Featured, ಅಂಕಣ, ಇತರೆ, ಲೇಖನ, ಸ್ಥಳೀಯ

ಪ್ಯಾಲೆಸ್ತೀನ್ ವಿರುದ್ದ ಜಗತ್ತಿನ ಮೌನವೆಂಬ ಅಪರಾಧ

ಪ್ಯಾಲೆಸ್ತೀನ್ ಎಂಬ ಹೆಸರು ಕೇಳಿದಾಗಲೇ ಆಹಾರಕ್ಕಾಗಿ ಪರದಾಡುವ ಜನತೆಯ ಬೊಂಬುಗಳ ಸ್ಫೋಟದಿಂದ ಚಿದ್ರವಾದ ಕಟ್ಟಡಗಳ ಅವಶೇಷಗಳ, ರೋಧನೆ ಮುಂತಾದ ಮನಕುಲವೇ ನಾಚುವ ದೃಶ್ಯಗಳು ಮನಸ್ಸಿಗೆ ಬರುತ್ತದೆ. ಇಸ್ರೇಲ್ ಎಂಬ ಜಗತ್ತಿನ ನರಹಂತಕ ರಾಷ್ಟ್ರ ತನ್ನ ವಿಕೃತವಾದ ಮನೋಭಾವದಿಂದ ಪ್ಯಾಲೆಸ್ತೀನ್ ಎಂಬ ತನಗೆ ಆಶ್ರಯವನ್ನು ನೀಡಿದ ದೇಶದ ಮೇಲೆ ನಿರಂತರವಾಗಿ ಭೀಕರ ದಾಳಿಯನ್ನು ನಡೆಸುತ್ತಿದೆ.ಅಲ್ಲದೆ ಅದನ್ನು ಮತ್ತೆ ಮತ್ತೆ ಸಮರ್ಥಿಸುತ್ತ ಅದರ ಕ್ರೌರ್ಯವನ್ನ ಪ್ರದರ್ಶಿಸುತ್ತಿದೆ.ಕಳೆದ ದಿನ ಕೂಡ ಆಹಾರಕ್ಕಾಗಿ ಕಾದು ಕುಳಿತಿದ್ದ ಸುಮಾರು 72 ಮಂದಿ ಸಹಿತ 91 ಮಂದಿ ಜನರನ್ನು ಮೇಲೆ ಗುಂಡು ಹಾಕಿ ಹತ್ಯೆಗೆಯ್ಯಲಾಗಿದೆ. 

         2023 ರ ಅಕ್ಟೋಬರ್ ನಿಂದ ಆರಂಭಗೊಂಡ ಈ ಮಾನವೀಯ ದುರಂತದಿಂದ ಸುಮಾರು60,034 ಮಂದಿ ತಾವು ಮಾಡದ ತಪ್ಪಿಗೆ ಪ್ರಾಣವನ್ನು ಕಳೆದುಕೊಂಡಿದ್ದಾರೆ. ಅಲ್ಲದೆ 1,45,000 ಕ್ಕಿಂತಲೂ ಹೆಚ್ಚಿನ ಜನರು ಗಾಯಗೊಂಡಿದ್ದಾರೆ. ವಿಪರ್ಯಾಸವೆಂದರೆ ಈ ಮಾರಣಹೋಮವನ್ನು ಇಸ್ರೇಲ್ ನಿರಂತರವಾಗಿ ಮಾಡುತ್ತಿದ್ದರೂ,ಅದಕ್ಕೆ ಜಗತ್ತು ಮಾತ್ರ ಕುರುಡು ಮೌನವಾಗಿ ಕುಳಿತಿದೆ.ಪ್ಯಾಲೆಸ್ತೀನ್ ದುರಂತದ ಕೇಂದ್ರವಾಗಿ ಮಾರ್ಪಾಡಾಗಿದೆ. ನೂರು ವರ್ಷಗಳ ಹಿಂದೆ ಭಾರತ ಬ್ರಿಟಿಷ್ ವಸಾಹತುಶಾಹಿಗಳ ದಾಳಿಗೆ ಒಳಪಟ್ಟಾಗ ಪ್ಯಾಲೆಸ್ತೀನ್ ಕೂಡಾ ಒಳಪಟ್ಟಿತ್ತು.ಆದರೆ ಇವತ್ತು ಇಸ್ರೇಲರ ದಾಳಿಯಿಂದ ಮುಕ್ತಿಗಾಗಿ ಮತ್ತೆ ಹೋರಾಡಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ.

