ದಕ್ಷಿಣ ಕನ್ನಡ ಎಂಬುದು ಬಹಳ ಇತಿಹಾಸವನ್ನು ಹೊಂದಿರುವ ಜಿಲ್ಲೆಯಾಗಿದೆ. ಶೈಕ್ಷಣಿಕವಾಗಿ, ಸಾಮಾಜಿಕವಾಗಿ,ಧಾರ್ಮಿಕವಾಗಿ ಕರ್ನಾಟಕ ರಾಜ್ಯಕ್ಕೆ ಅಲ್ಲದೆ ಇಡೀ ವಿಶ್ವಕ್ಕೆ ಸಾವಿರಾರು ಕೊಡುಗೆಯನ್ನು ನೀಡಿದ ಜಿಲ್ಲೆಯಾಗಿದೆ. ಆದರೆ ಪ್ರಸ್ತುತ ಎಲ್ಲಾ ಇತಿಹಾಸವನ್ನು ಮರೆಮಾಚುವ ಕೃತ್ಯಗಳು ತೆರೆಯ ಮರೆಯಲ್ಲಿ ಹಾಗೂ ಪ್ರತ್ಯಕ್ಷವಾಗಿ ನಡೆಯುತ್ತಿದೆ.ದಕ್ಷಿಣ ಕನ್ನಡ ಜಿಲ್ಲೆಯು ಭಾರಿ ಸ್ವಹಾರ್ದತೆಗೆ ಹೆಸರುವಾಸಿಯಾಗಿದ್ದ ಜಿಲ್ಲೆಯಾಗಿತ್ತು. ಆದರೆ ಇತ್ತೀಚಿನ ಕೆಲವು ಅಹಿತಕರ ಘಟನೆಯಿಂದಾಗಿ ಈ ಸೌಹಾರ್ದತೆಯು ಇತಿಹಾಸದ ಪುಟ ಸೇರಲು ತಯಾರು ಮಾಡುತ್ತಿದೆ.ಅದಕ್ಕೆ ಮುಖ್ಯ ಕಾರಣವಾಗಿದೆ ಕೋಮುವಾದ. ಕೋಮುವಾದ ಎಂದರೆ ಒಂದು ಧರ್ಮ ಮತ್ತೊಂದು ಧರ್ಮದವರನ್ನು ಹೀಯಾಳಿಸುವುದು ಎಂಬುದಾಗಿದೆ.
ಪ್ರಸ್ತುತ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವಿದೆ. ಕಾಂಗ್ರೆಸ್ ಸರ್ಕಾರ ಇವತ್ತು ಅಧಿಕಾರಕ್ಕೆ ಏರಲು ಮುಖ್ಯ ಕಾರಣಕರ್ತರು ಮುಸಲ್ಮಾನರಾಗಿದ್ದಾರೆ. ಆದರೆ ಇವತ್ತು ಸರ್ಕಾರ ಈ ಸಮುದಾಯವನ್ನು ಕೇವಲ ವೋಟ್ ಬ್ಯಾಂಕಿಗಾಗಿ ಮಾತ್ರ ಉಪಯೋಗಿಸಿದ ರೀತಿಯಲ್ಲಿ ವರ್ತಿಸುವುದನ್ನು ಕಾಣುತ್ತಿದೆ. ಯಾವುದೇ ರೀತಿಯಲ್ಲಿ ಧರ್ಮಗಳು ಭಯೋತ್ಪಾದನೆ,ಕೊಲೆ, ದಬ್ಬಾಳಿಕೆ,ಹಿಂಸೆ ಮುಂತಾದವುಗಳಿಗೆ ಪ್ರಚೋದನೆ ಅಥವಾ ಪ್ರೇರಣೆ ನೀಡುವುದಿಲ್ಲ.ಆದರೂ ಕೂಡ ಇಸ್ಲಾಂ ಧರ್ಮದ ಮೇಲೆ ಇಂತಹ ಕೆಟ್ಟ ಆರೋಪ ಪ್ರಚಲಿತದಲ್ಲಿದೆ.
