Featured, ಅಂಕಣ, ಲೇಖನ

ಭಾರತಾಂಬೆಯ ವೀರ ಪುತ್ರರು…

ಧರ್ಮೋ ರಕ್ಷತಿ ರಕ್ಷಿತಹ ಎಂಬ ಮಾತಿನಂತೆ ಭಾರತ ದೇಶದ ರಕ್ಷಣೆಯಲ್ಲಿ ನಮ್ಮ ವೀರ ಯೋಧರ ಪಾತ್ರ ಪ್ರಮುಖವಾದದ್ದು ಗಡಿಯಲ್ಲಿ ಚಳಿ ಮಳೆ ಗಾಳಿ ಯಾವುದನ್ನು ಲೆಕ್ಕಿಸದೆ ಶತ್ರು ದೇಶದಿಂದ ಬರುವ ಗುಂಡಿಗೆ ಎದೆಯೊಡ್ಡಿ ನಮ್ಮ ದೇಶವನ್ನು ರಕ್ಷಣೆ ಮಾಡುತ್ತಿರುವ ಯೋಧರೇ ನಮ್ಮ ಪಾಲಿಗೆ ದೇವರಿದ್ದಂತೆ ಇವತ್ತು ನಾವು ನೆಮ್ಮದಿಯಿಂದ ನಮ್ಮ ದಿನನಿತ್ಯದ ಕೆಲಸ ಕಾರ್ಯಗಳಲ್ಲಿತೊಡಗಿಕೊಳ್ಳುತ್ತಿದ್ದೇವೆಂದರೆ ಅದಕ್ಕೆ ಕಾರಣ ನಮ್ಮ ದೇಶದ ವೀರ ಪುತ್ರರು ತಮ್ಮ ಪ್ರಾಣವನ್ನು ಲೆಕ್ಕಿಸದೆ ಸಂಸಾರವನ್ನು ಬಿಟ್ಟು ಗಡಿಯಲ್ಲಿ ಕಾದಾಡಿ ಭಾರತ ಮಾತೆಗೆ ಪ್ರಾಣ ಅರ್ಪಿಸಿದ ಅದೆಷ್ಟೋ ವೀರ ಯೋಧರು ನಮ್ಮ ಮುಂದಿದ್ದಾರೆ ಉದಾ-ಮನೋಜ್ ಕುಮಾರ್ ಪಾಂಡೆ, ವಿಕ್ರಂ ಭಾತ್ರಾ, ಹನುಮಂತಪ್ಪ ಕೊಪ್ಪದ್, ಸಂದೀಪ್ ಉನ್ನಿಕೃಷ್ಣನ್ ಮುಂತಾದವರು ಇವತ್ತು ನಾವು ಕಾಣದ ದೇವರ ಪೊಟೋಗಳಿಗೆ ನಮಸ್ಕಾರ ಮಾಡುತ್ತೇವೆ , ಕ್ಷೀರಾಭಿಷೇಕ ಮಾಡುತ್ತೇವೆ ಆದರೆ ನನ್ನ ಪ್ರಕಾರ ನಮ್ಮ ದೇಶವನ್ನು ಕಾಯುತ್ತಿರುವ ಯೋಧರೇ ನಮ್ಮ ಪಾಲಿಗೆ ದೇವರಿದ್ದಂತೆ ನಾವು ಅವರಿಗೆ ನಮಸ್ಕರಿಸಿದರೆ ದೇವರಿಗೆ ನಮಸ್ಕರಿಸಿದಂತೆ ಆದರೆ ಇವತ್ತು ನಮ್ಮ ಪರಿಸ್ಥಿತಿ ಎಲ್ಲಿಗೆ ತಲುಪಿದೆ ಎಂದರೆ ಒಬ್ಬ ಸಿನಿಮಾ ಸ್ಟಾರ್ ನಮ್ಮೆದುರು ಬಂದಾಗ ಸೆಲ್ಪಿಗೆ ಮುಗಿ ಬೀಳುತ್ತೆವೆ ಆದರೆ ಒಬ್ಬ ಸೈನಿಕ ಸೇನೆಯಿಂದ ನಿವೃತ್ತರಾಗಿ ಬಂದಾಗ ಅವನಿಗೆ ಎದ್ದು ನಿಂತು ಗೌರವ ಸೂಚಿಸಲು ನಮಗೆ ಕಷ್ಟ ಆಗುತ್ತಿದೆ ನಾವ್ಯಾರೂ ಗಡಿಯಲ್ಲಿ ಒಬ್ಬ ಯೋಧನಿಗೆ ಎಷ್ಟು ಕಷ್ಟ ಇದೆ ಎಂದು ಯೋಚಿಸುವುದಿಲ್ಲ ಅಥವಾ ಇವತ್ತು ನಮ್ಮ ದೇಶದಲ್ಲಿ ಯೋಧರೇ ಇಲ್ಲದಿದ್ದರೆ ನಾವು ನೆಮ್ಮದಿಯಿಂದ ಜೀವನ ನಡೆಸಲು ಸಾಧ್ಯ ಇತ್ತಾ ಎಂದು ನಾವು ಸದಾ ನನ್ನ ಧರ್ಮ ಶ್ರೇಷ್ಠ ನನ್ನ ಕುಲ ಶ್ರೇಷ್ಠ ಎಂದು ಬಡಿದಾಡಿಕೊಳ್ಳುವುದರಲ್ಲೇ ಮುಳುಗಿರುತ್ತೇವೆ ಉದಾಹರಣೆಗೆ ಅಂದು ಸೀಯಾಚಿನ್ ನಲ್ಲಿ ನಡೆದ ಉಗ್ರರ ದಾಳಿಗೆ ಹಲವಾರು ಯೋಧರು ಸಿಲುಕಿಕೊಳ್ಳುತ್ತಾರೆ ಅಲ್ಲದೆ ಅಲ್ಲಿ ಹಿಮಪಾತ ಸಂಭವಿಸಿ ಹಲವಾರು ಯೋಧರು ಪ್ರಾಣ ಕಳೆದುಕೊಳ್ಳುತ್ತಾರೆ ಆದರೆ ನಮ್ಮ ಕರ್ನಾಟಕದ ಹೆಮ್ಮೆಯ ಪುತ್ರ ಹನುಮಂತಪ್ಪ ಕೊಪ್ಪದ್ ಅವರು ಹಿಮದಡಿಯಲ್ಲಿ ಸಿಲುಕಿ ಜೀವಂತವಾಗಿ ಇರುತ್ತಾರೆ ಸುಮಾರು ಎರಡು ದಿನಗಳ ಬಳಿಕ ಅವರನ್ನು ಹಿಮದಿಂದ ಹೊರ ತೆಗೆಯುತ್ತಾರೆ ಆಗ ಅವರು ಜೀವನ್ಮರಣ ಹೋರಾಟ ನಡೆಸುತ್ತಿರುತ್ತಾರೆ ತದ ನಂತರ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗುತ್ತದೆ ಅಲ್ಲಿ ನಮ್ಮ ಕರ್ನಾಟಕ ಹೆಮ್ಮೆಯ ಪುತ್ರ ಭಾರತ ಮಾತೆಯ ಮಡಿಲು ಸೇರುತ್ತಾರೆ ಆದರೆ ನಾವು ನಿಜವಾಗಿಯೂ ಯೋಚಿಸಬೇಕಾದ ವಿಷಯ ಅಂದ್ರೆ ನಮಗೆ ಒಂದು ತುಂಡು ಐಸ್ ಗಡ್ಡೆಯನ್ನು ಕೈ ಯಲ್ಲಿ ಹಿಡಿದುಕೊಳ್ಳಿಕೆ ಸಾಧ್ಯ ಆಗುವುದಿಲ್ಲ ಅಬ್ಬಬ್ಬಾ ಅಂದ್ರೆ ಹತ್ತು ಸೆಕೆಂಡ್ ಹಿಡ್ಕೊಳ್ಬಹುದಷ್ಟೆ ಅಂತದ್ರಲ್ಲಿ ಅವರು ಸುಮಾರು ಮೂರು ದಿನಗಳ ಕಾಲ ಮಂಜಿನಡಿಯಲ್ಲಿ ಇದ್ರು ಅಂದ್ರೆ ಅವರ ದೇಶ ಭಕ್ತಿ ಎಂತಹದಿರಬಹುದು ಇದು ನಮ್ಮ ದೇಶದ ಶಕ್ತಿ ಅಂದ್ರೆ ಇನ್ನು ಜನವರಿ 2 2016ರಲ್ಲಿ ಪಟಾನ್ ಕೋರ್ಟ್ ವಾಯು ನೆಲೆಯ ಮೇಲೆ ಉಗ್ರರ ದಾಳಿ ಮಾಡ್ತಾರೆ ಅಲ್ಲಿ ನಮ್ಮ ದೇಶದ ಇನ್ನೊಬ್ಬ ಯೋಧ ಪ್ರಾಣ ಕಳೆದುಕೊಳ್ಳುತ್ತಾರೆ ಅವರ ಹೆಸರು ನಿರಂಜನ್ ಉಗ್ರರು ಇರಿಸಿದ ಬಾಂಬ್ ಅನ್ನು ನಿಷ್ಕ್ರೀಯ ಗೊಳಿಸುವ ವೇಳೆ ಅದು ಸ್ಪೋಟ ಗೊಂಡು ವೀರ ಮರಣ ಹೊಂದುತ್ತಾರೆ ಪಾಪ ಆಗ ಅವರಿಗೆ ಇನ್ನೂ ಎಂಟು ತಿಂಗಳ ಮಗು ಆಗ ಅವರ ಕುಟುಂಬದವರ ನೋವು ಎಷ್ಟಿರಬೇಕು ಹೇಳಿ ಇನ್ನು ಮೇ 3,1999 ಕ್ಕೆ ಭಾರತ ಮತ್ತು ಪಾಕಿಸ್ತಾನದ ನಡುವೆ ಕಾರ್ಗಿಲ್ ಯುದ್ದ ನಡಿತದೆ ಪಾಪ ಆ ಸಂದರ್ಭದಲ್ಲಿ ಯೋಧರಿಗೆ ಈಗಿನ ಹಾಗೆ ಯಾವುದೇ ವ್ಯವಸ್ಥೆ ಇರಲಿಲ್ಲ ಮಣ ಭಾರದ ಸಾಮಾಗ್ರಿಗಳನ್ನು ಬೆನ್ನಿನ ಮೇಲೆ ಹೇರಿಕೊಂಡು ಗುಡ್ಡ ಹತ್ತಬೇಕು ಮೈ ಕೊರೆಯುವ ಚಳಿ ಬೇರೆ ಆದರೂ ನಮ್ಮ ಯೋಧರು ಪಾಕಿಸ್ತಾನದ ಬಂಕರ್ಗಳನ್ನು ನಾಶ ಮಾಡ್ತಾ ಬರ್ಬೇಕಿದ್ರೆ ಶತ್ರು ದೇಶದಿಂದ ಬಂದಂತಹ ಒಂದು ಗುಂಡು ಮನೋಜ್ ಕುಮಾರ್ ಪಾಂಡೆ ಎಂಬ ಸೈನಿಕನ ಬಲಗೈಯನ್ನು ಸೀಳಿಕೊಂಡು ಹೊರಗೆ ಹೋಗ್ತದೆ ಅವರ ಕೈ ಯಿಂದ ರಕ್ತ ಸೋರ್ತಾ ಇದ್ರು ಸಹ ತನ್ನ ದೇಶಕ್ಕೋಸ್ಕರ ಏನಾದರು ಮಾಡ್ಬೇಕೆಂಬ ಉದ್ದೇಶದಿಂದ ತನ್ನ ಎರಡು ಕೈ ಗಳನ್ನು ಬೇಲ್ಟ್ ನಿಂದ ಕಟ್ಟಿಕೊಂಡು ಒಂದು ಕೈ ಯಲ್ಲಿ ಹೋರಾಡಿ ಶತ್ರುಗಳನ್ನು