Featured, ಸ್ಥಳೀಯ

ಸುನ್ನೀ ಉಮರಾ ನಾಯಕ ಕರ್ನಾಟಕ ಮುಸ್ಲಿಂ ಜಮಾಹತ್ ಪುತ್ತೂರು ಝೋನ್ ಅಧ್ಯಕ್ಷ ಸಿ. ಕರೀಮ್ ಹಾಜಿ ಚಿನ್ನಾರ್ ನಿಧನ

ಕರ್ನಾಟಕ ಮುಸ್ಲಿಂ ಜಮಾಅತ್ ಪುತ್ತೂರು ಝೋನ್ ಇದರ ಅಧ್ಯಕ್ಷ ಸಿ. ಕರೀಂ ಹಾಜಿ ಚೆನ್ನಾರ್ ಇವರು ಇಂದು ಏ.24 ರಂದು ಸಂಜೆ ನಿಧನರಾದರು.

ಸುನ್ನೀ ಮುಸ್ಲೀಂ ಉಮರಾ ನೇತರಾ, ಸೌಮ್ಯ ಸ್ವಭಾವದ ಸರಳ ವ್ಯಕ್ತಿತ್ವದ ಕರೀಂ ಚೆನ್ನಾರ್ ಇದೀಗ ಮಂಗಳೂರು ಇಂದಿರಾ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ಇವರು ಎಸ್ ವೈ ಎಸ್ ಹಾಗೂ ಸುನ್ನೀ ಕುಟುಂಬ ಸಂಘಟನೆಗಳಲ್ಲಿ ಹಾಗೂ ಸಾಮಾಜಿಕ ಸೇವಾ ಸಂಘ ಸಂಸ್ಥೆಗಳಲ್ಲಿ ಹಲವಾರು ವರ್ಷಗಳಿಂದ ಸೇವೆ ಸಲ್ಲಿಸಿದ್ದರು. ಸಯ್ಯದ್ ತ್ವಾಹಿರುಲ್ ಅಹ್ದಲ್ ತಂಙಳ್ ಅವರಿಂದ ದೀರ್ಘ ಕಾಲ ವಿಧ್ಯಾರ್ಜನೆಗೈದವರಲ್ಲಿ ಇವರು ಒಬ್ಬರು. ಮಾತ್ರವಲ್ಲದೇ 2021ರಲ್ಲಿ ಸುಲ್ತಾನುಲ್ ಉಲಮಾ ಖಾತಪುರಂ ಎ.ಪಿ ಅಬೂಬಕರ್ ಮುಸ್ಲಿಯಾರ್ ಉಸ್ತಾದರು ಇವರನ್ನು ಮರ್ಕಝ್ ಮಹಿಳಾ ಕಾಲೇಜು ಇದರ ಕೋಶಾಧಿಕಾರಿಯಾಗಿಯೂ ಇವರನ್ನ ನೇಮಕ ಮಾಡಿದ್ದರು‌.

ಇವರು ಪತ್ನಿ ,ನಾಲ್ಕು ಗಂಡು , ಒಂದು ಹೆಣ್ಣು ಮಕ್ಕಳು ಹಾಗೂ ಕುಟುಂಬಸ್ಥರು ಮತ್ರು ಸುನ್ನೀ ಸಮೂಹವನ್ನು ಅಗಲಿದ್ದಾರೆ‌.

m

Related Posts