      ಮೊದಲನೇ ಮಹಾಯುದ್ಧದ ವೇಳೆ ಬ್ರಿಟಿಷ್ ಮ್ಯಾಂಟೆಡ್ ಎಂಬುದರ ಮೂಲಕ ಯಹೂದಿಗಳನ್ನು ಪ್ಯಾಲೆಸ್ತೀನ್ ಗೆ ರವಾನಿಸಿದರು. ವಲಸಿಗರಾಗಿ ಬಂದ ಇಸ್ರೇಲರು 1948ರ ವೇಳೆಗೆ ಬ್ರಿಟನಿನ ಕುತಂತ್ರದಿಂದ ಪ್ಯಾಲೆಸ್ತೀನನ್ನು ಭಾಗಶಃ ಹೊಡೆದು ಹಾಕಿ ಇಸ್ರೇಲ್ ನ ಹುಟ್ಟಿಸಿದರು.1950 ದಶಕದ ವೇಳೆ ಗಾಝಾ ಎಂಬ ಪ್ರದೇಶವು 360 ಚದರ ಕಿಲೋಮೀಟರು ವಿಸ್ತೀರ್ಣ ಹೊಂದಿತ್ತು .ಆದರೆ ಪ್ರಸ್ತುತ 260 ಚಿತ್ರ ಕಿ.ಮೀ ಪ್ರದೇಶವನ್ನು ಇಸ್ರೇಲ್ ವಶಪಡಿಸಿಕೊಂಡಿದೆ .ಅಂದರೆ 100 ಚದರ ಕಿ.ಮೀ ಪ್ರದೇಶದಲ್ಲಿ ಆಗಿದೆ 21 ಲಕ್ಷದಷ್ಟು ಪ್ಯಾಲೆಸ್ತೀನಿಯರು ಉಸಿರು ಕಟ್ಟಿ ತಮ್ಮ ತಮ್ಮ ಜೀವನ ಸಾಗಿಸುತ್ತಾರೆ. ಗಾಝಾದ ಶೇ 80ರಷ್ಟು ಮಂದಿ ನಿರಾಶ್ರಿತರಾಗಿದ್ದು, ಮನೆ ಮೂಲಸೌಕರ್ಯವಿಲ್ಲದೆ, ಆಸ್ಪತ್ರೆ, ಆಹಾರ,ನೀರು ಸಹ ದೊರೆಯದ ರೂಪದಲ್ಲಿ ಇಸ್ರೇಲ್ ಪ್ಯಾಲೆಸ್ತೀನ್ ಜನತೆಯ ಮೇಲೆ ಗಡಿ ನಿಬಂಧ ಮತ್ತು ಆರ್ಥಿಕ ದಿಗ್ಬಂಧನವನ್ನು ಹೇರಿದೆ.

