ಕಲಿಕೆ ಮುಗಿಸಿ ಉದ್ಯೋಗ ಸಂದರ್ಶನಕ್ಕೆ ಕೂತು ಕೂತು ಸೀಟು ಬಿಸಿ ಮಾಡಿದವರ ಜೊತೆ ಕೇಳಬೇಕು. ಅಂತೂ, ಕಲಿಕೆ ಮಾಡಿ ಮುಗಿಸಲು ಈ ಕಾಲದಲ್ಲಿ ಅಷ್ಟು ಕಷ್ಟವಿದೆ..ಇಂದಿನ ಕಾಲದಲ್ಲಿ ಕಲಿಕೆ ಎಂಬುದು ಒಂದು ವ್ಯವಹಾರ, ಆ ವ್ಯವಹಾರದಲ್ಲಿ ಗ್ರಾಹಕನಾಗಿ ಅರಿವು ಎಂಬ ಉತ್ಪನ್ನವನ್ನು ಲಕ್ಷಗಟ್ಟಲೆ ಕೊಟ್ಟು ಖರೀದಿಸಿ ಅದೇ ಉತ್ಪನ್ನದಿಂದ ಉಪಯೋಗ ಪಡೆಯಲು ಅಲೆಮಾರಿ ಜೀವನ ನಡೆಸಬೇಕಾದ ಸ್ಥಿತಿ. UGC ದಾಖಲೆಯ ಪ್ರಕಾರ ಸರಾಸರಿ ಒಂದು ವರ್ಷದಲ್ಲಿ ಭಾರತವು 3 ಮಿಲಿಯನ್ ಪದವೀಧರರನ್ನು ಹುಟ್ಟು ಹಾಕುತ್ತದೆ.. ಎಲ್ಲಿದ್ದಾರೆ ಇವರೆಲ್ಲ?? ಬಹುಷಃ ಆಗಿರಬಹುದು, ಸೋಶಿಯಲ್ ಮೀಡಿಯಾಗಳಲ್ಲಿ ಕಾಣುವ ಹಾಗೆ ಪದವಿ ಸರ್ಟಿಫಿಕೇಟ್ ಇಟ್ಟುಕೊಂಡು ಬೊಂಡ ಕಡಿಯುವುದು, ಸಾರಣೆ ಕೆಲಸ ಮಾಡುವುದು ಇಂತದೆಲ್ಲದರಲ್ಲಿ ನಿರತಾರಾಗಿರಬಹುದು.. ಹಾಗೆ ಹೇಳಿ ಅಂತ ಕೆಲಸವು ಕೆಳಮಟ್ಟದ್ದು ಎಂದು ವರ್ಣಿಸಿಲ್ಲ. ಈ ಕೆಲಸಗಳಿಗೆ ಪದವಿ ಬೇಕೇ? ಸಾಮರ್ಥ್ಯಕ್ಕನುಸರವಾದ ಕೆಲಸವಲ್ಲವೇ ಉತ್ತಮ..?
ನಿರುದ್ಯೋಗಕ್ಕಿರುವ ಕೆಲವು ಮೂಲ ಕಾರಣಗಳು ಏನೆಂಂದು ಹೇಳಬಹುದು?
ನನ್ನ ಪ್ರಕಾರ ಶೈಕ್ಷಣಿಕ ವ್ಯವಸ್ಥೆಯನ್ನು ಅಸಮರ್ಪಕತೆ, ಜನಸಂಖ್ಯಾ ಸ್ಫೋಟ ಮತ್ತು ಕೌಶಳಭಿವೃದ್ಧಿಯ ಕೊರತೆ, ಸರ್ಕಾರದ ನೀತಿಗಳ ಅಸಮರ್ಪಕ ಕಾರ್ಯಚರಣೆ. ಬಾಕಿ ಎಲ್ಲ ವಿಷಯಗಳನ್ನು ಬಿಡಿ, ಹೇಳಿ-ಕೇಳಿ ಸುಖವಿಲ್ಲ. ಇದರಲ್ಲಿ ಬಗೆಹರಿಸಲು ಸಾಧ್ಯವಿರುವ ಒಂದು ಸಮಸ್ಯೆ ಯಾವುದೆಂದರೆ “ಕೌಶಲ ಭಿವೃದ್ಧಿ”.
ಮುಖ್ಯವಾಗಿ ಒಬ್ಬ ವಿದ್ಯಾರ್ಥಿಯ ಸಂವಹನ ಸಾಮರ್ಥ್ಯ. ಅದು ಆಂಗ್ಲ ಭಾಷ ನಿರರ್ಗಳತೆ. ಇದಕ್ಕಾಗಿ ಇನ್ಸ್ಟಿಟ್ಯೂಷನ್ಗಳಲ್ಲಿ ಪುಸ್ತಕದ ಬದನೇಕಾಯಿಗಳ ಜೊತೆಗೆ “ಪರ್ಸನಲ್ ಡೆವಲಪ್ಮೆಂಟ್” ಎಂಬ ಪ್ರಕ್ರಿಯೆಯನ್ನು ಏರ್ಪಡಿಸಬೇಕು, ಇದು ವೃತ್ತಿ ಜೀವನದಲ್ಲಿ ವಿದ್ಯಾರ್ಥಿಗಳಿಗೆ ಅತಿ ಪ್ರಯೋಜನಕಾರಿ ಎಂದು ನನ್ನ ನಂಬಿಕೆ..
