Featured, ಇತರೆ, ಸ್ಥಳೀಯ

ಪುತ್ತೂರು : ಉಧ್ಯಮಿ, ಶಿಕ್ಷಣ ಪ್ರೇಮಿ, ಸಿದ್ದೀಖ್ ಹಾಜಿ ಅರಫಾ ನಿಧನ

ಪುತ್ತೂರು

ಉಪ್ಪಿನಂಗಡಿ : ಉದ್ಯಮಿ, ಶಿಕ್ಷಣ ಪ್ರೇಮಿ, ಹಲವು ಸಾಮಾಜಿಕ ಧಾರ್ಮಿಕ, ಸಂಘ ಸಂಸ್ಥೆ ಯಲ್ಲಿ ದುಡಿದ ಅರಫಾ ಟ್ರಾವೆಲ್ಸ್, ಅರಫಾ ವಿದ್ಯಾಸಂಸ್ಥೆಯ ಸ್ಥಾಪಕರೂ,ಉಮರುಲ್ ಫಾರೂಖ್ ಜುಮಾ ಮಸ್ಜಿದ್ ನೆಕ್ಕಿಲಾಡಿ ಇದರ ಆಡಳಿತ ಸಮಿತಿಯ ಉಪಾಧ್ಯಕ್ಷರೂ ಆದ ಸಿದ್ದೀಖ್ ಹಾಜಿ ಅರಫಾ ಇವರು ಅಲ್ಪ ದಿನದ ಅನಾರೋಗ್ಯ ದಿಂದ ಇಂದು ನಿಧನರಾದರು
ಸ್ಥಳೀಯವಾಗಿ ಜನಾನುರಾಗಿ ಜನರ ಪ್ರೀತಿಪಾತ್ರ ಗಳಿಸಿದ ಇವರ ಅಗಲಿಕೆ ಸಮಾಜಕ್ಕೆ ಬಾರಿ ನಷ್ಟ ಎನ್ನ ಬಹುದು
ಸುಳ್ಯ ಮೂಲದ ಮಹಿಳೆಯನ್ನು ವಿವಾಹವಾದ ಇವರು ಪತ್ನಿ, ಐದು ಗಂಡು, ಒಂದು ಹೆಣ್ಣು ಮಗಳು ಹಾಗೂ ಕುಟುಂಬಸ್ಥರು,ಬಂಧು ಬಳಗ ಮತ್ತು ಅಪಾರ ಅಭಿಮಾನಿ ವೃಂದವನ್ನು ಅಗಲಿದ್ದಾರೆ
ಜನಾಝಾ ನಮಾಝ್ ಅಸರ್ ನಮಾಜಿನ ನಂತರ ನೆಕ್ಕಿಲಾಡಿ ಜುಮಾ ಮಸ್ಜಿದ್ ನಲ್ಲಿ ನೆರವೇರಲಿದೆ ನಂತರ ಧಫನ ಕ್ರಿಯೆ ಕಾರ್ಯ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ

m

 

Related Posts