ಹೊಡೆದುರುಳಿಸಿದ ಅವರಿಗೆ ವೀರ ಸ್ವರ್ಗ ಪ್ರಾಪ್ತಿಯಾಗುತ್ತದೆ 2008 ರಲ್ಲಿ ತಾಜ್ ಹೋಟೆಲ್ ನ ಮೇಲೆ ಉಗ್ರರು ದಾಳಿ ಮಾಡ್ತಾರೆ ಸಾವಿರಾರು ಜನರ ಮಾರಣ ಹೋಮ ನಡಿತದೆ ಅಲ್ಲಿಗೆ ಬಂದ ವೀರ ಯೋಧ ಸಂದೀಪ್ ಉನ್ನಿಕೃಷ್ಣನ್ ತರುಣ ತಾನೇ ಮುಂದೆ ನಿಂತು ಮಹಡಿಯಲ್ಲಿದ್ದ ಅದೆಷ್ಟೋ ಜನರನ್ನು ರಕ್ಷಣೆ ಮಾಡ್ತಾರೆ ತಮ್ಮ ಪ್ರಾಣವನ್ನು ಭಾರತಾಂಬೆಗೆ ಅರ್ಪಿಸುತ್ತಾರೆ ಆ ವಯಸ್ಸಿನಲ್ಲೇ ಅವರ ದೇಶ ಪ್ರೇಮವನ್ನು ಮೆಚ್ಚಲೇ ಬೇಕು ಇನ್ನು ಮತ್ತೊಬ ನಮ್ಮ ವೀರ ಯೋಧ ವಿಕ್ರಂ ಭಾತ್ರಾ ಕಾರ್ಗಿಲ್ ಯುದ್ದ ಮಾಡುತ್ತಿರುವಾಗ ಯಾರೊ ಒಬ್ಬ ಪಾಕಿಸ್ತಾನಿ ಸೈನಿಕ ಏ ಹೇಡಿ ನಿನ್ನ ಪ್ರಾಣ ಉಳಿಸಿಕೊಳ್ಳವ ಮನಸ್ಸಿದ್ದರೆ ಮರಳಿ ಹೋಗು ಎಂದು ಹೇಳುತ್ತಾನೆ ಆಗ ಭಾತ್ರಾ ಅವನಿಗೆ ಗುರಿ ಇಟ್ಟು ಅವನನ್ನು ಹೊಡೆದುರುಳಿಸುತ್ತಾರೆ. ಅಲ್ಲದೆ ಸಂತೋಷದಿಂದ ‘ಏ ದಿಲ್ಲ್ ರಹೇಂಗೆ ಮೋರ್’ ಎಂದು ಘೋಷಣೆ ಕೂಗುತ್ತಾರೆ. ವಿಕ್ರಂ ಭಾತ್ರಾ ರಂತಹ ಅಪ್ರತಿಮ ದೇಶಪ್ರೇಮಿಯನ್ನು ನಾವು ಮೆಚ್ಚಲೇ ಬೇಕು. ಆದರೆ ಮುಂದೊಂದು ದಿನ ಅವರು ಅದೇ ಯುದ್ಧಭೂಮಿಯಲ್ಲಿ ಶತ್ರುಗಳೊಂದಿಗೆ ಕಾದಾಡುತ್ತಿರುವಾಗ ಶತ್ರು ದೇಶದ ಗುಂಡಿಗೆ ಬಲಿಯಾಗುತ್ತಾರೆ. ಅವರ ಶವವನ್ನು ಮನೆಗೆ ತೆಗೆದುಕೊಂಡು ಹೋದಾಗ ಅವರ ತಂದೆ ತಾಯಿ ಉಕ್ಕಿ ಬರುವಂತಹ ದುಃಖವನ್ನು ತಡೆದುಕೊಂಡು ನನ್ನ ಮಗ ದೇಶಕ್ಕಾಗಿ ಪ್ರಾಣ ಕೊಟ್ಟಿದ್ದಾನೆ ನನಗೆ ಅವನ ಬಗ್ಗೆ ಹೆಮ್ಮೆ ಇದೆ ಎಂದು ಹೇಳುತ್ತಾರೆ.