ಉದ್ಯೋಗಕ್ಕೆ ನಮ್ಮ ದೇಶದಲ್ಲಿ ಕೊರತೆ ಇಲ್ಲ, ಅಂದ ಹಾಗೆ ನಿರುದ್ಯೋಗಕ್ಕಂತು ಇಲ್ಲವೇ ಇಲ್ಲ.. ಒಂದು ಉದ್ಯೋಗ ಸಂದರ್ಶನಕ್ಕೆ ಹೋಗಿ ಕುಳಿತರೆ ಕೇಳುವುದು ಅನುಭವ. ಅನುಭವ ಇಲ್ಲದಿದ್ದಲ್ಲಿ ಆತ ತಿರಸ್ಕರಿತ ಅಭ್ಯರ್ಥಿ.. ಈ ಅನುಭವ ದೊರಕೇಬೇಕಿದ್ದರೆ ಕೆಲಸ ಸಿಗಬೇಕಲ್ಲವೇ ಸಾರ್!!. ಇದುವೇ ಇಂದು ಮದ್ಯಮ ವರ್ಗದ ಯುವಕ-ಯುವತಿಯರು ಅನುಭವಿಸುತ್ತಿರುವ ಏಕೈಕ ಸಮಸ್ಯೆ. ಇನ್ನು ಕೆಲವರು ಇದ್ದಾರೆ ಒಬ್ಬನ ನಿರುದ್ಯೋಗ ಸಮಸ್ಯೆಯನ್ನೇ ಉದ್ಯೋಗ ಮಾಡಿಕೊಂಡವರು..ಕೆಲಸ ಮಾಡಿ ಕೊಡುತ್ತೇವೆ ಎಂದು ಆಸೆ ಕೊಟ್ಟು ಹಣ ವಸೂಲಿ ನಡೆಸುವ ಒಂದು ವರ್ಗದವರು.
ಒಂದು ನಿರುದ್ಯೋಗಿಯ ಮಾನಸಿಕ ಸ್ಥಿತಿಯನ್ನು ಅರಿತು ನಡೆಸುವ ಕೊಳ್ಳೆ.. ಇಂತಹಾ ನಾಲಾಯಕ್ ಉದ್ಯೋಗಿಗಳನ್ನು ಕಠಿಣ ಶಿಕ್ಷೆಗಳಿಗೆ ಒಳಪಡಿಸಬೇಕು.
ಚೈನ್ ಮಾರ್ಕೆಟಿಂಗ್ ಮೊದಲಾ ದಂತಹ ಬ್ಯುಸಿನೆಸ್ ಸಂಸ್ಥೆಗಳು ಕೆಲಸ ನೀಡುವ ಆಸರೆ ಕೊಟ್ಟು ಕರೆಸಿ ಮ್ಯಾನೇಜರ್ ಮಾಡುತ್ತೇನೆ ಎಂದು 50000/- ಲೂಟಿ ಹೊಡೆದು ಮಂಗ ಮಾಡಿ ಬಿಡುತ್ತಾರೆ. ಇದಕ್ಕೆಲ್ಲ ಸಿಲುಕಿದ ಅಮಾಯಕರು ಅನೇಕ, ಉದ್ಯೋಗವಿಲ್ಲದ ಮಾನಸಿಕ ಸ್ಥಿತಿಯಲ್ಲಿ ಇಂತಹ ಗುಂಡಿಗೆ ಬೀಳಿವುದು ಸಹಜ, ಹೊಟ್ಟೆ ಪಾಡಿಗಲ್ಲವೇ ದುಡಿಮೆ, ಅದು ದೊರಕುವ ತನಕ ಅಥವಾ ಅದು ದೊರಕಲು ಯಾವ ಕೊನೆವರೆಗು ಹೋಗುತ್ತಾರೆ ಅದುವೇ ಒಬ್ಬ ನಿರುದ್ಯೋಗಿಯ ಮಾನಸಿಕ ಸ್ಥಿತಿ. ಕುಟುಂಬದವರ ಎದುರು ಹೋಗಲು ಭಯ!! ಏಕೆಂದರೆ ಕಣ್ಣಿಗೆ ಸಿಕ್ಕರೆ ಪ್ರಥಮವಾಗಿ ಕೇಳುವ ವಿಷಯ “ಈಗ ಎಂತ ಮಾಡ್ತಾ ಇದ್ದೀಯ”? ಒಬ್ಬ ನಿರುದ್ಯೋಗಿಯಾಗಿ ಇದಕ್ಕೆ ಪ್ರತ್ಯುತ್ತರ ನೀಡಲು ಇರುವ ಕಷ್ಟ ಪಾಪ ಯಾವ ಇಂಟರ್ವ್ಯೂನಲ್ಲೂ ಆತ ಅನುಭವಿಸಿರ್ಲಿಕ್ಕಿಲ್ಲ…
ಬರಹ:- ಶಾಮಿಲ್ ನಿಯಾಝ್ ಗಾಂಧಿನಗರ ಸುಳ್ಯ