ಇತ್ತೀಚಿನ ದಿನ ದುಷ್ಕರ್ಮಿಗಳಿಂದ ಭೀಕರವಾಗಿ ಕೊಲೆ ಮಾಡಲ್ಪಟ್ಟ ಅಬ್ದುಲ್ ರಹ್ಮಾನ್ ಎಂಬ ಅಮಾಯಕನ ಸಾವು ಇಡಿ ರಾಜ್ಯವನ್ನೇ ಬಿಚ್ಚಿ ಮಾಡಿದೆ. ಕುಟುಂಬಕ್ಕೆ ಆಧಾರಸ್ತಂಭ ವಾಗಿದ್ದ ಯುವಕನನ್ನು ಕಳೆದುಕೊಂಡಾಗ ಇರುವ ನೋವು-ಸಂಕಟವನ್ನು ನಾವು ಅರ್ಥ ಮಾಡಿಕೊಳ್ಳಬೇಕಾಗಿದೆ. ವಿಶ್ವಾಸ ಯೋಗ್ಯರೆಂದು ಭಾವಿಸಿದ ಗೆಳೆಯರಿಂದಲೇ ಇಂತಹ ಅಹಿತಕರ ಕೃತ್ಯ ನಡೆದಿದೆ ಎಂದು ಹೇಳುವಾಗ ನಂಬಲು ಸಾಧ್ಯವಾಗುತ್ತಿಲ್ಲ. ಇದಕ್ಕೆಲ್ಲಾ ಕಾರಣವೇನೆಂದರೆ ಯುವಕರಿಗೆ ಪ್ರಚೋದನೆ ನೀಡುವ ಭಾಷಣವಾಗಿದೆ. ಸರ್ಕಾರವು ಆದಷ್ಟು ಬೇಗ ಅಂತಹ ಭಾಷಣಕಾರರ ನ್ನು ಬಂಧಿಸುವ ಕೆಲಸವನ್ನು ಮಾಡಬೇಕಾಗಿದೆ.ಕೇವಲ ಪೊಲೀಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿದ ಕೂಡಲೇ ಆರೋಪಿಗಳು ಸಿಗುವುದಿಲ್ಲ.ಕಠಿಣವಾದ ಕಾನೂನನ್ನು ಜಾರಿಗೆ ತರಬೇಕಾಗಿದೆ.
ಇಲ್ಲಿ ನಮ್ಮ ಭಾರತ ದೇಶದಲ್ಲಿ ಸುಭದ್ರ ವಾದ ಸಂವಿಧಾನವಿದೆ.ಆದರೆ ಅದರ ನಿಯಮಗಳನ್ನೂ ಲೆಕ್ಕಿಸದೆ ಯಾವುದೇ ಪರವಾನಗಿ ಇಲ್ಲದೆ ಸುಖಾ ಸುಮ್ಮನೆ ಕೋಮು ಧೃವೀಕರಣ ಮಾಡುವ ಕೆಲಸವನ್ನು ಕೆಲವು ಸಂಘ ಶಕ್ತಿಗಳು ಮಾಡುತ್ತಿವೆ.ಸರ್ಕಾರ ಮೊತ್ತ ಮೊದಲು ಮಾಡಬೇಕಾಗಿರುವುದು ಸಂವಿದಾನದ ವಿರುದ್ಧ ಮಾತನಾಡುವವರ ವಿರುದ್ಧ ಯಾವುದೇ ಕನಿಕರ
ತೋರದೆ ನಿರ್ಧಾಕ್ಷೀಣ ಕ್ರಮಕೈಗೊಳ್ಳಬೇಕಿದೆ.ಜಾತ್ಯತೀತತೆಯನ್ನು ನಂಬಿರುವ ಒಂದು ಸಮುದಾಯವು ಕೇವಲ ಮತಕ್ಕೆ ಮಾತ್ರ ಸೀಮಿತವಾಗದೆಯಿರಲಿ.
