Featured, ಇತರೆ, ಸ್ಥಳೀಯ

ಕಾಸರಗೋಡು : ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಟಿ ಎಂ ಶಾಹಿದ್ ತೆಕ್ಕಿಲ್ ರವರ ಕಾರಿಗೆ ಹಿಂದಿನಿಂದ ಫಾರ್ಚೂನರ್ ಕಾರು ಡಿಕ್ಕಿ

ಅಪಘಾತದ ತೀವ್ರತೆಗೆ ತೆರೆದುಕೊಂಡ ಫಾರ್ಚೂನರ್ ಕಾರಿನ ಏರ್ ಬ್ಯಾಗ್ ಗಳು

ಕಾಸರಗೋಡು : ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಟಿ ಎಂ ಶಾಹಿದ್ ತೆಕ್ಕಿಲ್ ಹಾಗೂ ಕಾಂಗ್ರೆಸ್ ಮುಖಂಡರಾದ ಇಕ್ಬಾಲ್ ಎಲಿಮಲೆ ಮತ್ತು ಸುಳ್ಯ ನಗರ ಪಂಚಾಯತ್ ಸದಸ್ಯ ಸಿದ್ದಿಕ್ ಕ್ಕೊಕ್ಕೊ ಇವರು ಸಂಚರಿಸುತ್ತಿದ್ದ ಇನ್ನೋವ ಐಕ್ರಾಸ್ ಕಾರಿಗೆ ಹಿಂದಿನಿಂದ ರಭಸವಾಗಿ ಬಂದ ಫಾರ್ಚೂನರ್ ಕಾರು ಡಿಕ್ಕಿ ಹೊಡೆದು ಎರಡು ಕಾರುಗಳು ಸಂಪೂರ್ಣ ಜಖಂ ಗೊಂಡಿದೆ.

ಅಪಘಾತದ ತೀವ್ರತೆಗೆ ಫಾರ್ಚೂನರ್ ಕಾರಿನ ನಾಲ್ಕು ಏರ್ ಬ್ಯಾಗ್ ಗಳು ತೆರದುಕೊಂಡಿದ್ದು ಅದೃಷ್ಟವಷಾತ್ ಎರಡು ಕಾರಿನಲ್ಲಿ ಸಂಚರಿಸುತ್ತಿದ್ದ ಯಾರಿಗೂ ಗಾಯಗಳಾದ ಬಗ್ಗೆ ವರದಿಯಾಗಿಲ್ಲ.

ಟಿ.ಎಂ ಶಾಹಿದ್ ಮತ್ತು ಸಂಗಡಿಗರು ಇಂದು ಕಾಸರಗೋಡು ಪೆರಿಯಾದಲ್ಲಿ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಭಾಗಿಯಾದ ಕಾರ್ಯಕ್ರಮದಲ್ಲಿ ಭಾಗವಹಿಸಲು ತೆರಳಿದ್ದರು.

ಶಾಹಿದ್ ರವರ ಕಾರಿಗೆ ಡಿಕ್ಕಿ ಹೊಡೆದ ಫಾರ್ಚೂನರ್ ಕಾರು ಶಾಹಿದ್ ರವರ ನಿಕಟ ಸಂಬಂಧಿ ಹಾಗೂ ಶಾಸಕ ಎನ್ ಹಾರಿಸ್ ರವರ ಅಳಿಯ ಇಕ್ಬಾಲ್ ಚಟ್ಟಂಚಾಲ್  ರವರದ್ದು ಎಂದು ತಿಳಿದುಬಂದಿದೆ

ಟಿ ಎಂ ಶಾಹಿದ್, ಇಕ್ಬಾಲ್ ಎಲಿಮಲೆ,ಸಿದ್ದಿಕ್ ಕ್ಕೊಕ್ಕೊ ಇವರು ಸುಳ್ಯಕ್ಕೆ ಮರಳಿದ್ದಾರೆ

m

 

Related Posts