ನಿನ್ನ ಮರಣ ವಾರ್ತೆ ಕೇಳಿ ಲೋಕವೇ ಮೌನ ವಾಗಿದೆ.ಎಲ್ಲರ ಸ್ಟೇಟಸುಗಳಲ್ಲಿ ನಿನಗಿರುವ ಪ್ರಾರ್ಥನೆಗಳು ತುಂಬಿದೆ..
ನಿನಗೆ ಲಬಿಸಿದಂತಹಾ ಒಂದು ಒಳ್ಳೆಯ ಮರಣ ನಮಗೂ ಲಬಿಸಬೇಕಿದೆ.
ಕಾರಣವೇನೆಂದರೆ ನಿನ್ನ ಮರಣ ವಾರ್ತೆ ಕೇಳಿ ಅನೇಕ ಉಲಮಾಗಲು ಉಸ್ತಾದರು ಉಮರಾ ನಾಯಕರು ನಿನಗೆ ಬೇಕಾಗಿ ಓದಿ ಮುಗಿಸಿದ ಕುರಾನ್,ಹಾಗು ಹೇಳಿ ಮುಗಿಸಿದ ತಹ್ಲೀಲ್ ಲಕ್ಷಕ್ಕಿಂತಳು ಮಿಗಿಲು…ಸಹೋದರೀ…ನೀನೆಷ್ಟು ಭಾಗ್ಯವಂತಳು.
ನಾನು ನಿನ್ನ ಮರಣ ವಾರ್ತೆ ಕೇಳುವುದು ಮಧ್ಯಾನ 12:45ಕ್ಕೆ ಹಾಸ್ಟೆಲ್ನಲ್ಲಿ ಊಟಕ್ಕೆ ಕ್ಯೂ ನಿಂತಾಗಾಗಿತ್ತು.
ಒಬ್ಬ ಸಹೋದರ ಬಂದು ಹೇಳಿದ,ನಿನ್ನನ್ನು ಉಸ್ತಾದ್ ಕರೆಯುತ್ತಿದ್ದಾರೆಂದು, ತಕ್ಷಣವೇ ಅಲ್ಲಿಂದ ಉಸ್ತಾದರ ಬಳಿ ಹೋದೆ, ಉಸ್ತಾದ್ ಹೇಳಿದರು ನಿನಗೆ ಮುಹಿಮ್ಮಾತ್ ಒಫೀಸಿನಿಂದ ಒಂದು ಫೋನ್ ಕರೆ ಇದೆ ಎಂದು.
ತಕ್ಷಣ ಉಸ್ತಾದ್ ಕರೆ ಮಾಡಿ ಫೋನ್ ನನ್ನಲ್ಲಿ ಕೊಟ್ಟರು. ಕರೆ ಮಾಡಿದ್ದು ಮುಹಿಮ್ಮಾತ್ ಜನರಲ್ ಮ್ಯಾನೇಜರ್ ಉಮ್ಮರ್ ಸಖಾಫಿ ಉಸ್ತಾದರಾಗಿತ್ತು. ನಿನ್ನ ದೊಡ್ಡಪ್ಪನ ಮಗಳು ಹೆರಿಗೆ ಸಮಯದಲ್ಲಿ ಏನೋ ಬ್ಲೀಡಿಂಗ್ ಕೊರತೆಯಿಂದಾಗಿ ಮರಣ ಹೊಂದ್ದಿದಾಳೆಯಂತೆ ನೀನು ಬೇಗ ಅಲ್ಲಿಯ ನಿನ್ನ ಉಸ್ತಾದರಲ್ಲಿ ವಿಷಯ ತಿಳಿಸಿ ಸಮ್ಮತ ಕೇಳಿ ಊರಿಗೆ ಬಾ ಎಂದಾಗಿತ್ತು ಉಸ್ತಾದರ ಫೋನ್ ಕರೆ. ವಿಷಯ ತಿಳಿದ ನಾನು ಬೇಗನೆ ನನ್ನ ರೂಮಿಗೆ ತೆರಳಿ, ನನ್ನ ಫೋನ್ ನೋಡಿದ ಕ್ಷಣ ಹತ್ತಿಪ್ಪತ್ತು ಫೋನ್ ಕರೆಗಳು, ಕೂಡಲೇ ಮನೆಗೆ ಕರೆ ಮಾಡಿ ಕೇಳಿದೆ ಏನು ಸಂಗತಿ……ತಾಯಿ ಫೋನ್ ತೆಗೆದ ಕೂಡಲೇ ಹೇಳಿದರು ಮೂತಾಂಡೆ ಸೌಜ ಪೋಯಿಪ್ಪೋಯಿರ ನೀ ಬಿಯೋ ಬನ್ರ್ 🥺 ಎಂದಾಗಿತ್ತು. ಅಷ್ಟು ಹೇಳಿ ತಾಯಿ ಕಾಲ್ ಕಟ್ಟ್ಮಾಡಿತು. ವಿಷಯ ಕೇಳಿ ಸ್ವಲ್ಪ ಹೊತ್ತು ಮಾತು ಬರ್ತಾ ಇಲ್ಲ ಏನೂ ಒಂಥರಾ ಜುಂ ಎಂದ ಹಾಗೆ. ಬೇಗ ನನ್ನ ಉಸ್ತಾದರನ್ನು ಕಾಣಲು ಹೋದಾಗ ಸಮಯ ಲುಹರ್ ನಮಝಿಗೆ ಬೇಕಾಗಿ ಇಕಾಮತ್ ಮೊಳಗಿತು,ಮತ್ತೆ ನೇರ ಜಮಾತ್ ಮುಗಿದ ಕೂಡಲೇ ಹೋಗಿ ನನ್ನ ಕ್ಲಾಸ್ ಉಸ್ತಾದರನ್ನು ಕಂಡೆ,ವಿಷಯ ಹೇಳಿದೆ, ಉಸ್ತಾದ್ ಹೇಳಿದರು ನಿನಗೆ ಹೋಗಲೇ ಬೇಕೆಂದಿದ್ದರೆ ಹೋಗು, ಅಲ್ಲದಿದ್ದರೆ ನಮಗೆ ತರಗತಿಯಲ್ಲಿ ಸಹೋದರಿಗೆ ಬೇಕಾಗಿ ವಿಶೇಷ ಮಜ್ಲಿಸ್ ಮಾಡಿ ದುಆ ಮಾಡುವ ಎಂದಾಗಿತ್ತು , ಬೇಗ ಒಪ್ಪಿಕ್ಕೊಂಡೆ , ಕಾರಣ 130ಕ್ಕೂ ಹೆಚ್ಚು ಮಂದಿ ನನ್ನ ತರಗತಿಯಲ್ಲಿ ಇದ್ಧಾರೆ, ನನ್ನ ಕ್ಲಾಸ್ ಉಸ್ತಾದರಾದ ಸಯ್ಯದ್ ಜಝೀಲ್ ಶಾಮಿಲ್ ಇರ್ಫಾನಿ ಕಾಮಿಲ್ ಸಖಾಫಿ ಉಸ್ತಾದರು ತರಗತಿಯಲ್ಲಿ ಬಂದು ಎಲ್ಲರಲ್ಲಿಯೂ ವಿಷಯ ಹೇಳಿ سوره الفاتحه،اخلاص فلك ،الناس ಇವೆಲ್ಲವನ್ನೂ ಪಠಿಸಿ ದುಆಮಾಡಿದರು. ತದ ನಂತರ ತರಗತಿಯಲ್ಲಿ ಕುಳಿತೆ , ತರಗತಿ ಮುಗಿದ ಕೂಡಲೇ ತಾಯಿಗೆ ಕಾಲ್ ಮಾಡಿ ವಿಷಯ ತಿಳಿದುಕೊಂಡೆ, ಖಂಡಿತವಾಗಿಯೂ ನಾನು ಹೋಗಬೇಕಿದ್ದ ಒಂದು ಕಾರ್ಯವಾಗಿದೆ. ಮತ್ತೆ ರಾತ್ರಿ ಇಶಾ ನಮಾಝ್ ಮುಗಿದ ಕೂಡಲೇ ಮರ್ಕಝ್ ಮಸ್ಜಿದ್ ಹಾಮಿಳಿಯಲ್ಲಿ ಸಹೋದರಿಯ ಹೆಸರು ಹೇಳಿ ದುಆ ಹಾಗು ಮರಣ ಹೊಂದಿದವರಿಗೆ ಬೇಕಾಗಿಯೂ ಪ್ರತ್ಯೇಕ ದುಆ ಮಜ್ಲಿಸ್ ನಡೆಯಿತು. ಆ ಸಮಯದಲ್ಲಿ ಮಸೀದಿಯಲ್ಲಿ ಅನೇಕ ಸಂಸ್ಥೆಯ ಉಲಮಾಗಳು ಹಾಗು 1300ಕ್ಕಿಂತಲೂ ಅಧಿಕಮಂದಿ ಮುತಅಲ್ಲಿಂಗಳು ಸಾಕ್ಷಿಯಾದರು ….ಇವರೆಲ್ಲೂ ಓದಿ ಸಹೋದರಿಗೆ ಬೇಕಾಗಿ ಸಂಸ್ಥೆಯ ಮುದರಿಸರೊಬ್ಬರು ದುಆ ಮಾಡಿದರು.
ಯಾ,,, ಸಹೋದರಿ ನೀನೆಷ್ಟು ಬಾಗ್ಯವಂತೆ,,
ಇಷ್ಟೆಲ್ಲಾ ಒಂದು ಒಳ್ಳೆಯ ಕಾರ್ಯಗಳು ನಿನಗೆ ಬೇಕಾಗಿ ನಡೆಯ ಬೇಕಾದರೆ ನೀನು ಮಾಡಿದ ಒಳ್ಳೆಯ ಕಾರ್ಯವೇನು……!
ರಾತ್ರಿ ತಾಯಿಗೆ ಕಾಲ್ ಮಾಡಿ ವಿಷಯ ತಿಳಿದುಕೊಂಡೆ,
ಮಾರನೇ ದಿನ ಎಂದಿನಂತೆ ನಮ್ಮ ಭಾರತದಲ್ಲಿ ಅತೀ ದೊಡ್ಡ ಬುಖಾರಿ ದರ್ಸ್ ಅದು ನಮ್ಮ ಶೈಖುನಾ ದಾ ಗ್ರ್ಯಾಂಡ್ ಮುಫ್ತಿ ಆಫ್ ಇಂಡಿಯಾ ಉಸ್ತಾದ್ ಸುಲ್ತಾನುಲ್ ಉಲಮಾ ಶೈಖ್ ಅಬೂಬಕರ್ ಅಹ್ಮದ್ ಉಸ್ತಾದರದ್ದಾಗಿದೆ. ಆ ತರಗತಿ ಮುಗಿದ ಕೂಡಲೇ ಉಸ್ತಾದ್ ಮರಣ ಹೊಂದಿದ ಎಲ್ಲರಿಗೂ ಬೇಕಾಗಿ ಒಟ್ಟಾಗಿ ದುಆ ಮಾಡಿದರು. ಕಣ್ಣಲ್ಲಿ ಕಣ್ಣೀರು ಹರಿಯಿತು, ಆ ಸಮಯ ನನ್ನ ಮನಸ್ಸಿನಲ್ಲಿ ಓಡಿ ಬಂದ ವಿಷಯ ಒಮ್ಮ್ ವೈಲತ್ತೂರ್ ತಂಙಳ್ ಹೇಳಿದರು ಏ ಪಿ ಮರಿಕ್ಕು ನ್ನದಿನ್ ಮುಂಬ್ ಞಾನ್ ಮರಿಕ್ಕನಮೆನ್ನ,,ಆಲುಗಳ್ ಚೋದಿಚ್ಚು ಅದೆಂದಿನಾನೆನ್ನ್, ಅಪ್ಪೋಳ್ ತಂಙಳ್ ಪರಞು : ಎಂಙಾಲುಂ ಏ ಪಿ ವಿಷಯಮರಿಞ್ಞ್ ತಂಙಳೆ ಖಬ್ರ್ ಸಂದೇಶತ್ತಿಲಾಕಟ್ಟೆ ಎನ್ನ್ ದುಆ ಚೈದಾಳ್ ಞಾನ್ ರಕ್ಷಪ್ಪೆಡಾನ್ ಅದ್ ಮದೀಯೆನ್ನ್
