Featured, ಅಂಕಣ, ಸ್ಥಳೀಯ

ಸುಳ್ಯ: ಹಿರಿಯ ಶ್ರಮಜೀವಿ, ಪರೋಪಕಾರಿ,ಅಬ್ದುಲ್ ಖಾದರ್ ನಿಧನ

ಸುಳ್ಯ : ಹಲವಾರು ವರ್ಷಗಳಿಂದ ಸುಳ್ಯದಲ್ಲಿ ಮಮತಾ,ಅರ್ದಶ, ಫೊಟೊ ಪ್ರೇಮ್ ವಕ್೯ ಶಾಪ್ ಇಟ್ಟುಕೊಂಡು ತನ್ನ ಹಿರಿಯ ವಯಸ್ಸಿನಲ್ಲೂ ಸ್ವಾವಲಂಬಿ ಯಾಗಿ ಜೀವಿಸಿದ್ದ ಸುಳ್ಯ ಅಂಬಟಡ್ಕ, ಪ್ರಸ್ತುತ ಜಯನಗರ ನಿವಾಸಿ ಟಿಂಬರ್ ಅಬ್ದುಲ್ ಖಾದರ್ (95) ಅವರು ಅಲ್ಪ ದಿನಗಳ ಅನಾರೋಗ್ಯ ದಿಂದ ಇಂದು (01/08/2025) ಜಯನಗರದಲ್ಲಿ ಇರುವ ಅವರ ಪುತ್ರ ಹಮೀದ್ ಮಮತಾ ಇವರ ನಿವಾಸದಲ್ಲಿ ನಿಧನರಾದರು. ಪರೋಪಕಾರಿಯಾಗಿ ಎಲ್ಲರೊಂದಿಗೆ ಬೆರೆತು ಬದುಕಿದ ಸ್ವಾವಲಂಬಿ,ಶ್ರದ್ಧಾಶೀಲ ವ್ಯಕ್ತಿಯಾಗಿದ್ದರು ಇವರು ಗಂಡು ಮಕ್ಕಳಾದ ಜಟ್ಟಿಪಳ್ಳ ಮಸೀದಿ ಮಾಜಿ ಅಧ್ಯಕ್ಷರಾದ ಮಹಮ್ಮದ್ ಎಸ್ ಎ ಎಸ್, ಸುಳ್ಯ ವರ್ತಕರ ಸಂಘದ ಮಾಜಿ ಕಾರ್ಯದರ್ಶಿ ಹಮೀದ್ ಮಮತಾ, ಮೊಹಿದ್ದೀನ್, ಶರೀಫ್ ಮತ್ತು ಪುತ್ರಿಯರಾದ ಫಾತಿಮಾ, ನಬೀಸ, ಬೀಬಿ, ರುಖಿಯಾ, ಸಫಿಯ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ. ಇವರ ಜನಾಝಾ ನಮಾಝ್ ನಾಳೆ ಮೊಗರ್ಪಣೆ ಜುಮಾ ಮಸೀದಿಯಲ್ಲಿ ನಡೆಯಲಿದೆ ಎಂದು ಕುಟುಂಬಸ್ಥರು ತಿಳಿಸಿರುತ್ತಾರೆ.

m

Related Posts