ಮಾಜಿ ಜಿಲ್ಲಾ ಪರಿಷತ್ ಸದಸ್ಯ ಕುಂಞಿಪಳ್ಳಿ ಇನ್ನಿಲ್ಲ
ಸುಳ್ಯದ ಪ್ರಪ್ರಥಮ ನೋಟರಿ, ಖ್ಯಾತ ನ್ಯಾಯವಾದಿ, ಐವತೊಕ್ಲು ಪಟೇಲ್ ಮನೆತನದ ಹಾಗೂ ಪೈಚಾರ್ ನಿವಾಸಿಯಾದ ಕುಂಞಿಪಳ್ಳಿ (ವಯಸ್ಸು 80) ಅವರು ಇಂದು (ಜೂನ್ 27) ಬೆಳಿಗ್ಗೆ 10.30ಕ್ಕೆ ನಿಧನರಾದರು.
ಅವರು ಹಿರಿಯ ಕಾಂಗ್ರೆಸ್ ಮುಖಂಡರಾಗಿದ್ದು, 1987ರಲ್ಲಿ ನಡೆದ ಜಿಲ್ಲಾ ಪರಿಷತ್ ಚುನಾವಣೆಯಲ್ಲಿ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡರ ವಿರುದ್ಧ ಜಯ ಸಾಧಿಸಿ ಜಿಲ್ಲಾ ಪರಿಷತ್ ಸದಸ್ಯರಾಗಿದ್ದರು.
ಅವರ ನಿಧನದಿಂದ ಸುಳ್ಯ ವಕೀಲ ವೃತ್ತಿ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಶೋಕದ ಛಾಯೆ ಮೂಡಿದೆ.




m