ಇಲ್ಲವಾದರೆ ಮುಂದಿನ ಚುನಾವಣೆಯ ವೇಳೆ ಪ್ರಸ್ತುತ ಸರ್ಕಾರದ ಪತನ ಖಚಿತವಾಗುತ್ತದೆ.
ರಾಜ್ಯದಲ್ಲಿ ಪಂಚ ಗ್ಯಾರಂಟಿಗಳನ್ನು ಜಾರಿ ಮಾಡಲು ಸರ್ಕಾರ ಎಷ್ಟು ಆಸಕ್ತಿ ತೋರುತ್ತಿದೆಯೋ ಅದೇ ರೀತಿ ಕರಾವಳಿ ಪ್ರದೇಶಗಳಿಗೆ
ಪ್ರತ್ಯೇಕ ಗ್ಯಾರಂಟಿ ಎಂಬಂತೆ ಕೋಮುವಾದವನ್ನು ತಡೆಗಟ್ಟಿ ಸುಭದ್ರವಾಗಿ ಶಾಂತಿಯುತವಾಗಿ ಸೌಹಾರ್ದತೆಯಿಂದ ಬದುಕುವ ವಾತಾವರಣವನ್ನು ಸರ್ಕಾರ ಮತ್ತು ಕಾನೂನು ನೀಡಲಿ.
ಯಾವುದೋ ಪ್ರಚೋದನಕಾರಿ ಭಾಷಣಗಳಿಂದ ಕೊಲೆಗೆಯಲ್ಪಡುವವರು ಸಮಾಜದ ಅಮಾಯಕರಾಗಿದ್ದಾರೆ.ಆದುದರಿಂದ ಈ ರೀತಿಯ ಎಲ್ಲಾ ಅಹಿತಕರ ಘಟನೆಗಳು ಸೂಕ್ಷ್ಮವಾಗಿ ತನಿಖೆ ನಡೆಸಿ ತಪ್ಪಿತಸ್ಥರು ಎಷ್ಟೇ ದೊಡ್ಡ ಮಟ್ಟದಲ್ಲಿರುವವರಾದರೂ ಸರಿ ಕಾನೂನನ್ನು ಜಾರಿಗೆ ತರುವಲ್ಲಿ ಸರ್ಕಾರ ಮೀನಾಮೇಷ ಎನಿಸಕೂಡದು.ಈ ರೀತಿಯ ಕಾನೂನುಗಳೇ ಕಳೆದುಹೋದ ಕುಟುಂಬಗಳಿಗೆ ನೀಡುವ ದೊಡ್ಡ ಪರಿಹಾರವೂ ಹೌದು.
ಸರ್ವ ಜನಾಂಗದ ಶಾಂತಿಯ ತೋಟ ರಸಿಕರ ಕಂಗಳ ಸೆಳೆಯುವ ನೋಟ…ಎಂಬ ಕುವೆಂಪುರವರ ರಚಿಸಿದ ನಾಡಗೀತೆ ಕೇವಲ ಒಂದು ನಾಡಗೀತೆಯಾಗಿರದೆ ಅದು ಈ ನಾಡಿನ ಪ್ರತೀಕವಾಗಿ ಮಾರ್ಪಡಲಿ.ಎಲ್ಲಾರೂ ಒಂದಾಗಿ ಕಳೆದು ಹೋದ ಆ ಸೌಹಾರ್ದತೆಯನ್ನು ಮತ್ತೆ ಪಡೆಯೋಣ,ಸಾಮರಸ್ಯದ ಬದುಕನ್ನು ಕಟ್ಟಿಕೊಳ್ಳೋಣ.
ಲೇಖಕರು:ಆಶಿಕ್ ಕೊಡಗು





m
