Featured, ಅಂಕಣ, ಸ್ಥಳೀಯ

ಆತ್ಮೀಯ ಪೋಷಕರೇ ಮತ್ತು ವಿದ್ಯಾರ್ಥಿಗಳೇ ನಾನು ನಿಮ್ಮ ಆತ್ಮೀಯ ಶಿಕ್ಷಕ ಇಮ್ತಿಯಾಝ್ ಸಿ.ಎಂ

ಹೆತ್ತವರಲ್ಲಿ ನನ್ನದೊಂದು ಮನವಿ

ಇನ್ನೂ ಕೆಲವೇ ದಿನಗಳಲ್ಲಿ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳ ಫಲಿತಾಂಶ ಹೊರ ಬೀಳಲಿದೆ.ಫಲಿತಾಂಶಂವು ಮಕ್ಕಳ ಅಥವಾ ಹೆತ್ತವರ ನಿರೀಕ್ಷೆಗೆ ತಕ್ಕಂತೆ ಬರಬೇಕು ಎಂದೇನಿಲ್ಲ ಫಲಿತಾಂಶವು ಸಕರಾತ್ಮಕವಾಗಿ ಬರಬಹುದು ನಕಾರತ್ಮಕವಾಗಿ ಬರಬಹುದು ಅದರ ಬಗ್ಗೆ ಹೆಚ್ಚಿನ ತಲೆಕೆಡೆಸಿಕೊಳ್ಳುವ ಅಗತ್ಯವಿಲ್ಲ.ಫಲಿತಾಂಶ ಹೆಚ್ಚಿಸಲು ಇತರೇ ಪರ್ಯಾಯ ಮಾರ್ಗಗಳಿವೆ[ಮರು ಮೌಲ್ಯಮಾಪನ,ಮರು ಪರೀಕ್ಷೆ ಮತ್ತು ಅಂಕ ಸುಧಾರಣಾ ಪರೀಕ್ಷೆ ]ಹೆತ್ತವರು ಮಕ್ಕಳ ಆತ್ಮವಿಶ್ವಾಸವನ್ನು ಹೆಚ್ಚಿಸುವ ಸ್ಪೂರ್ತಿದಾಯಕರಾಗಬೇಕೆ ಹೊರತು ಮಕ್ಕಳನ್ನು ದೂಷಿಸುವ ದಡ್ಡರಾಗಬಾರದು. ಅದೇ ರೀತಿ ವಿದ್ಯಾರ್ಥಿಗಳೂ ಕೂಡ ತಮ್ಮ ಆತ್ಮ ವಿಶ್ವಾಸ ಕಳೆದುಕೊಳ್ಳದೇ ಧೃತಿಗೆಡದೆ ಸಾಧಿಸುವ ಛಲ ಹೆಚ್ಚಿಸಿಕೊಳ್ಳಬೇಕು.

ಫಲಿತಾಂಶ ಉತ್ತಮವಾಗಿ ಬಂದಿದೆ ಸಂತೋಷ 610,625 ಅಂಕ ತೆಗೆದವರಿಗೆ ಅಭಿನಂದನೆಗಳು ಅದೂ ಸಂತೋಷ ಪತ್ರಿಕೆ, ಟಿವಿಯಲ್ಲಿ,ಸೋಷಿಯಲ್ ಮಿಡಿಯಾ ಎಲ್ಲೇ ಇರಲಿ ಅವರ ಮಗ 600+, ಇವರ ಮಗಳು 610 ಅಂತೆ ಎನ್ನುವುದರ ನಡುವೆ, ಏನೂ ತಪ್ಪು ಮಾಡದ 50% ಮಾರ್ಕ್ ತೆಗೆದ,ಫೇಲ್ ಆದ ಮಕ್ಕಳನ್ನು ಕೇಳುವವರಿಲ್ಲ ನೋಡಿ😥 ಇನ್ನೆಷ್ಟೋ ಕಡೆ ನೀನು ವೇಸ್ಟ್ ಬಾಡಿ, ನಮ್ಮ ಮರ್ಯಾದೆ ತೆಗೆದೆ, ನಮ್ಮ ಶಾಲೆಗೆ ಕಪ್ಪು ಚುಕ್ಕೆ, ದನ ಮೇಯಿಸು, ಸಾಯ್ಬಾರದಿತ್ತಾ😥, ಅವರ ಮಗ ನೋಡು,ಇವರ ಮಗಳನ್ನು ನೋಡು ಮುಂತಾದ ಚುಚ್ಚು ನುಡಿ ಇದು ಬೆಳೆಯುವ ಸಿರಿಯೊಂದನ್ನು ಮೊಳಕೆಯಲ್ಲೇ ಚಿವುಟುವ ಕೆಲಸ ಮಾಡುವ ಸಮಾಜ, ಬಾಂದವರು, ಒಡಹುಟ್ಟಿದವರು, ತಂದೆ ತಾಯಿ ಒಮ್ಮೆ ಇವರ ಬಗ್ಗೆ ಯೋಚಿಬೇಕು 😔🙏