ಇಂಥಹ ಉಸ್ತಾದರ ದುಆ ಕೂಡ,ಅದಲ್ಲದೆ ನಿನ್ನೆಯಿಂದ ನಿನಗೆ ಬೇಕಾಗಿ ಓದಿ ಮುಗಿಸಿದ ಕುರಾನ್ ಝಿಕ್ರ್ಗಳು ಅನೇಕ .
ಇದೆಲ್ಲಕ್ಕಿಂತಮುಖ್ಯವಾಗಿ ನೀನು ಶರೀಅತ್ ಕಲಿತ ಆಲಿಮತ್ ಕೂಡ ಹೌದು, ನೀನು ಕಲಿತಂತಹಾ ಸಂಸ್ಥೆ ಮರ್ಕಝುಲ್ ಹದಾ ಕುಂಬ್ರ ಸಂಸ್ಥೆಯಲ್ಲಿ ಅದಲ್ಲದೆ ಮುಹಿಮ್ಮಾತ್ ಸಂಸ್ಥೆಯಿಂದ ಅದಲ್ಲದೆ ಅನೇಕ ಸಂಘಟನೆಗಳಿಂದ ನಿನಗೆ ಲಭಿಸಿದಂತಹಾ ಹದಿಯ ಇವೆಲ್ಲವೂ ಬರೆಯಲಸಾಧ್ಯ……!
ನಿನ್ನ ಮರಣ ವಾರ್ತೆ ಕೇಳಿದ ಕೂಡಲೇ ಮನಸ್ಸಲ್ಲಿ ಬಂದದ್ದು ನಿನ್ನೆ ನಗುಮುಖ…🥺ಏನೊಮ್ಮೆಯು ಕೂಡ ಕಾಣಲಾಗದ ಲೋಕಕ್ಕೆ ಒಂದು ಸಮೂಹವನ್ನು ಕಣ್ಣೀರಾಲಕ್ಕೆ ಹಾಕಿ ಹೋಗಿ ಬಿಟ್ಟಿಯಲ್ವ….
ಭರವಸೆಯ ಒಂಬತ್ತು ತಿಂಗಳುಗಳು ಕಂದನನ್ನು ಹೊತ್ತು ಆ ತಾಯಿಯು ಕಾಣಲಾಗದ ಆ ಕರಳ ಕುಡಿ ಇಂದು ಅನಾಥವಾಗಿದೆ….😰
ಕಳೆದ ದಿನಗಳಲ್ಲಿ ತನ್ನ ಪುಟ್ಟ 7 ವರ್ಷದ ಮಗಳೊಂದಿಗೆ ನಾಲಿದಾಡುತ್ತಾ ಇನ್ನೊಂದು ಕರುಳ ಕುಡಿಯನ್ನು ಹೆತ್ತು ತಂದು ಸಂಭ್ರಮಿಸುವ ಕನಸಿನೊಂದಿಗೆ ತೆರಳಿದ್ದ ಸೌಜಾ,,,,,ಅಲ್ಲಾಹನ ವಿಧಿಯೇ ಬೇರೆ….😟 ಆ ಕಂದಳ ಮುಖವನ್ನೂ ಕಾನಲಾಗದೇ ಎಲ್ಲವನ್ನೂ ಎಲ್ಲರನ್ನೂ ಬಿಟ್ಟು ಹೊರಟು ಹೋದಲು… ಮನೆಯಲ್ಲಿ ಹೆಣ್ಣು ಮಗು ಕಾಯುತ್ತಿದ್ದಾಳೆ ಉಮ್ಮಾ ಮನೆಗೆ ಬರುವುದನ್ನು…..
