Featured, ಅಂಕಣ, ಸ್ಥಳೀಯ

ಯೌವನದಲ್ಲಿ ಹೆಚ್ಚುತ್ತಿರುವ ಹೃದಯಾಘಾತ….

ಇತ್ತೀಚಿನ ಕೆಲವು ದಿನದ ವಾರ್ತಾ ಪತ್ರಿಕೆಗಳಲ್ಲಿ ಬರುವ ಮುಖ್ಯ ವಿಷಯ ಒಂದಾಗಿದೆ ಯುವಕರಲ್ಲಿ ಹೃದಯಾಘಾತ ಪ್ರಕರಣಗಳು ಗಣನೀಯವಾಗಿ ಹೆಚ್ಚುತ್ತಿವೆ ಎಂದು ವೈದ್ಯರು ಎಚ್ಚರಿಸುತ್ತಿರುವುದು. ಹೃದಯಾಘಾತ ಎನ್ನುವುದು ಮುಂಚಿನಂತೆ ವೃದ್ಧರ ಕಾಯಿಲೆ ಎನ್ನುವ ಭಾವನೆ ಈಗ ತೀರ ಅಪ್ರಸ್ತುತವಾಗಿದೆ.

ವೈದ್ಯಕೀಯ ವರದಿಗಳ ಪ್ರಕಾರ,30 ವರ್ಷಕ್ಕೆ ಒಳಗಿನವರಲ್ಲೂ ಹೃದಯಾಘಾತ ಪ್ರಕರಣಗಳು ಹೆಚ್ಚುತ್ತಿರುವುದು ಆತಂಕಕಾರಿ ಸಂಗತಿ. ಯಾರು ಮುಚ್ಚಿಟ್ಟಿರುವ ಕಾರಣಗಳಲ್ಲದೇ,ಜೀವನಶೈಲಿ, ಆಹಾರ ಪದ್ಧತಿ, ವ್ಯಾಯಾಮ ಕೊರತೆ, ಹೆಚ್ಚಿನ ಒತ್ತಡ ಹೃದಯದ ಮೇಲೆ ಭಾರಿ ಒತ್ತಡವನ್ನು ಉಂಟುಮಾಡುತ್ತಿದೆ.

ಇಂದು ನಾವು ಹೆಚ್ಚಾಗಿ ತಿನ್ನುತ್ತಿರುವ ಜಂಕ್ ಫುಡ್ ಮತ್ತು ಅತಿಯಾಗಿ ತೈಲಯುಕ್ತ ಆಹಾರಗಳು,ಧೂಮಪಾನ, ಮದ್ಯಪಾನ ಸಹಿತ ಕೆಟ್ಟ ಅಭ್ಯಾಸಗಳು,ನಿರಂತರ ಕಂಪ್ಯೂಟರ್ ಅಥವಾ ಮೊಬೈಲ್ ಬಳಕೆ, ವ್ಯಾಯಾಮ ಕೊರತೆ ಮುಂತಾದ ಅಭ್ಯಾಸಗಳಾಗಿವೆ ಇದಕ್ಕೆ ಕಾರಣವೆಂದು ತಜ್ಞರು ಅವಲೋಕಿಸಿದ್ದಾರೆ.

ಈ ಪರಿಸ್ಥಿತಿ ತಡೆಯಲು ಯುವಕರು ಕಡ್ಡಾಯವಾಗಿ ದಿನವೂ ಶಾರೀರಿಕ ಚಟುವಟಿಕೆ ಮಾಡಬೇಕು. ಆರೋಗ್ಯಕರ ಆಹಾರ ಸೇವನೆ ಮತ್ತು ಆಳವಾದ ನಿದ್ರೆಯೂ ಮುಖ್ಯ. ವಾರ್ಷಿಕ ಆರೋಗ್ಯ ತಪಾಸಣೆ ಅವಶ್ಯಕ ಎಂದು ಹಿರಿಯ ಹೃದ್ರೋಗ ತಜ್ಞ ಡಾ. ಶೇಖರ್ ತಿಳಿಸಿದ್ದಾರೆ.

ಹೃದಯಾಘಾತದ ಪ್ರಮುಖ ಲಕ್ಷಣಗಳಲ್ಲಿ ಎದೆ ನೋವು, ತೀವ್ರ ಉಸಿರಾಟದ ತೊಂದರೆ, ಬೆವರಾಟ, ತಲೆಸುತ್ತು ಮುಂತಾದವುಗಳು ಸೇರಿವೆ. ಮೊದಲ ಸಂಕೇತ ಕಂಡಾಗಲೇ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು ಎಂದು ತಜ್ಞರು ಸಲಹೆ ನೀಡಿದ್ದಾರೆ

ಆರೋಗ್ಯ ತಜ್ಞರು ನೀಡುತ್ತಿರುವ ಸಲಹಗಳೆಂದರೆ :ಗೆಪ್ರತಿದಿನ ಕನಿಷ್ಠ 30 ನಿಮಿಷ ವೇಗವಾಗಿ ನಡೆಯುವುದು ಅಥವಾ ವ್ಯಾಯಾಮ,ಶಾಕಾಹಾರಿ ಆಹಾರ, ಕಡಿಮೆ ಉಪ್ಪು ಮತ್ತು ಸಕ್ಕರೆ ಸೇವನೆ, ತಂಬಾಕು ಉತ್ಪನ್ನಗಳಿಂದ ದೂರವಿರುವುದು, ಒತ್ತಡ ನಿವಾರಣೆಗೆ ಯೋಗ, ಧ್ಯಾನ ಮುಂತಾದವುಗಳನ್ನು ನಾವು ಪಾಲಿಸುವುದರಿಂದ ಇದರಿಂದ ರಕ್ಷಣೆ ಹೊಂದಬಹುದು .

ವಿದ್ಯಾರ್ಥಿಗಳು, ಉದ್ಯೋಗಿಗಳು, ಪೋಷಕರು ಎಲ್ಲರೂ ತಮ್ಮ ಜೀವನ ಶೈಲಿಯನ್ನು ಪರಿಶೀಲಿಸಬೇಕು. ಆರೋಗ್ಯದ ಮೇಲೆ ನಿಖರ ಗಮನ ನೀಡಿದರೆ, ಈ ಆತಂಕಕಾರಿ ಪರಿಸ್ಥಿತಿಯನ್ನು ನಿಯಂತ್ರಿಸಲು ಸಾಧ್ಯವೆಂದು ವೈದ್ಯರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಆದುದರಿಂದ ಉತ್ತಮವಾದ ನಮ್ಮ ಜೀವನವನ್ನು ಆರೋಗ್ಯಯುತವಾಗಿ ಕಾಪಾಡಿಕೊಳ್ಳೋಣ

ಲೇಖಕರು -ಆಶಿಕ್ ನಲ್ವತ್ತೆಕರೆ,ಕೊಡಗು

m

Related Posts