ಹೌದು ನನ್ನ ಮಗ/ ಮಗಳಿಗೆ ಉತ್ತಮ ಅಂಕ ಬರಬೇಕು ನಾನು ನನ್ನ ಮಗು ಸಮಾಜದಲ್ಲಿ ಗುರುತಿಸಿಕೊಳ್ಳಬೇಕು, ನನ್ನ ಮಗು ಉತ್ತಮ ಶಿಕ್ಷಣ ಪಡೆದು ಉತ್ತಮ ಹುದ್ದೆ ಪಡೆಯಬೇಕು ಎಂಬುಂದು ಬರೀ ಹೆತ್ತವರ ಆಸೆಯಲ್ಲ ಅವರಿಗೆ ವಿದ್ಯೆ ಕಲಿಸಿದ ಶಿಕ್ಷಕರ ಆಸೆಯೂ ಕೂಡ…. ಆದರೇ ಐದು ಬೆರಳು ಒಂದೇ ರೀತಿ ಆಗಲು ಸಾಧ್ಯವಿಲ್ಲ ಎನ್ನುವ ಸತ್ಯ ನಮಗೇಕೆ ಅರ್ಥವಾಗುವುದಿಲ್ಲ…? ಸಮಾಜದಲ್ಲಿ ಯಶಸ್ವೀ ವ್ಯಕ್ತಿ ಆಗಬೇಕಾದರೇ ಉತ್ತಮ ಅಂಕ ಪಡೆದರೆ ಮಾತ್ರ ಸಾಧ್ಯವೇ? ಕಡಿಮೆ ಅಂಕ ಪಡೆದು ಜೀವನದಲ್ಲಿ ಯಶಸ್ವಿಯಾದ ಅದೆಷ್ಟೋ ವ್ಯಕ್ತಿ ಗಳಿಲ್ಲವೇ….???

ಎಸ್ಎಸ್ಎಲ್ ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಅನುತ್ತೀರ್ಣರಾಗಿ ಮರು ಪರೀಕ್ಷೆ ಬರೆದು ಉತ್ತೀರ್ಣಗೊಂಡು ಭವಿಷ್ಯದಲ್ಲಿ ಐಎಎಸ್,ಐಪಿಎಸ್ ಅಥವಾ ಉತ್ತಮ ಸರ್ಕಾರಿ ಹುದ್ದೆ ಪಡೆದು ಅಧಿಕಾರಿಗಳಾದ ಹಲವಾರು ಉದಾಹರಣೆಗಳು ನಮ್ಮ ಕಣ್ಣ ಮುಂದೆ ಇರುವಾಗ ನಮ್ಮ ಮಕ್ಕಳ ಬಗ್ಗೆ ನಮಗೇಕೆ ಕೀಳು ಮನೋಭಾವ ??

ಬನ್ನಿ ಸ್ವಲ್ಪ ಬದಲಾಗೋಣ…🙏🙏

ಕಡಿಮೆ ಅಂಕ ಬಂದ ಮಕ್ಕಳನ್ನು ಪ್ರೀತಿ ಯಿಂದ ಮಾತನಾಡಿಸೋಣ .ಅವರಲ್ಲಿ ಧೈರ್ಯ ತುಂಬಿ ಪರ್ಯಾಯ ಆಯ್ಕೆ ಗಳ ಬಗ್ಗೆ ತಿಳಿ ಹೇಳೋಣ.

ಎರಡನೇ ಯತ್ನದಲ್ಲಿ ಯಶಸ್ವೀ ಯಾದವರ ಕಥೆ ಹೇಳೋಣ.

ಬರೀ ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದಿದೆ ಜೀವನ ಇನ್ನೂ ಇದೆ ಎನ್ನುವ ಸಿಹಿ ಸತ್ಯ ತಿಳಿ ಹೇಳೋಣ..ಅವರಲ್ಲಿರುವ ಕೌಶಲ್ಯವನ್ನು ಗುರುತಿಸುವ ಕೆಲಸ ನಮ್ಮಿಂದಾಗಬೇಕಾಗಿದೆ.

ಒಟ್ಟಲ್ಲಿ ರೆಕ್ಕೆ ಮುರಿದ ಹಕ್ಕಿಗೆ ಉಪಚಾರಿಸಿ ಹೊಸರೆಕ್ಕೆ ಕಟ್ಟಿ ಆಗಸಕ್ಕೆ ಹಾರಿ ಬಿಡೋಣ.

ಮಕ್ಕಳ ನಿಷ್ಕಲ್ಮಶ ಪ್ರೀತಿ,ಮಮತೆ ಯನ್ನು ಅರಿಯುವ ತಂದೆ ತಾಯಿಗಳಾಗೋಣ.. ಅಂಕ ಕಡಿಮೆ ಬಂದಿದೆ ಎಂದು ಅವರ ಮುಗ್ಧ ಹೃದಯಕ್ಕೆ ನೋವು ಕೊಟ್ಟು ನಾಳೆ ಮಕ್ಕಳನ್ನು ಕಳೆದುಕೊಂಡು ಬೇಸರಿಸುವ ಮೊದಲು ಎಚ್ಚರದಿಂದ ಅವರ ಬೆನ್ನೆಲುಬಾಗಿ ನಿಂತು ಅವರ ಆತ್ಮವಿಶ್ವಾಸ ಹೆಚ್ಚಿಸೋಣ.

ಹಾಗಾಗಿ ಇದಿಷ್ಟು ನೆನಪಿರಲಿ….ಅವರಿಗೊಂದು ಅವಕಾಶ ಕೊಡಿ👏🏻

ಯಾಕೆಂದರೆ ಆಗಷ್ಟೇ ಜೀವನ ಏನೆಂದು ತಿಳಿಯಲು ಆರಂಭಿಸಿದ ಹಕ್ಕಿಗೆ 🕊️ಜೀವಿಸಲು ಅನುವು ಮಾಡಿ ಕೊಡಬೇಕಾದುದು ನಮ್ಮೆಲ್ಲರ ಕರ್ತವ್ಯ. ನಮ್ಮೆಲ್ಲರ ನಾಳಿನ ಉತ್ತಮ ಭವಿಷ್ಯಕ್ಕಾಗಿ ಒಮ್ಮೆ ನಮ್ಮನ್ನು ನಾವು ಬದಲಿಸಿಕೊಳ್ಳೋಣ.🦋

ಧನ್ಯವಾದಗಳು. ‎

m

Related Posts