      ವಿಶ್ವಸಂಸ್ಥೆಯ ಇತ್ತೀಚಿನ ವರದಿ ಪ್ರಕಾರ ಗಾಝಾ ಆದ ಜನರು ಆಹಾರ ಕೊರತೆಯಿಂದಾಗಿ ಮರಣಾಂತಿಕ ಅಪೌಷ್ಟಿಕತೆಯನ್ನು ಹೊಂದಿದ್ದು, ವೃದ್ದರ, ಮಹಿಳೆಯರ, ಮಕ್ಕಳ,ಗರ್ಭಿಣಿಯರಪರಿಸ್ಥಿತಿ ಕೂಡ ಗಂಭೀರವಾಗಿದೆ. ಆದರೆ ಭಾರತ ಸಹಿತ ಜಗತ್ತಿನ ಬಲ ರಾಷ್ಟ್ರಗಳು ಪ್ಯಾಲೆಸ್ತೀನ್ ಪರ ಹೇಳಿಕೆ ನೀಡುವುದಾಗಲಿ ಅಥವಾ ಸಹಾಯದ ಹಸ್ತ ಚಾಚುದಾಗಲಿ ಮಾಡುತ್ತಿಲ್ಲ.ಅಮೆರಿಕ ವಾರ್ಷಿಕ 3.8 ಶತ ಕೋಟಿ ಡಾಲರ್ ಗಳನ್ನು ಇಸ್ರೇಲ್ ಗೆ ನೀಡುವುದರ ಮೂಲಕ ತಮ್ಮ ಸಹಕಾರ ಮತ್ತು ಬೆಂಬಲವನ್ನು ಖಚಿತಪಡಿಸುತ್ತಿದೆ, ದಕ್ಷಿಣ ಆಫ್ರಿಕಾ, ಟರ್ಕಿ, ಕೆನಡಾ ಮುಂತಾದ ರಾಷ್ಟ್ರಗಳು ಮಾತ್ರ ಪ್ಯಾಲೆಸ್ತೀನ್ ಪರ ನಿಂತಿದೆ . ಯುನಿಸೆಫ್ ಹೇಳುವ ಪ್ರಕಾರ, ಪ್ಯಾಲೆಸ್ತೀನ್ ಮಕ್ಕಳಲ್ಲಿ ಕುಬ್ಜತೆ ಮತ್ತು ಪೌಷ್ಟಿಕತೆಯು ಹೆಚ್ಚುತ್ತಿದ್ದು ,ಇದು ಭೀಕರ ಮತ್ತು ಆಘಾತಕಾರಿ ಬೆಳವಣಿಗೆಯಾಗಿದೆ.ವಿಶ್ವಸಂಸ್ಥೆ ಮತ್ತು ಸಂಘ ಸಂಸ್ಥೆಗಳು ಹಲವಾರು ರೀತಿಯ ಹೇಳಿಕೆ ನೀಡಿದರರೂ,ಕ್ರಮಗಳನ್ನು ಕೈಗೊಂಡರೂ ಇಸ್ರೇಲ್ ಮಾತ್ರ ಅದಕ್ಕೆ ಯಾವುದಕ್ಕೂ ಕಿಂಚಿತ್ತು ಬೆಲೆ ನೀಡದೆ ತಮ್ಮ ಕ್ರೌರ್ಯ ಮತ್ತು ಅಹಂಕಾರವನ್ನು ಪ್ಯಾಲೆಸ್ತೀನ್ ಮೇಲೆ ತೋರಿಸುತ್ತಿದೆ. ಅದೆಷ್ಟೋ ಇಸ್ಲಾಮಿಕ ರಾಷ್ಟ್ರಗಳಿದ್ದರೂ ಸಹ ತಾವು ತಮ್ಮ ಸ್ವಾರ್ಥಕ್ಕಾಗಿ ಅಥವಾ ತಮಗೆ ಬಲಿಷ್ಠ ರಾಷ್ಟ್ರಗಳ ಹೆದರಿಕೆ ಬೆದರಿಕೆಯಿಂದ ತಮ್ಮ ತಮ್ಮ ಸಹಕಾರಕ್ಕೆ ಬೀಗ ಜಡೆಸಿದೆ. 

      ಒಂದು ಜನತೆಯ ಅಥವಾ ಮಾನವೀಯತೆ ಎಂಬ ಮರವನ್ನು ಬೇರು ಸಹಿತ ಕಿತ್ತೆಸೆಯುವ ಈ ಕ್ರೌರ್ಯಕ್ಕೆ ಯಾರು ಕೂಡ ಸಹಕಾರವನ್ನು ನೀಡಬಾರದು. ಅಂಥವರ ವಿರುದ್ಧ ಕಠಿಣವಾದ ಕ್ರಮಗಳು ಕೈಗೊಳ್ಳಬೇಕಿದೆ.ಇದು ಕೇವಲ ಒಂದು ನಾಡಿನ ಮೇಲೆ ನಡೆಸುವ ದಾಳಿಯಲ್ಲ ,ಹೊರತು ಇಡೀ ಮಾನವೀಯತೆ ಮೇಲೆ ನಡೆಸುತ್ತಿರುವ ಅತ್ಯಾಚಾರವೆಂದರು ತಪ್ಪಾಗುವುದಿಲ್ಲ. ಆದರಿಂದ ಇನ್ನಾದರೂ ಇಡೀ ವಿಶ್ವ ಎಚ್ಚೆತ್ತುಕೊಂಡು, ಒಗ್ಗಟ್ಟಾಗಿ ಇಸ್ರೆಲ್ ವಿರುದ್ದ ಹೋರಾಡಿ ಪ್ಯಾಲೆಸ್ತೀನ್ ನ ವಿಮುಕ್ತಿಗೆ ಕೈಜೋಡಿಸಬೇಕು .ಈ ಮೂಲಕ ಮತ್ತೆ ಮಾನವೀಯತೆಗೆ ಜೀವ ನೀಡಬೇಕಾಗಿದೆ…

ಲೇಖಕರು:ಆಶಿಕ್ ಕೊಡಗು (ವಿದ್ಯಾರ್ಥಿ, ಶಂಸುಲ್ ಉಲಮಾ ಅರೆಬಿಕ್ ಕಾಲೇಜು , ತೋಡಾರು)

m

Related Posts