ನಮ್ಮ ದೇಶದಲ್ಲಿ ಇವತ್ತು ಒಬ್ಬ ಸಿನಿಮಾ ನಟ ಸತ್ತರೆ ಮಾದ್ಯಮ ದವರು ತಿಂಗಳುಗಟ್ಟಲೆ ಸುದ್ದಿ ಮಾಡುತ್ತಾರೆ ಅಳುತ್ತಾರೆ ಆದರೆ ಒಬ್ಬ ಸೈನಿಕ ಸತ್ತರೆ ಯಾರು ಸುದ್ದಿ ಮಾಡುವುದಿಲ್ಲ.ಇದೊಂದು ದೊಡ್ಡ ದುರಂತವೇ ಸರಿ. ಒಟ್ಟಿನಲ್ಲಿ ಹೇಳುವುದಾದರೆ ಯುವ ಜನರೆಲ್ಲಾ ಜಾತಿ ಮತ ಧರ್ಮ ಮರೆತು ಒಂದಾಗಬೇಕು ಪ್ರತಿಯೊಬ್ಬರ ಮನದಲ್ಲೂ ದೇಶ ಸೇವಾಭಾವ ಮೂಡಬೇಕು ಕಾಣದ ದೇವರಿಗೆ ನಮಿಸುವ ಬದಲು ನಮ್ಮ ಕಣ್ಣಿಗೆ ಕಾಣುವ ವೀರ ಯೋಧ ರಿಗೆ ನಮಿಸೋಣ ರಾಷ್ಟ್ರ ನಿರ್ಮಾಣದಲ್ಲಿ ಯುವಜನತೆ ಯ ಪಾತ್ರ ಪ್ರಮುಖವಾದದ್ದು ಆದರೆ ಈಗಿನ ಪರಿಸ್ಥಿತಿ ಪ್ರತಿಯೊಂದು ಮಕ್ಕಳ ಕೈಯಲ್ಲೂ ಮೊಬೈಲ್ ಅಪಾಯಕಾರಿ ಗೇಮ್ ಆಡಿಕೊಂಡು ಸಮಯ ವ್ಯರ್ಥ ಮಾಡುತ್ತಾರೆ ಹಾಗಾದರೆ ನನ್ನದೊಂದು ಪ್ರಶ್ನೆ ದೇಶ ಕಟ್ಟುವವರು ಯಾರ?ಪಬ್ಜಿ ಬ್ಲೂ ವಿಲ್ ನಂತಹ ಗೇಮ್ಸ್ ಆಡುವ ಮಕ್ಕಳು ಮಾನಸಿಕ ವಾಗಿ ಕುಗ್ಗಿ ಹೋಗುತ್ತಾರೆ ಹೀಗಾದರೆ ದೇಶದ ಕತೆ ಏನು?ಇದರ ಬಗ್ಗೆ ಪ್ರತಿಯೊಬ್ಬರಲ್ಲೂ ಅರಿವು ಮೂಡಬೇಕು ಎಲ್ಲರು ಒಗ್ಗಟ್ಟಾಗಿ ರಾಷ್ಟ್ರ ನಿರ್ಮಾಣದಲ್ಲಿ ಕೈ ಜೋಡಿಸಬೇಕೆಂಬುದೇ ನನ್ನ ಅಭಿಪ್ರಾಯ.

ಬರಹ:- ಪ್ರಾಪ್ತಿ ಗೌಡ

m

Related Posts