ನಾನು ದರ್ಸ್ ಕಳೆಯುವ ಕಾರಣ ನನ್ನಲ್ಲಿ ಬಹಳ ಪ್ರೀತಿಂದಾಗಿತ್ತು.. ಆ ಸಹೋದರಿಯ ವಾಟ್ಸಪ್ ನಿಂದ ನನ್ನ ಫೋನಿಗೆ ಬಂದ ಕೊನೆಯ ಮೆಸೇಜ್ ನೀ ಹಿಮಮಿ ಸನದ್ ಸ್ವೀಗರಿಕ್ಕುಂಬೋ ಞವ್ಮೋ ಬೆರ್ನ್ ನೋಕಾನ್, ಇನ್ಶಾ ಅಲ್ಲಾಹ್😭ಎಂದಾಗಿತ್ತು. ಸ್ವರ್ಗ ಲೋಕದಲ್ಲಿ ಒಂದು ಕೂಡಿಸು……🤲
ಸಹೋದರಿಯ ಕೆಲವು ದಿನಗಳ ಮುಂಚೆ ಹಾಕಿದ ಒಂದು ಸ್ಟೇಟಸ್ ಹಾಡು ಹೀಗಿತ್ತು…. ರಸೂಲುಲ್ಲಾಹಿಯೇ ಒನ್ನ್ ಕಾಣನಮ್, ಕಣ್ಣೆಡುಕ್ಕಾದೆ ನೋಕಿ ನೋಕಿ ನಿಲ್ಕ್ಕನಮ್
ಯಾ ಅಲ್ಲಾಹ್….ರಹ್ಮತಿನೆಡೆಗೆ ಯಾತ್ರೇಯಾದ ನಮ್ಮ ಸಹೋದರಿ ಸೌಜಾನ ನೀ ಖಬ್ರ್ ಸಂತೋಷ ಗೊಳಿಸು. ಸಹೋದರಿಯ ಮರಣ ವಾರ್ತೆಯಲ್ಲಿ ಕಣ್ಣೀರಿಗೊಳಗಾದ ಕುಟುಂಬಕ್ಕೆ ಸಹಿಸಲಿರುವ ಮನಸ್ಸು ನೀಡು…🤲ಸಣ್ಣ ಕಂದಮ್ಮಗಳಿಗೆ ಬರಕತ್ ನೀಡು.
ಸಹೋದರಿಯ ತಂದೆ ತಾಯಿ ಸಹೋದರ ಸಹೋದರಿಯರಿಗೆ ಹಾಗು ಕುಟುಂಬದರಿಗೂ ಸಹಿಸಲಿರುವ ಶಕ್ತಿನೀಡು ಅಲ್ಲಾಹ್……
ಸಹೋದರಿಗೆ ಬೇಕಾಗಿ ನಿಮ್ಮೆಲ್ಲರ ದುಆ ನಿರೀಕ್ಷೆಯೊಂದಿಗೆ ……..
ಬರಹ: ಅಬ್ದುಲ್ ಕರೀಂ ಟೀ ಎಂ ಸುಣ್ಣಮೂಲೆ




m
